Blog Archive

ನಾನು ಹಿಂದೂ ಭಕ್ತ… ಈದ್‌‌ ಯಾಕೆ ಆಚರಿಸಬೇಕು?: ಯೋಗಿ ಆದಿತ್ಯನಾಥ್‌

Wednesday, March 7th, 2018
uttar-pradesh

ಲಕ್ನೋ: ನಾನು ಒಬ್ಬ ಹಿಂದೂ ಭಕ್ತ… ನಮ್ಮ ಧರ್ಮದ ಬಗ್ಗೆ ನನಗೆ ಹೆಮ್ಮೆ ಇದ್ದು, ನಾನು ಈದ್‌ ಹಬ್ಬ ಯಾಕೆ ಆಚರಣೆ ಮಾಡಬೇಕು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಪ್ರಶ್ನಿಸಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಸಮಾಜವಾದಿ ಪಕ್ಷದ ವಿರುದ್ಧ ಹರಿಹಾಯ್ದಿರುವ ಯೋಗಿ ಆದಿತ್ಯನಾಥ್‌, “ನಾನು ಹಿಂದೂ ಧರ್ಮದವನಾಗಿದ್ದು, ಹೀಗಾಗಿ ಈದ್‌ ಆಚರಿಸುವುದಿಲ್ಲ. ನನ್ನ ಸ್ವಂತ ಧರ್ಮದಲ್ಲಿ ನಾನು ಹೆಮ್ಮೆ ಪಡುತ್ತೇನೆ… ಇಷ್ಟಕ್ಕೂ ನಾನು ಏಕೆ ಈದ್ ಆಚರಿಸಬೇಕು? ಎಂದಿದ್ದಾರೆ. ಇದೇ ವೇಳೆ ಅವರು […]

ಮಾರ್ಚ್‌ನಲ್ಲಿ ದಕ್ಷಿಣ ಕನ್ನಡ ಪ್ರವಾಸ ಕೈಗೊಳ್ಳಲಿದ್ದಾರೆ ರಾಹುಲ್ ಗಾಂಧಿ

Wednesday, February 28th, 2018
rahul-gandhi

ಮಂಗಳೂರು: ಮುಂಬೈ-ಕರ್ನಾಟಕ, ಉತ್ತರ ಕರ್ನಾಟಕ ಭಾಗದ ಪ್ರವಾಸದ ಬಳಿಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದಕ್ಷಿಣ ಕನ್ನಡ ಭಾಗದಲ್ಲಿ ಪ್ರವಾಸ ಮಾಡಲಿದ್ದಾರೆ. ಮಾರ್ಚ್ 10ಕ್ಕೂ ಮೊದಲು ರಾಹುಲ್ ಜಿಲ್ಲೆಯಲ್ಲಿ ಸಂಚಾರ ನಡೆಸಲಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಬಿ.ವೆಂಟಕೇಶ್ ಈ ಕುರಿತು ಮಾಹಿತಿ ನೀಡಿದರು. ‘ಮಾರ್ಚ್ ಮೊದಲ ವಾರದಲ್ಲಿ ರಾಹುಲ್ ಗಾಂಧಿ ಉಡುಪಿ ಮತ್ತು ದಕ್ಷಿಣ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದಾರೆ. ದಿನಾಂಕ ಇನ್ನೂ ನಿಗದಿಯಾಗಿಲ್ಲ’ ಎಂದರು. ಸವದತ್ತಿ ಯಲ್ಲಮ್ಮನಿಗೆ ಉಘೇ ಎಂದು ಎಐಸಿಸಿ ಅಧ್ಯಕ್ಷ ರಾಹುಲ್! ‘ಮೂರು ಅಥವ […]

ಉಗ್ರ ಬಿನ್‌ ಲಾಡೆನ್‌ ಉತ್ಸವ ಆಚರಿಸಲಿ: ಸಂಸದ ನಳಿನ್‌

Friday, February 16th, 2018
nalin-kumar

ಮಂಗಳೂರು: ಬಹಮನಿ ಉತ್ಸವ ಆಚರಿಸಲು ಮುಂದಾಗಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಭಯೋತ್ಪಾದಕ ಒಸಮಾ ಬಿನ್ ಲಾಡೆನ್ ಉತ್ಸವ ಆಚರಿಸಲಿ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಲೇವಡಿ ಮಾಡಿದ್ದಾರೆ. ಪುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಹಿರಿಮೆಯಾಗಿದ್ದ ವಿಜಯನಗರ ಸಾಮ್ರಾಜ್ಯದ ಮೇಲೆ ದಂಡೆತ್ತಿ ಬಂದ ದಂಗೆಕೋರ ಬಹಮನಿ ಸುಲ್ತಾನರು, ಶ್ರೀಮಂತ ವಿಜಯನಗರ ಸಾಮ್ರಾಜ್ಯವನ್ನು ಹಾಳು ಹಂಪೆ ಮಾಡಿದ್ದರು. ಈ ಕರಾಳ ಘಟನೆಯ ಅರಿವಿದ್ದರೂ ಅಲ್ಪಸಂಖ್ಯಾತರ ಓಲೈಕೆಗೆ ಯಾವ ರೀತಿಯಲ್ಲಿ ಬೇಕಾದರೂ ನಡೆದುಕೊಳ್ಳುವ ರಾಜಕಾರಣವನ್ನು ಮಾಡುತ್ತಿದ್ದಾರೆ […]

ಮಾರ್ಚ್ ಮೊದಲ ವಾರದಲ್ಲಿ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿರುವ ರಾಹುಲ್ ಗಾಂಧಿ

Thursday, February 15th, 2018
karavali

ಮಂಗಳೂರು : ನಾಲ್ಕು ದಿನಗಳ ಹೈದರಾಬಾದ್ ಕರ್ನಾಟಕ ಪ್ರವಾಸ ಮುಗಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು, ಎರಡನೇ ಹಂತದಲ್ಲಿ ಫೆ.24ರಿಂದ ಮೂರು ದಿನಗಳ ಮುಂಬೈ ಕರ್ನಾಟಕದಲ್ಲಿ ಸಂಚರಿಸಿದ ನಂತರ, ಮೂರನೇ ಹಂತದಲ್ಲಿ ಮಾರ್ಚ್ ನಲ್ಲಿ ಕರಾವಳಿಗೆ ಕಾಲಿಡಲಿದ್ದಾರೆ. ಮಾರ್ಚ್ ತಿಂಗಳ ಮೊದಲ ವಾರದಲ್ಲಿ ರಾಹುಲ್ ಗಾಂಧಿ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ನಡೆಸಲಿದ್ದಾರೆ. 4 ದಿನಗಳ ಕಾಲ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿರುವ ರಾಹುಲ್ ಗಾಂಧಿ ಅಲ್ಲಲ್ಲಿ ರೋಡ್ ಶೋ, ಸಾರ್ವಜನಿಕರ ಸಭೆಗಳಲ್ಲಿ […]

ಕೋಮು ಗಲಭೆ ಬಿಜೆಪಿಯ ಚುನಾವಣಾ ತಂತ್ರ: ವೆಂಕಟೇಶ್

Thursday, February 15th, 2018
congress

ಮಂಗಳೂರು: ರಾಜ್ಯ ಸರ್ಕಾರ ಮಾಡಿರುವ ಸಾಧನೆಗಳ ಮೂಲಕವೇ ಪಕ್ಷ ಜನರ ಬಳಿಗೆ ತೆರಳಲಿದ್ದು, ಕೆಲ ತಿಂಗಳುಗಳಿಂದೀಚೆಗೆ ದ.ಕ. ಜಿಲ್ಲೆಯಲ್ಲಿ ನಡೆದ ಕೋಮು ಗಲಭೆ ಬಿಜೆಪಿಯ ಚುನಾವಣಾ ತಂತ್ರವಾಗಿದೆ. ಆದರೆ ಅದು ಸಫಲವಾಗುವುದಿಲ್ಲ. ಅದಕ್ಕೆ ಉತ್ತರ ಮುಂದಿನ ಎರಡು ತಿಂಗಳಲ್ಲಿ ದೊರೆಯಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಬಿ.ವೆಂಕಟೇಶ್ ಹೇಳಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದ.ಕ. ಜಿಲ್ಲೆ ಕಾಂಗ್ರೆಸ್‌ನ ತವರೂರು. ಇದು ಹಾಗೆಯೇ ಮುಂದುವರಿಯಲಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಂಟೂ ಕ್ಷೇತ್ರಗಳಲ್ಲಿ […]

ಬೇರೆ ಪಕ್ಷಗಳ ಇಪ್ಪತ್ತು ಶಾಸಕರು ‘ಕೈ’ ಸೇರ್ತಾರೆ, ನೋಡ್ತಿರಿ ಎಂದ ಪರಂ

Saturday, February 10th, 2018
perameshwar

ಬಳ್ಳಾರಿ : ಇಂದಿನ (ಶನಿವಾರ) ಸಮಾವೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಆನಂದ್ ಸಿಂಗ್ ಹಾಗೂ ನಾಗೇಂದ್ರ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಇತರ ಪಕ್ಷಗಳ ಇಪ್ಪತ್ತು ಶಾಸಕರು ಕಾಂಗ್ರೆಸ್ ಗೆ ಸೇರ್ಪಡೆ ಆಗಲಿದ್ದಾರೆ ಎಂದು ಮತ್ತೊಮ್ಮೆ ಹುಳ ಬಿಟ್ಟಿದ್ದಾರೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ. ಈ ಹಿಂದೆ ಕೂಡ ಹಲವು ಬಾರಿ ಈ ಬಗ್ಗೆ ಮಾತನಾಡಿದ್ದ ಅವರು, ಶನಿವಾರ ಬಳ್ಳಾರಿಯಲ್ಲಿ ಮಾಧ್ಯಮದವರ ಜತೆ ಮಾತನಾಡಿ, ಬೇರೆ ಪಕ್ಷಗಳ ಇಪ್ಪತ್ತು ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ರಾಜ್ಯದಲ್ಲಿ ನಾವು ಮತ್ತೆ […]

ರಾಜ್ಯದಲ್ಲಿ ನಾಳೆಯಿಂದ ಕೈ, ಬಿಜೆಪಿ ರಾಷ್ಟ್ರೀಯ ನಾಯಕರಿಂದ ರ‍್ಯಾಲಿಗಳ ಭರಾಟೆ

Friday, February 9th, 2018
narendra-modi

ಬೆಂಗಳೂರು: ಶತಾಯಗತಾಯ ರಾಜ್ಯ ವಿಧಾನಸಭೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲೇಬೇಕೆಂಬ ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಹಾಗೂ ಬಿಜೆಪಿಯ ರಾಷ್ಟ್ರೀಯ ಮುಖಂಡರು ಒಬ್ಬರಾದ ನಂತರ ಒಬ್ಬರು ರಾಜ್ಯದಲ್ಲಿ ರ‍್ಯಾಲಿಗಳನ್ನು ನಡೆಸಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಫೆ. ನಾಳೆ (10) ಯಿಂದ ಮೂರು ದಿನ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಫೆ.18 ರಿಂದ ಮೂರು ದಿನಗಳ ಕಾಲ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಚುನಾವಣಾ ವೇಳಾಪಟ್ಟಿ ಪ್ರಕಟಣೆಗೂ ಮುನ್ನ […]

ಯುವಕರ ದಾರಿ ತಪ್ಪಿಸುತ್ತಿದೆ ಬಿಜೆಪಿ: ಬಸನಗೌಡ

Thursday, February 1st, 2018
basangowda

ಉಡುಪಿ: ರಾಜ್ಯದಲ್ಲಿ ಮುಖ್ಯವಾಗಿ ಕರಾವಳಿ ಭಾಗದಲ್ಲಿ ಬಿಜೆಪಿ ಪಕ್ಷವು ದೇವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ಕೋಮು ಗಲಭೆ ಸೃಷ್ಟಿಸಿ ಯುವಕರನ್ನು ದಾರಿ ತಪ್ಪಿಸುತ್ತಿದೆ. ಇದಕ್ಕೆ ತಕ್ಕ ಪಾಠವನ್ನು ಮುಂದಿನ ದಿನಗಳಲ್ಲಿ ಯುವ ಕಾಂಗ್ರೆಸ್‌ ಕಲಿಸಲಿದೆ ಎಂದು ಕರ್ನಾ ಟಕ ಪ್ರದೇಶ ಯುವಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಬಸನಗೌಡ ಬಾದ್ರಳ್ಳಿ ಅವರು ಹೇಳಿದರು. ಯುವ ಕಾಂಗ್ರೆಸ್‌ ನೇತೃತ್ವದಲ್ಲಿ ಉಡುಪಿಯ ಕಿದಿಯೂರು ಹೊಟೇಲ್‌ ಶೇಷಶಯನ ಸಭಾಂಗಣದಲ್ಲಿ ಜ. 31ರಂದು ನಡೆದ “ಯುವ ದೃಷ್ಟಿ’ ಮಂಗಳೂರು ವಲಯ ಯುವಕಾಂಗ್ರೆಸ್‌ ನಾಯಕತ್ವ ಅಭಿವೃದ್ಧಿ ತರಬೇತಿ ಕಾರ್ಯಾಗಾರವನ್ನು […]

ಜ.27ರಂದು ರಾಹುಲ್ ಗಾಂಧಿ ರಾಜ್ಯಕ್ಕೆ, ವಿವಿಧ ಜಿಲ್ಲೆಗೆ ಭೇಟಿ

Thursday, January 4th, 2018
rahul-gandhi

ಬೆಂಗಳೂರು : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜನವರಿ 27ರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ. ಬಳ್ಳಾರಿ, ಚಿಕ್ಕಬಳ್ಳಾಪುರ, ಮೈಸೂರು ಮತ್ತು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಸಚಿವ ರಮೇಶ ಜಾರಕಿಹೊಳಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ‘ಜನವರಿ 27ರಂದು ರಾಹುಲ್ ಗಾಂಧಿ ಹೊಸಪೇಟೆಯಲ್ಲಿ ಪರಿಶಿಷ್ಟ ಪಂಗಡದ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ’ ಎಂದರು. ಜನವರಿ 28ರಂದು ಚಿಕ್ಕಬಳ್ಳಾಪುರಕ್ಕೆ ಅವರು ಭೇಟಿ ನೀಡುತ್ತಿದ್ದು, ವಿದುರಾಶ್ವಥದಲ್ಲಿ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ಅಂದು ಮೈಸೂರಿಗೂ ಭೇಟಿ ನೀಡಿ ವಿದ್ಯಾರ್ಥಿಗಳು, ಚಿಂತಕರೊಂದಿಗೆ ಸಂವಾದ ನಡೆಸಲಿದ್ದಾರೆ. ಕರ್ನಾಟಕದಲ್ಲಿ […]

‘ಕಾಂಗ್ರೆಸ್‌ನಿಂದ ದೇವಸ್ಥಾನ ರಾಜಕೀಯ’

Tuesday, January 2nd, 2018
Rahul-gandhi

ಮಂಗಳೂರು: ಕಾಂಗ್ರೆಸ್‌ ಮತ್ತು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಚುನಾವಣಾ ದೃಷ್ಟಿಯಿಂದ ಹಿಂದೂ ದೇವರ ಮೇಲೆ ವಿಪರೀತ ನಂಬಿಕೆ ಇರುವಂತೆ ನಟಿಸುತ್ತಿದ್ದು, ಚುನಾವಣೆಗಾಗಿ ಗುಜರಾತಿನಲ್ಲಿ ರಾಹುಲ್ ಗಾಂಧಿ ದೇವಸ್ಥಾನಗಳಿಗೆ ಭೇಟಿ ನೀಡುವ ಗಿಮಿಕ್ ರಾಜಕೀಯ ರಾಜ್ಯದಲ್ಲೂ, ಅದರಲ್ಲೂ ಮಂಗಳೂರು ಕ್ಷೇತ್ರದಲ್ಲೂ ನಡೆಯುತ್ತಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಮಾಯಣ, ಮಹಾಭಾರತ ಎಂಬುದು ನಡೆದೇ ಇಲ್ಲ, ರಾಮಸೇತು ಕಾಲ್ಪನಿಕ ಎಂದವರು, ಪರಮ ಪಾವನ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಕೋಳಿ, […]