Blog Archive

ಹದಗೆಟ್ಟಿರುವ ರಾಷ್ಟ್ರೀಯ ಹೆದ್ದಾರಿ ದುರಸ್ತಿ : ಯುವ‌ಮೋರ್ಚಾ ಕಾರ್ಯಕರ್ತರಿಂದ ರಸ್ತೆ ತಡೆ

Monday, September 16th, 2019
kasaragod

ಕಾಸರಗೋಡು : ತಲಪಾಡಿ ಯಿಂದ ಕಾಸರಗೋಡು ತನಕ ಸಂಪೂರ್ಣ ಹದಗೆಟ್ಟಿರುವ ರಾಷ್ಟ್ರೀಯ ಹೆದ್ದಾರಿಯ ದುರಸ್ತಿ ನಡೆಸದೆ ಜನತೆಯನ್ನು ಸಂಕಷ್ಟಕ್ಕೆ ತಳ್ಳಿರುವ ಕೇರಳದ ಎಡರಂಗ ಸರಕಾರದ ವಿರುದ್ಧ ಹಾಗೂ ರಾಷ್ಟ್ರೀಯ ಹೆದ್ದಾರಿ – 66 ದುರಸ್ತಿ ಕಾಮಗಾರಿಗೆ ಶೀಘ್ರ ಕ್ರಮಕೈಗೊಳ್ಳ ಬೇಕೆಂದು ಆಗ್ರಹಿಸಿ ಯುವ‌ಮೋರ್ಚಾ ಕಾರ್ಯಕರ್ತರು ಕಾಸರಗೋಡಿನ ಅಶ್ವಿ‌ನಿ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಚಳುವಳಿ  ನಡೆಸಿದರು. ರಸ್ತೆ ತಡೆ ಚಳವಳಿಯನ್ನು ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ವಿಜಯ ಕುಮಾರ್‌ ರೈ ಅವರು ಉದ್ಘಾಟಿಸಿದರು. ಕೇಂದ್ರ ಸರಕಾರ ಈಗಾಗಲೇ ತಲಪಾಡಿ […]

ಆಪ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ತಲಪಾಡಿಯಲ್ಲಿ ಬಂಧನ

Friday, July 12th, 2019
Cricketing Betting

ಮಂಗಳೂರು, : ಲೊಕ್ಯಾಂಟೋ ಆ್ಯಾಪ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ತಲಪಾಡಿ ಸಮೀಪ ಬಂಧಿಸಿದ್ದಾರೆ. ಬಂಧಿತರನ್ನು ತಲಪಾಡಿಯ ನಾರ್ಲದ ಸಂತು ಯಾನೆ ಸಂತೋಷ್ ಶೆಟ್ಟಿ (40) ಮತ್ತು ಜೀವನ್ (22) ಎಂದು ಗುರುತಿಸಲಾಗಿದೆ. ಸಂತೋಷ್ ಮಂಗಳೂರಿನ ಬೆಂದೂರ್’ವೆಲ್ ಸಮೀಪವಿರುವ ಸ್ಕಂದ ಬೇಕರಿಯ ಮಾಲೀಕರಾಗಿದ್ದಾರೆ. ಬಂಧಿತರಿಂದ ಮೊಬೈಲ್ ಆಪ್, ಕಂಪ್ಯೂಟರ್, ಕ್ರೇಟಾ ಕಾರು ಸೇರಿದಂತೆ ರೂ.70,000 ನಗದು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಆರೋಪಿ ಸಂತೋಷ್ ಶೆಟ್ಟಿ ಲೊಕ್ಯಾಂಟೋ ಆ್ಯಾಪ್ ಮೂಲಕ ಬೆಟ್ಟಿಂಗ್ ವ್ಯವಹಾರದಲ್ಲಿ ಯುವಕರನ್ನು ತೊಡಗಿಸುತ್ತಿದ್ದರೆನ್ನಲಾಗಿದೆ. […]

ತಲಪಾಡಿ : ಗ್ಯಾಸ್ ಟ್ಯಾಂಕರ್ ನಲ್ಲಿ ಸೋರಿಕೆ ಸಂಚಾರ ಅಸ್ಥವ್ಯಸ್ಥ

Tuesday, March 12th, 2019
Gas-Tanker

ಮಂಜೇಶ್ವರ : ರಾಷ್ಟ್ರೀಯ ಹೆದ್ದಾರಿ 66 ರ ತಲಪಾಡಿ ಹಳೆ ಆರ್.ಟಿ.ಒ ಬಳಿ ನಿಲ್ಲಿಸಿದ್ದ ಗ್ಯಾಸ್ ಟ್ಯಾಂಕರ್ ಒಂದರಿಂದ ಗ್ಯಾಸ್ ಸೋರಿಕೆ  ಉಂಟಾದ ಘಟನೆ ಮಂಗಳವಾರ ಸಂಜೆ 6 ಘಂಟೆಯ ಸುಮಾರಿಗೆ  ನಡೆದಿದೆ. ಮಂಜೇಶ್ವರ ಪೊಲೀಸರಿಗೆ ಹಾಗೂ ಅಗ್ನಿ ಶಾಮಕ ದಳಕ್ಕೆ ಸ್ಥಳೀಯರು ಮಾಹಿತಿ ನೀಡಿರುವುದರಿಂದ ಭಾರೀ ಅನಾಹುತವೊಂದು ತಪ್ಪಿದೆ. ಘಟನೆ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸುರಕ್ಷಾ ಕಾರ್ಯ ನಡೆಸಿದ್ದಾರೆ. ಗ್ಯಾಸ್ ಸೋರಿಕೆಯಿಂದಾಗಿ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ಅಸ್ಥವ್ಯಸ್ಥಗೊಂಡಿತ್ತು.

ಸಿಟಿ ಬಸ್ ಗಳಿಗೆ ಸಿಸಿ ಕೆಮರಾ..ಪ್ರಯಾಣಿಕರ ಒತ್ತಾಯ!

Tuesday, July 31st, 2018
city-bus

ಮಂಗಳೂರು: ಸರ್‌… ನಗರದಲ್ಲಿ ಓಡಾಡುವ ಅನೇಕ ಖಾಸಗಿ ಸಿಟಿ ಬಸ್‌ಗಳಲ್ಲಿ ನಿರ್ವಾಹಕರು ಟಿಕೆಟ್‌ ನೀಡುವುದಿಲ್ಲ. ಫುಟ್‌ಬೋರ್ಡ್‌ನಲ್ಲಿ ವಿದ್ಯಾರ್ಥಿಗಳು ನೇತಾಡುತ್ತಿರುತ್ತಾರೆ. ಇದು ಗೊತ್ತಿದ್ದರೂ, ನಿರ್ವಾಹಕರು ಚಕಾರ ಎತ್ತುವುದಿಲ್ಲ’ ಎಂದು ಟ್ರಾಫಿಕ್‌ ಪೊಲೀಸ್‌, ಸಾರಿಗೆ ಇಲಾಖೆಗೆ ಬರುವ ದೂರುಗಳ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಖಾಸಗಿ ಸಿಟಿ ಬಸ್‌ ಮಾಲಕರ ಸಂಘ ಈಗ ಚಿಂತಿಸಿದೆ. ಖಾಸಗಿ ಸಿಟಿ ಬಸ್‌ಗಳಲ್ಲಿ ನಡೆಯುವ ಅಕ್ರಮ ಗಳಿಗೆ ಕಡಿವಾಣ ಹಾಕುವ ಸಲುವಾಗಿ ಬಸ್‌ಗಳಲ್ಲಿ ಸಿಸಿ ಕೆಮರಾ ಕಣ್ಗಾವಲನ್ನಿಡಬೇಕು ಎಂದು ಪ್ರಯಾಣಿಕರ […]

ಕಾರು ಮತ್ತು ಸ್ಕೂಟರ್ ನಡುವೆ ಅಪಘಾತ..ಸ್ಕೂಟರ್ ಸವಾರ ಸಾವು!

Monday, June 18th, 2018
accident

ಮಂಗಳೂರು: ಇಲ್ಲಿನ ತೊಕ್ಕೊಟ್ಟು ಬಳಿ ಕಾರು ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ಇತ್ತೀಚೆಗಷ್ಟೇ ವಿದೇಶದಿಂದ ಆಗಮಿಸಿದ್ದ ಸ್ಕೂಟರ್ ಸವಾರ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ. ತಲಪಾಡಿ ತಚ್ಚಣಿ ನಿವಾಸಿ ಮನೋಹರ್ ಬೆಳ್ಚಡ ( 50 ) ಸಾವನ್ನಪ್ಪಿರುವ ವ್ಯಕ್ತಿ. ಮನೋಹರ್ ಬೆಳ್ಚಡ ಇತ್ತೀಚೆಗಷ್ಟೇ ವಿದೇಶದಿಂದ ಬಂದು ಎರಡು ದಿನಗಳ ಹಿಂದೆ ಹೊಸ ಮನೆ ಗೃಹಪ್ರವೇಶ ಮಾಡಿದ್ದರು. ಘಟನೆ ಸಂಭಂದ ಮಂಗಳೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾರ್‌‌ನೊಳಗೆ ನುಗ್ಗಿ ದುಷ್ಕರ್ಮಿಗಳ ದಾಂಧಲೆ… ಸಿಸಿಟಿವಿಯಲ್ಲಿ ದೃಶ್ಯ ಸೆರೆ

Thursday, April 12th, 2018
cc-camera

ಮಂಗಳೂರು: ಕಿಡಿಗೇಡಿಗಳ ತಂಡವೊಂದು ಬಾರ್‌‌ನೊಳಗೆ ನುಗ್ಗಿ ದಾಂಧಲೆ ನಡೆಸಿದ ಘಟನೆ ನಗರ ಹೊರವಲಯದ ತಲಪಾಡಿ ಎಂಬಲ್ಲಿ ನಡೆದಿದೆ. ನಿನ್ನೆ ರಾತ್ರಿ ಇಲ್ಲಿನ ಅತಿಥಿ ಬಾರ್‌‌ಗೆ ನುಗ್ಗಿದ ಹತ್ತಾರು ಮಂದಿಯಿದ್ದ ದುಷ್ಕರ್ಮಿಗಳ ತಂಡ ಬಾರ್‌‌ನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದೆ. ಸದ್ಯ ಈ ದಾಂಧಲೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಥಳೀಯ ಯುವಕರ ತಂಡವೇ ಕ್ಷುಲ್ಲಕ ಕಾರಣಕ್ಕೆ ಈ ದಾಂಧಲೆ ನಡೆಸಿದೆ ಎನ್ನಲಾಗಿದ್ದು, ಈ ಹಿಂದೆಯೂ ಸಣ್ಣಪುಟ್ಟ ಕಾರಣಕ್ಕೆ ಗಲಾಟೆ ನಡೆಸಿದ್ದರು ಎಂದು ದೂರಲಾಗಿದೆ. ಹೀಗಾಗಿ ಮತ್ತೆ ಬಾರ್‌‌ಗೆ […]

ಚುನಾವಣಾ ನೀತಿ ಸಂಹಿತೆ… ತಪಾಸಣಾ ಕಾರ್ಯ ಚುರುಕು

Friday, March 30th, 2018
election

ಮಂಗಳೂರು: ರಾಜ್ಯದಲ್ಲಿ ಚುನಾವಣಾ ದಿನ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗಿದೆ. ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ತಪಾಸಣಾ ಕಾರ್ಯ ಚುರುಕುಗೊಳಿಸಲಾಗಿದೆ. ಪ್ರಮುಖ ರಸ್ತೆಗಳಲ್ಲಿ ತಪಾಸಣಾ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಸಾರ್ವಜನಿಕ ಸ್ಥಳಗಳಲ್ಲಿರುವ ಫ್ಲೆಕ್ಸ್, ಕಟೌಟ್‌ಗಳನ್ನು ತೆರವುಗೊಳಿಸುವ ಕಾರ್ಯ ತೀವ್ರಗತಿಯಲ್ಲಿ ನಡೆಯುತ್ತಿದೆ. ಮಂಗಳೂರಿನ ತಲಪಾಡಿ ಮೂಲಕ ಕೇರಳ ರಾಜ್ಯಕ್ಕೆ ಸಂಪರ್ಕಿಸುವ ತಲಪಾಡಿ ಅಂತಾರಾಜ್ಯ ಗಡಿಯಲ್ಲಿ ಕೂಡಾ ತಪಾಸಣೆಯನ್ನು ತೀವ್ರಗೊಳಿಸಿದೆ.

ಮಂಗಳೂರು ಪೊಲೀಸರಿಂದ ಅಂತಾರಾಜ್ಯ ಗಾಂಜಾ ಕಿಂಗ್ ಪಿನ್ ಬಂಧನ

Thursday, January 25th, 2018
ganja-case

ಮಂಗಳೂರು: ನಗರಕ್ಕೆ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದ ಬೃಹತ್ ಅಂತಾರಾಜ್ಯ ಗಾಂಜಾ ಜಾಲವನ್ನು ಭೇದಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದು, ಗಾಂಜಾ ಕಿಂಗ್ ಪಿನ್ ಎಂದೇ ಗುರುತಿಸಲಾಗುವ ಸಲೀಂ ಬಾಷಾ ಎಂಬವನನ್ನು ಬಂಧಿಸಿದ್ದಾರೆ. ಇತ್ತೀಚೆಗೆ ಮಂಗಳೂರು ಹೊರವಲಯದ ತಲಪಾಡಿಯ ತೌಡುಗೋಳಿಯಲ್ಲಿ ದಾಳಿ ನಡೆಸಿದ್ದ ರೌಡಿ ನಿಗ್ರಹ ದಳದ ಪೊಲೀಸರು ಮಹಮ್ಮದ್ ಅಝೀಝ್ ಎಂಬವರನ್ನು ಬಂಧಿಸಿ ಆತನಿಂದ 10 ಕಿಲೋ ಗ್ರಾಂ. ಗಾಂಜಾವನ್ನು ವಶಪಡಿಸಿಕೊಂಡಿದ್ದರು. ಬಂಧಿತ ಮಹಮ್ಮದ್ ಅಝೀಝ್ ನನ್ನು ತನಿಖೆಗೆ ಒಳ ಪಡಿಸಿದ ಸಂದರ್ಭದಲ್ಲಿ ಆಂಧ್ರದ ಚಿತ್ತೂರಿನ ಪನಮ್ನೇರು ಎಂಬಲ್ಲಿಂದ […]

ಗಡಿಯಲ್ಲಿ ಉಗ್ರ ಪ್ರತಿಭಟನಾ ಎಚ್ಚರಿಕೆ-ರಾ.ಹೆದ್ದಾರಿ ತಡೆ-ಬಂಧನ

Saturday, February 6th, 2016
KRV

ಮಂಜೇಶ್ವರ: ಅಖಂಡ ಕರ್ನಾಟಕದ ಸಮಗ್ರ ಕನ್ನಡಾಭಿಮಾನಕ್ಕೆ ಚ್ಯುತಿಯಾಗುವುದನ್ನು ಸಹಿಸಲಾಗದು. ಗಡಿನಾಡು ಕಾಸರಗೋಡಿನ ಕನ್ನಡಿಗರ ಮೇಲಾಗುತ್ತಿರುವ ವಂಚನಾ ರಾಜಕೀಯದ ಮಿತಿ ಇದೀಗ ಕಟ್ಟೆಯೊಡೆದಿದ್ದು, ಯಾವ ಬೆಲೆ ತೆತ್ತಾದರೂ ಕನ್ನಡಿಗರ ಮೇಲಾಗುತ್ತಿರುವ ದೌರ್ಜನ್ಯವನ್ನೆದುರಿಸಲು ಸಿದ್ದರಿದ್ದೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ.ನಾರಾಯಣ ಗೌಡ ಬಣ)ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಲ.ಅನಿಲ್ ದಾಸ್ ಗುಡುಗಿದರು. ಕೇರಳ ಸರಕಾರದ ನೂತನ ಮಲೆಯಾಳ ಭಾಷಾ ಮಸೂದೆಯನ್ನು ವಿರೋಧಿಸಿ, ಕಾಸರಗೋಡಿನ ಕನ್ನಡಿಗರ ಹಕ್ಕು ಸಂರಕ್ಷಣೆಯ ದೃಷ್ಟಿಯಿಂದ ಶನಿವಾರ ಕೇರಳ ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ […]

ತಲಪಾಡಿಯ ತಚ್ಚಣಿಯಲ್ಲಿ ಮಹಿಳೆಗೆ ಪಿಸ್ತೂಲು ತೋರಿಸಿ ಹಲ್ಲೆ

Wednesday, July 10th, 2013
Talapady shotout

ಮಂಗಳೂರು: ಕೇರಳ ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ ಕೇಶವ್.ಬಿ ಅವರ ಮನೆಯೊಳಗೆ ಮಂಗಳವಾರ ಬೆಳಿಗ್ಗೆ 8.00 ಗಂಟೆ ಸುಮಾರಿಗೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಗೆ ಪಿಸ್ತೂಲು ತೋರಿಸಿ ಬೆದರಿಸಿ ಅವರಿಗೆ ಹಲ್ಲೆ ನಡೆಸಿದ ಘಟನೆ ತಲಪಾಡಿಯ ತಚ್ಚಣಿ ಸಮೀಪದ ಮಂಡಿ ಕಟ್ಟೆಯಲ್ಲಿ ನಡೆದಿದೆ. ದುಷ್ಕರ್ಮಿಗಳಿಬ್ಬರ ಪೈಕಿ ಓರ್ವ ಏಕಾಏಕಿ ಮನೆಯೊಳಗೆ ನುಗ್ಗಿ ಅಡುಗೆ ಕೋಣೆಯಲ್ಲಿದ್ದ  ಸಾಧನಾ ಕೇಶವ್ ಅವರಿಗೆ ಪಿಸ್ತೂಲು ತೋರಿಸಿ ಬೆದರಿಸಿದ್ದನು. ಮನೆಯೊಳಗೆ `ಯಾರಿದ್ದಾರೆಂದು’ ಪ್ರಶ್ನಿಸಿದ ಬಳಿಕ ಅವರ ಮೊಬೈಲಿನಿಂದ ತಾನು […]