Blog Archive

ತೊಕ್ಕೊಟ್ಟಿನಲ್ಲಿ ರಸ್ತೆ ಅಪಘಾತ: ಕುಂಪಲದ ಯುವಕ ಮೃತ್ಯು

Friday, April 27th, 2018
accident

ಮಂಗಳೂರು: ಬೈಕಿಗೆ ಮರಳು ಸಾಗಾಟದ ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ ಇಂದು ಬೆಳಗ್ಗೆ ನಡೆದಿದೆ. ಮೃತರನ್ನು ಕುಂಪಲ ಆಶ್ರಯ ಕಾಲನಿ ನಿವಾಸಿ ವಿನೀತ್ ರಾಜ್(25) ಎಂದು ಗುರುತಿಸಲಾಗಿದೆ. ತೊಕ್ಕೊಟ್ಟುವಿನಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಹೆಚ್ಚಿನ ಘನ ವಾಹನಗಳು ಇಲ್ಲಿನ ಬಸ್ ನಿಲ್ದಾಣದ ರಸ್ತೆಯಲ್ಲೇ ಸಂಚರಿಸುತ್ತಿವೆ. ಇದು ಅಪಾಯಕಾರಿಯಾಗಿ ಮಾರ್ಪಟ್ಟಿದೆ. ಇಂದು ನಡೆದ ಈ ಅಪಘಾತಕ್ಕೂ ಟಿಪ್ಪರ್ ಬಸ್ ನಿಲ್ದಾಣದ ರಸ್ತೆಯಲ್ಲಿ ಸಂಚರಿಸಿದ್ದೇ ಕಾರಣ ಎಂದು […]

ಕಸಾಯಿಖಾನೆಗೆ ಕೋಣಗಳನ್ನು ಸಾಗಿಸುತ್ತಿದ್ದ ಇಬ್ಬರ ಬಂಧನ

Friday, January 26th, 2018
arrested

ಮಂಗಳೂರು: ಮೂಡಿಗೆರೆಯಿಂದ ಕೇರಳದ ಕಡೆಗೆ ಕೋಣಗಳನ್ನು ಸಾಗಿಸುತ್ತಿದ್ದ ಲಾರಿಯೊಂದನ್ನು ತೊಕ್ಕೊಟ್ಟು ಬಳಿ ವಶಪಡಿಸಿಕೊಂಡ ಉಳ್ಳಾಲ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕಾಸರಗೋಡು ಜಿಲ್ಲೆಯ ಚೆರ್ಕಳ ಮೂಲದ ದಿವಾಕರ ನಾಯರ್(47), ಇನ್ನೋರ್ವ ಕೇರಳ ಮೂಲದ ಸ್ವಹಿಬ್ ಹಬೀಬ್(33) ಎಂದು ಗುರುತಿಸಲಾಗಿದೆ. ಆರೋಪಿಗಳು ಮೂಡಿಗರೆಯಿಂದ 20 ಕೋಣಗಳನ್ನು ಲಾರಿಯಲ್ಲಿ ತುಂಬಿಸಿ ಕಸಾಯಿಖಾನೆಗೆಂದು ಕೇರಳಕ್ಕೆ ಸಾಗಿಸುತ್ತಿದ್ದರೆನ್ನಲಾಗಿದೆ. ಡಿಸಿಪಿಯವರ ನಿರ್ದೇಶನದ ಮೇರೆಗೆ ಖಚಿತ ಮಾಹಿತಿ ಪಡೆದ ಉಳ್ಳಾಲ ಇನ್ಸ್‌ಪೆಕ್ಟರ್ ಗೋಪಿಕೃಷ್ಣ ಮತ್ತು ಎಸ್‌ಐ ವಿನಾಯಕ್ ಅವರ ತಂಡ ದಾಳಿ ನಡೆಸಿ […]

ಪಿಯು ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ

Tuesday, August 23rd, 2016
Shifan

ಮಂಗಳೂರು: ಪಿಯು ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ತೊಕ್ಕೊಟ್ಟುವಿನ ಲಚ್ಚಿಲ್‌‌ನ ಮನೆಯೊಂದರಲ್ಲಿ ನಡೆದಿದೆ. ಶಿಫಾನ್ (17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಈತ ತೊಕ್ಕೊಟ್ಟು ಸಂತ ಸೆಬೆಸ್ಟಿಯನ್ ಕಾಲೇಜಿನ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ. ವಿದ್ಯಾರ್ಥಿ ಶಿಫಾನ್ ಲಚ್ಚಿಲ್‌‌ ತನ್ನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ತೊಕ್ಕೊಟ್ಟು ಜಂಕ್ಷನ್ ನಲ್ಲಿರುವ ಗುಜರಿ ಸಂಗ್ರಹಣ ದಾಸ್ತಾನಿಗೆ ಬೆಂಕಿ ಭಾರಿ ನಸ್ಟ

Saturday, December 1st, 2012
Scrap shop Thokkottu

ಮಂಗಳೂರು :ಉಳ್ಳಾಲ ಪೋಲೀಸ್ ಠಾಣಾ ವ್ಯಾಪ್ತಿಯ, ತೊಕ್ಕೊಟ್ಟು ಜಂಕ್ಷನ್ ನಲ್ಲಿನ ಗುಜರಿ ಸಂಗ್ರಹಣ ದಾಸ್ತಾನಿಗೆ ನಿನ್ನೆ ಮಧ್ಯರಾತ್ರಿ 11.40ರ ಸುಮಾರಿಗೆ ಬೆಂಕಿ ತಗುಲಿದ ಪರಿಣಾಮ ಭಾರಿ ನಸ್ಟ ಸಂಭವಿಸಿದೆ. ಇದು ಮಹಮ್ಮದ್ ಆಶ್ರಫ್ ಎಂಬುವವರಿಗೆ ಸೇರಿದ್ದಾಗಿದ್ದು ಸುಮಾರು 5 ಲಕ್ಷದಸ್ಟು ನಸ್ಟ ಸಂಭವಿಸಿದೆ. ರಾತ್ರಿಯೇ ಎರಡು ಅಗ್ನಿಶಾಮಕದಳ ಸ್ಥಳಕ್ಕೆ ಧಾವಿಸಿದ್ದು 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿವೆ. ಈ ಕಾರ್ಯಚರಣೆಯಲ್ಲಿ ಸ್ಥಳೀಯರು ಸಹಕರಿಸಿದರು. ಈ ಪ್ರದೇಶದ ಅಕ್ಕಪಕ್ಕದಲ್ಲಿ ಮನೆ ಹಾಗೂ ವಾಣಿಜ್ಯ ಸಂಕೀರ್ಣಗಳಿದ್ದು […]