Blog Archive

ಕರಾವಳಿಗೆ ಆರೆಂಜ್ ಅಲರ್ಟ್, ಜುಲೈ 7ರವರೆಗೂ ಮಳೆ

Saturday, July 4th, 2020
Mangalore Rain

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ದಿಂದ ಭಾರಿ ಮಳೆಯಾಗುತ್ತಿದ್ದು ಶನಿವಾರವೂ ಮುಂದುವರಿದಿದೆ. ಶುಕ್ರವಾರ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಮೋಡ-ಬಿಸಿಲಿನ ನಡುವೆ ಅಷ್ಟಾಗಿ ಮಳೆಯಾಗಿರಲಿಲ್ಲ. ಅಪರಾಹ್ನ ಮತ್ತೆ ಚುರುಕಾಗಿದೆ. ಜತೆಗೆ ಗಾಳಿಯೂ ವೇಗ ಪಡೆದಿತ್ತು. ಭಾರಿ ಮಳೆಯಿಂದಾಗಿ ಹಲವೆಡೆ ಗುಡ್ಡ ಕುಸಿತ ಸಂಭವಿಸಿದ್ದು, ಮನೆಗಳಿಗೂ ಹಾನಿಯಾಗಿದೆ. ರಸ್ತೆ ಕಾಮಗಾರಿಗಳಿಗಾಗಿ ಅಗೆದಿದ್ದ ಗುಡ್ಡಗಳು ಕುಸಿದಿದ್ದರಿಂದ ವಾಹನ ಸಂಚಾರಕ್ಕೂ ಅಡಚಣೆಯಾಗಿತ್ತು. ಕೆಲವೆಡೆ ತಗ್ಗುಪ್ರದೇಶಗಳು ಜಲಾವೃತಗೊಂಡಿದ್ದವು. ಹವಾಮಾನ ಇಲಾಖೆ ಕರಾವಳಿಗೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಜುಲೈ 7ರವರೆಗೂ ಉತ್ತಮ ಮಳೆಯಾಗುವ ಸಾಧ್ಯತೆಯಿದೆ. […]

ಉಡುಪಿಯಲ್ಲಿ ಸಿಡಿಲು, ಮಿಂಚು, ಗಾಳಿ ಸಹಿತ ಭಾರೀ ಮಳೆ

Tuesday, April 7th, 2020
udupi rain

ಉಡುಪಿ :  ಕಾಪು ತಾಲ್ಲೂಕಿನಾದ್ಯಂತ ಮಂಗಳವಾರ ಸಂಜೆ ಸಿಡಿಲು, ಮಿಂಚು, ಗಾಳಿ ಸಹಿತ ಭಾರೀ ಮಳೆಯಾಗಿದೆ. ಕೆಲವಡೆ ಗಾಳಿ, ಸಿಡಿಲು ಸಹಿತ ಮಳೆಯಾಗಿದೆ. ಹಲವು ಕಡೆಗಳಲ್ಲಿ ಚರಂಡಿಯ ವ್ಯವಸ್ಥೆ ಸರಿಪಡಿಸದೆ ಇರುವುದರಿಂದ ರಸ್ತೆಯಲ್ಲೇ ನೀರು ಹರಿದು ಹೋಗುವಂತಾಯಿತು. ಪಡುಬಿದ್ರಿ ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಸಮರ್ಪಕ ಕಾಮಗಾರಿಯಿಂದ ಸರ್ವೀಸ್ ರಸ್ತೆಯಲ್ಲಿ ಮಳೆ ನೀರು ಹರಿದುಹೋಗುತಿತ್ತು, ಪಡುಬಿದ್ರಿಯ ಕಲ್ಸಂಕದಲ್ಲಿ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ಮಳೆ ನೀರು ಹೆದ್ದಾರಿಯಲ್ಲಿಯೇ ಹೋಗುವಂತಾಯಿತು. ಪಡುಬಿದ್ರಿಯ ಕಾರ್ಕಳ ಸಂಪರ್ಕಿಸುವ ಸರ್ಕಲ್ ಬಳಿ ಮಳೆ ನೀರು ನಿಂತಿತ್ತು. ಆದರೆ ಲಾಕ್‍ಡೌನ್‍ನಿಂದ ಹೆಚ್ಚಿನ ವಾಹನಗಳು […]

ಬೆಂಗಳೂರು : ಕೆಲವೆಡೆ ಭಾರೀ ಸುರಿದ ಮಳೆ; ಮನೆಗೆ ನುಗ್ಗಿದ ನೀರು

Thursday, October 3rd, 2019
bengaluru

ಬೆಂಗಳೂರು : ಬುಧವಾರ ರಾತ್ರಿ ನಗರದ ಕೆಲವೆಡೆ ಸುರಿದ ಭಾರೀ ಮಳೆಯಿಂದಾಗಿ ಮನೆಯೊಳಗೆ ನೀರು ನುಗ್ಗಿ ಜನರು ಪರದಾಡುವಂತಾಯಿತು. ನೀರು ನಿಂತಿದ್ದರಿಂದ ಗುರುವಾರ ಬೆಳಿಗ್ಗೆಯಿಂದಲೇ ನಗರದ ಅಲ್ಲಲ್ಲಿ ಟ್ರಾಫಿಕ್ ಜಾಮ್ ಆಗಿದ್ದು ಜನರು ವಾಹನ ಚಲಾಯಿಸಲು ಪರದಾಡಿದರು. ಸಿ.ವಿ.ರಾಮ್ ನಗರ, ಎಚ್ ಎಸ್ ಆರ್ ಲೇಜೌಟ್, ಮಲ್ಲೇಶ್ವರಂ, ವಿಜಯನಗರ ಹಾಗೂ ಜಲಹಳ್ಳಿ ಪ್ರದೇಶಕ್ಕೆ ಮಳೆಯಿಂದಾಗಿ ಹೆಚ್ಚಿನ ಹಾನಿಯಾಗಿದೆ. ಬುಧವಾರ ರಾತ್ರಿ 11.30ಕ್ಕೆ ಪ್ರಾರಂಭವಾದ ಮಳೆ ಬೆಳಿಗ್ಗೆ4.20ರ ವರೆಗೆ ನಿರಂತರವಾಗಿ ಸುರಿದಿದೆ. ಇಂದು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ […]

ಕುಂದಾಪುರ ರಸ್ತೆ ದುರಸ್ತಿ : ವಾಹನ ಸವಾರರು ಹೈರಾಣ

Monday, September 9th, 2019
kundapura

ಕುಂದಾಪುರ : ಪುರಸಭೆ ವ್ಯಾಪ್ತಿಯ ಹೆದ್ದಾರಿಯ ಅನೇಕ ಕಡೆಗಳಲ್ಲಿ ಭಾರೀ ಮಳೆಯಿಂದಾಗಿ ಮತ್ತೆ ಬೃಹತ್‌ ಹೊಂಡ – ಗುಂಡಿಗಳು ಕಾಣಿಸಿಕೊಂಡಿದ್ದು, ವಾಹನ ಸವಾರರು ಹೈರಾಣಾಗಿ ಹೋಗಿದ್ದಾರೆ. ಸಂಚಾರಿ ನಿಯಮ ಉಲ್ಲಂಘನೆಯಡಿ ದಂಡವನ್ನು ಹೆಚ್ಚಿಸುವ ಸರಕಾರ ರಸ್ತೆ ದುರಸ್ತಿಗೆ ಯಾಕೆ ಮನಸ್ಸು ಮಾಡುತ್ತಿಲ್ಲ ಎನ್ನುವ ಆರೋಪವನ್ನು ಜನರು ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಅಲ್ಲಲ್ಲಿ ಹಾಕಲಾದ ತೇಪೆ ಎದ್ದು ಹೋಗಿದೆ. ಇದರಿಂದ ಈಗ ಹಿಂದಿಗಿಂತಲೂ ಹೆಚ್ಚು ಕಡೆಗಳಲ್ಲಿ ಹೆದ್ದಾರಿ ಮಧ್ಯೆಯೇ ಹೊಂಡ – ಗುಂಡಿಗಳಾಗಿವೆ. ಮಳೆ […]

ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ : ಜನಜೀವನ ಅಸ್ತವ್ಯಸ್ತ

Thursday, September 5th, 2019
Udupi

ಉಡುಪಿ : ಉಡುಪಿಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಮುಂಗಾರಿನ ಕೊನೆಯಲ್ಲೂ ಪ್ರಾರಂಭದ ಮಳೆಯನ್ನು ನೆನಪಿಸುವಂತಿದೆ. ಇಂದು ಬೆಳಿಗ್ಗೆ ಗಾಳಿ ಮಳೆ ಬಿರುಸು ಪಡೆದಿದೆ. ಕಳೆದ ಐದು ದಿನಗಳಿಂದಲೂ ನಿತ್ಯ ಮಳೆಯಾಗುತ್ತಿದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ವಾಹನ ಸವಾರರು, ವಿದ್ಯಾರ್ಥಿಗಳು ಮತ್ತು ಪಾದಚಾರಿಗಳು ಈ ಮಳೆಯನ್ನು ನಿರೀಕ್ಷಿಸದೇ ಇದ್ದ ಕಾರಣ ಸಾಕಷ್ಡು ಒದ್ದಾಡಬೇಕಾಯಿತು. ಮಳೆಯ ಕಾರಣದಿಂದ ಕಳೆದ ಐದು ದಿನಗಳಿಂದ ಮೀನುಗಾರಿಕೆ ಚಟುವಟಿಕೆಗೂ ತೊಂದರೆಯಾಗಿದೆ. ಪ್ರಾರಂಭದಲ್ಲಿದ್ದ ಈ ಋತುವಿನ ಮೀನುಗಾರಿಕೆ ಚಟುವಟಿಕೆ ತುಸು ನಿಧಾನಗೊಂಡಿದೆ. ಸಾಮಾನ್ಯವಾಗಿ ಕರಾವಳಿಯಲ್ಲಿ ಅಷ್ಟಮಿ, ಗಣೇಶ […]

ಕರಾವಳಿಯಲ್ಲಿ ಮತ್ತೆ ಮುಂದುವರಿದ ಮಳೆ

Wednesday, September 4th, 2019
ಕರಾವಳಿಯಲ್ಲಿ ಮತ್ತೆ ಮುಂದುವರಿದ ಮಳೆ

ಮಂಗಳೂರು : ಕರಾವಳಿ, ಮಲೆನಾಡಿ ನಾದ್ಯಂತ ಮಂಗಳವಾರ ಉತ್ತಮ ಮಳೆ ಸುರಿದಿದ್ದು, ಕೆಲವೆಡೆಗಳಲ್ಲಿ ಹಾನಿಯನ್ನೂ ಉಂಟು ಮಾಡಿದೆ. ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಿಂದ ಚಾರ್ಮಾಡಿ ಭಾಗದಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಕಡಲಬ್ಬರ ಕೂಡ ಅಧಿಕವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಗ್ಗಿ ನಿಂದಲೇ ದಿನವಿಡೀ ಆಗಾಗ ಮಳೆ ಸುರಿದಿದೆ. ಕರಾವಳಿಯಲ್ಲಿ ಸೋಮವಾರದಿಂದ ನಾಲ್ಕು ದಿನಗಳ ವರೆಗೆ ಆರೆಂಜ್‌ ಅಲರ್ಟ್‌ ಘೋಷಿಸ ಲಾಗಿತ್ತು. ಅಲರ್ಟ್‌ ಗುರುವಾರದ ತನಕ ಇರಲಿದ್ದು, ಕರಾವಳಿ ಪ್ರದೇಶದಲ್ಲಿ ಉತ್ತಮ ಮಳೆಯಾಗುವ ಸಂಭವವಿದೆ ಎಂಬುದಾಗಿ ಹವಾಮಾನ […]

ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ; ಮುಂಜಾಗ್ರತೆ ವಹಿಸುವಂತೆ ಎಚ್ಚರಿಕೆ

Thursday, August 22nd, 2019
bhari-male

ಮಂಗಳೂರು : ಕರ್ನಾಟಕದ ಕರಾವಳಿಗರಿಗೆ ಮತ್ತೆ ಮಳೆ ಕಂಟಕವಾಗುತ್ತಾ ಎನ್ನುವ ಅನುಮಾನ ಕಾಡತೊಡಗಿದೆ. ಈಗಾಗಲೇ ಪ್ರವಾಹ, ಭೂಕುಸಿತದಿಂದ ಕರ್ನಾಟಕದ ಕರಾವಳಿ ಭಾಗದ ಜನ ಕಂಗೆಟ್ಟಿದ್ದು, ಇದೀಗ ಮುಂದಿನ 24 ಗಂಟೆಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಜು.24ರವರೆಗೆ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಭಾರೀ ಮಳೆಯ ಹಿನ್ನಲೆಯಲ್ಲಿ ಕರಾವಳಿ ಕರ್ನಾಟಕದಲ್ಲಿ ಮತ್ತೆ ಅಲರ್ಟ್ ಘೋಷಿಸಲಾಗಿದ್ದು, ಕರಾವಳಿಯಲ್ಲಿ ಕನಿಷ್ಠ 204.5 ಮಿ.ಮೀ. ಮಳೆ ಬೀಳುವ ಸಾಧ್ಯತೆ ಇದೆ ಎಂದು […]

ಮಳೆಗಾಗಿ ಉಡುಪಿಯಲ್ಲಿ ಕಪ್ಪೆಗಳ ಮದುವೆ

Saturday, June 8th, 2019
frog marriage

ಉಡುಪಿ:  ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್‌ ಮತ್ತು ಪಂಚರತ್ನಾ ಸೇವಾ ಟ್ರಸ್ಟ್‌ ಮಳೆಗಾಗಿ  ಕಪ್ಪೆ ಮದುವೆ ಆಯೋಜನೆ ಮಾಡಿತ್ತು. ಶನಿವಾರ ಮಧ್ಯಾಹ್ನ ಉಡುಪಿ ಕಿದಿಯೂರು ಹೊಟೆಲ್ ಪ್ರಾಂಗಣದಲ್ಲಿ ಗಂಡು ಕಪ್ಪೆ ಹಾಗೂ ಹೆಣ್ಣು ಕಪ್ಪೆಗೆ ಸಕಲ ಶಾಸ್ತ್ರಗಳೊಂದಿಗೆ ವಿವಾಹ ನಡೆಸಿ ಮಂಡೂಕ ಕಲ್ಯಾಣೋತ್ಸವದ ಮೂಲಕ ಮಳೆಗಾಗಿ ವಿಶೇಶ ಪ್ರಾರ್ಥನೆ ಮಾಡಲಾಯಿತು. ವರನ ಹೆಸರು ವರುಣ, ವಧುವಿನ ಹೆಸರು ವರ್ಷಾ. ಗಂಡು ಹಾಗೂ ಹೆಣ್ಣು ಕಪ್ಪೆಯನ್ನು ಮೂರು ಚಕ್ರದ ಸೈಕಲ್’ನಲ್ಲಿ ಕೂರಿಸಿ ಮಾರುತಿ ವಿಥಿಕಾ ಸರ್ಕಲ್ ನಾಗರಿಕ ಸಮಿತಿಯ […]

ಮಳೆಗಾಗಿ ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ

Wednesday, May 15th, 2019
Prayer

ಮಂಗಳೂರು : ರಂಜಾನ್ ಮಾಸದಲ್ಲಿ ದಕ್ಷಿಣ ಕನ್ನಡದ ಬರಗಾಲದ ಛಾಯೆ ಆವರಿಸಿದ್ದು ಜನ ನೀರಿಗಾಗಿ ಪರದಾಡುತ್ತಿದ್ದಾರೆ  ಹೀಗಾಗಿ ಮುಸ್ಲಿಮರು ಬುಧವಾರ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಮಾಡಿದರು. ನೆಹರೂ ಮೈದಾನದಲ್ಲಿ ಬುಧವಾರ ಬೆಳಗ್ಗೆ 7 ಗಂಟೆಗೆ ಮುಸ್ಲಿಮರು ಶೇಖ್ ಸಕೀಬ್ ಸಲೀಂ ಉಮ್ರಿ ಅವರ ನೇತೃತ್ವದಲ್ಲಿ ಪ್ರಾರ್ಥನೆ ಮಾಡಿದರು. ರಂಜಾನ್ ಮಾಸದಲ್ಲಿ ಪ್ರಾರ್ಥನೆ ಸಲ್ಲಿಸಿದರೆ ಈಡೇರುತ್ತದೆ ಎಂದು ಎಲ್ಲರು ಒಟ್ಟಿಗೆ ಸೇರಿ ಪ್ರಾರ್ಥನೆ ಸಲ್ಲಿಸಿರುವರು. ಅಲ್ಲಾಹು ಮನಸ್ಸು ಮಾಡಿದರೆ ಮಳೆ ಬರುವುದು. ಮಳೆ ಬಂದರೂ ಕಷ್ಟ ಬರದೇ ಇದ್ದರೂ […]

ಭಾರಿ ಮಳೆಗೆ ವಿರಾಮ..ಇಂದು ಮಂಗಳೂರಿನಲ್ಲಿ ಸುಡುಬಿಸಿಲಿನ ವಾತವರಣ!

Monday, July 9th, 2018
hot-temperature

ಮಂಗಳೂರು: ಕಳೆದ ನಾಲ್ಕು ದಿನ ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ ಸುರಿದು ಜನಜೀವನ ಅಸ್ತವ್ಯಸ್ತವಾಗಿದ್ದರೆ, ಇಂದು ಜಿಲ್ಲೆಯಲ್ಲಿ ಸುಡುಬಿಸಿಲಿನ ವಾತವರಣವಿದೆ. ದ.ಕ. ಜಿಲ್ಲೆಯ ಕೆಲವೆಡೆ ಇಂದು ಸಣ್ಣ ಮಟ್ಟದಲ್ಲಿ ಮಳೆ ಸುರಿದರೆ ಹೆಚ್ಚಿನೆಡೆ ಸುಡು ಬಿಸಿಲಿನ ವಾತಾವರಣವಿದೆ. ಭಾರಿ ಮಳೆಯ ಹಿನ್ನೆಲೆಯಲ್ಲಿ ಇಂದು ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನ ಭಾರಿ ಮಳೆಯಿಂದ ಹಲವು ತಗ್ಗು ಪ್ರದೇಶಗಳಲ್ಲಿ ನೆರೆ ನೀರು ನಿಂತಿದೆ. ಆದರೆ ಇಂದು ಕೊಂಚ ಬಿಸಿಲಿನ ವಾತಾವರಣವಿದೆ.