Blog Archive

ಮಂಗಳೂರಿನ ಕಡಬ ಹಳೇ ಪೊಲೀಸ್ ಠಾಣೆ ಪಕ್ಕದಲ್ಲಿ ಭಾರೀ ಸ್ಫೋಟ

Thursday, May 17th, 2018
mangaluru

ಮಂಗಳೂರು: ಜಿಲ್ಲೆಯ ಕಡಬದ ಹಳೇ ಪೊಲೀಸ್ ಠಾಣೆಯ ಪಕ್ಕದಲ್ಲಿದ್ದ ಕಟ್ಟಡದಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದ ರಭಸಕ್ಕೆ ಕಟ್ಟಡದ ಹೆಂಚುಗಳು ಆಕಾಶದೆತ್ತರಕ್ಕೆ ಹಾರಿದ್ದು, ಗೋಡೆಗಳಲ್ಲಿ ಬಿರುಕು ಮೂಡಿವೆ. ಸಂಜೆ 7 ಗಂಟೆಗೆ ಈ ಘಟನೆ ನಡೆದಿದ್ದು, ಸ್ಫೋಟಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಈ ಕಟ್ಟಡದಲ್ಲಿ ಕಡಬ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುವ ಹೋಂಗಾರ್ಡ್‌‌‌ಗಳು ತಂಗುತ್ತಿದ್ದು, ಸ್ಫೋಟದ ವೇಳೆ ಇಲ್ಲಿ ಯಾರೂ ಇರಲಿಲ್ಲ ಎಂದು ತಿಳಿದು ಬಂದಿದೆ. ಇನ್ನು ಇದರ ಪಕ್ಕದಲ್ಲಿಯೇ ಕಡಬ ಪೊಲೀಸ್ ಠಾಣೆಯಿದೆ.

ಗಾಳಿ-ಮಳೆಗೆ ಹಾರಿದ ಅಂಗಡಿ, ಕಟ್ಟಡದ ಸಿಮೆಂಟ್ ಶೀಟ್, ಹೆಂಚು

Friday, April 20th, 2018
kadaba

ಕಡಬ: ಗುರುವಾರ ಸಂಜೆ ಸುರಿದ ಭಾರೀ ಗಾಳಿ ಮಳೆಗೆ ಅಂಗಡಿ, ಕಟ್ಟಡದ ಸಿಮೆಂಟ್ ಶೀಟ್, ಹೆಂಚುಗಳು ಹಾರಿಹೋಗಿದ್ದು, ಇದರಿಂದ ಅಪಾರ ನಷ್ಟವಾದ ಘಟನೆ ಮರ್ಧಾಳದಲ್ಲಿ‌ ನಡೆದಿದೆ. ಮರ್ಧಾಳ ಪೇಟೆಯ ಜೈನ ಬಸದಿ ಸಮೀಪದ ತೆಂಗಿನ ಮರ ರಸ್ತೆಗೆ ಬಿದ್ದು, ಕೆಲಕಾಲ ರಸ್ತೆ ತಡೆಯುಂಟಾಗಿತ್ತು. ಆ ಸಮಯದಲ್ಲಿ ಅದೇ ರಸ್ತೆಯ ಮೂಲಕ ತೆರಳುತ್ತಿದ್ದ ಜೀಪೊಂದು ಕೂದಳೆಲೆಯ ಅಂತರದಲ್ಲಿ ಪಾರಾಗಿದೆಯೆನ್ನಲಾಗಿದೆ. ಗಣೇಶ್ ಬೇಕರಿ‌ ಮತ್ತು ಸಾಯಿ ಮೆಡಿಕಲ್ ಕಟ್ಟಡದ ಮೇಲ್ಛಾವಣಿಯ 20 ಕ್ಕೂ ಅಧಿಕ ಸಿಮೆಂಟ್ ಶೀಟುಗಳು ಹಾಗೂ ಹೋಟೆಲ್ […]

ಪಿಕಪ್ ವಾಹನವೊಂದು ಬೈಕಿಗೆ ಢಿಕ್ಕಿ; ಬೈಕ್ ಸವಾರನಿಗೆ ಗಾಯ

Tuesday, March 27th, 2018
kadaba

ಕಡಬ: ಪಿಕಪ್ ವಾಹನವೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ಕಡಬದಲ್ಲಿ ಸೋಮವಾರ ರಾತ್ರಿ ನಡೆದಿದೆ. ಗಾಯಾಳು ಬೈಕ್ ಸವಾರನನ್ನು ಕೋಡಿಂಬಾಳ‌ ನಿವಾಸಿ ನವೀನ್ ಎಂದು ಗುರುತಿಸಲಾಗಿದೆ. ಈತ ತನ್ನ ಬೈಕಿನಲ್ಲಿ ತೆರಳುತ್ತಿದ್ದಾಗ ಕಡಬ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಪಿಕಪ್ ಢಿಕ್ಕಿ ಹೊಡೆದಿದೆ. ಗಾಯಾಳುವನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿಕಪ್ ಚಾಲಕ ರಾಜು ಎಂಬಾತ ಕೆಲದಿನಗಳ ಹಿಂದೆ ಅಕ್ರಮ ಗೋ ಸಾಗಾಟ ಪ್ರಕರಣದಲ್ಲಿ ಬಂಧಿತನಾಗಿದ್ದು, ಆ ಕಾರಣಕ್ಕಾಗಿ ಉದ್ದೇಶಪೂರ್ವಕವಾಗಿ ಅಪಘಾತ ಎಸಗಿದ್ದಾರೆ […]

‘ಸ್ಮಾರ್ಟ್ ಫೋನ್’ ಗೆದ್ದಿದ್ದೀರಿ ಎಂದು ನಂಬಿಸಿ ವಿದ್ಯಾರ್ಥಿಗೆ ಮೋಸ

Saturday, February 24th, 2018
smart-phone

ಕಡಬ: ಕಂಪನಿಯ ಪ್ರಚಾರಾರ್ಥವಾಗಿ ನಡೆದ ಅದೃಷ್ಟ ಶಾಲಿಗಳ ಆಯ್ಕೆಯಲ್ಲಿ ನಿಮ್ಮ ಮೊಬೈಲ್ ನಂಬರ್ ಬಹುಮಾನದ ರೂಪದಲ್ಲಿ ಸ್ಮಾರ್ಟ್ ಫೋನನ್ನು ಗೆದ್ದಿದೆ ಎಂದು ಗ್ರಾಹಕರನ್ನು ನಂಬಿಸಿ ಸಿಹಿತಿಂಡಿಯನ್ನು ಕಳುಹಿಸಿದ ಘಟನೆ ಆಲಂಕಾರಿನಲ್ಲಿ ಕಂಡುಬಂದಿದೆ. ಪೆರಾಬೆ ಗ್ರಾಮದ ಮಾಪಲ ನಿವಾಸಿ ಕಾಲೇಜು ವಿದ್ಯಾರ್ಥಿಯ ಮೊಬೈಲ್ ಗೆ ಒಂದು ವಾರದ ಹಿಂದೆ ಕರೆಯೊಂದು ಬಂದಿದ್ದು, ಬೆಂಗಳೂರಿನ HHM ಮಾರ್ಕೆಟಿಂಗ್ ಕಂಪನಿಯ ಪ್ರಚಾರಾರ್ಥವಾಗಿ ನಮ್ಮ ಕಂಪೆನಿಯು ನಡೆಸಿದ ಅದೃಷ್ಟಶಾಲಿಗಳ ಆಯ್ಕೆಯಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಬಹುಮಾನವನ್ನು ಗೆದ್ದುಕೊಂಡಿದೆ. ಬಹುಮಾನವನ್ನು ಅಂಚೆ ಮೂಲಕ ನಿಮ್ಮ […]

ಕಡಬ ತಾಲೂಕು ತೆಕ್ಕೆಗೆ ರಾಜ್ಯದ ನಂ. 1 ದೇಗುಲ

Monday, January 1st, 2018
subramanya

ಸುಬ್ರಹ್ಮಣ್ಯ : ಸುಳ್ಯ ತಾಲೂಕಿನ ಜನತೆಗೆ ಹೊಸ ವರ್ಷ ಕಹಿ ಅನುಭವ ನೀಡಲಿದೆ. ಕಾರಣ, ಸುಳ್ಯ ತಾಲೂಕು ಮತ್ತಷ್ಟು ಕಿರಿದಾಗಲಿದೆ. ಜತೆಗೆ ಇಲ್ಲಿ ತನಕ ತಾಲೂಕಿನಲ್ಲಿ ಮುಕುಟಪ್ರಾಯವಾಗಿದ್ದ ರಾಜ್ಯದ ನಂ. 1 ದೇಗುಲ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಇನ್ನು ಮುಂದೆ ಕಡಬ ತಾಲೂಕು ಜತೆ ಗುರುತಿಸಿಕೊಳ್ಳಲಿದೆ. 2017ರ ವರ್ಷಕ್ಕೆ ಭಾವಪೂರ್ಣ ವಿದಾಯದ ಜತೆ ಧಾರ್ಮಿಕ ಕೇಂದ್ರ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಹಲವು ಮಹತ್ವದ ಸ್ಥಳಗಳು ಸುಳ್ಯದ ಕೈತಪ್ಪಲಿವೆ. ಇವೆಲ್ಲ ಕಡಬ ತಾಲೂಕಿಗೆ ಸೇರುವುದರಿಂದ ನೋವಿನ ವಿದಾಯ ಹೇಳುವುದು […]