ಬೈಕ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಸಹ ಸವಾರ ಸಾವು – ಅಂಗಾಂಗ ದಾನ

Tuesday, May 31st, 2022
deeraj

ಮಂಗಳೂರು : ಬಿಕರ್ನಕಟ್ಟೆ ರಾ.ಹೆ 73ರಲ್ಲಿ ಡಿವೈಡರ್ ಗೆ ಬೈಕ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಸಹ ಸವಾರ ಸೋಮವಾರ ರಾತ್ರಿ ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ್ದು, ಮೃತರ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಶನಿವಾರ ತಡರಾತ್ರಿ ಗಣೇಶ್ ತನ್ನ ಸ್ನೇಹಿತ ಧೀರಜ್ ನನ್ನು ಮನೆಗೆ ಬಿಟ್ಟು ಬರುವುದಾಗಿ ಬೈಕ್ ನಲ್ಲಿ ತೆರಳಿದ್ದ ವೇಳೆ, ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್ ಗೆ ಢಿಕ್ಕಿ ಹೊಡೆದು ಸವಾರರು ಗಂಭೀರ ಗಾಯಗೊಂಡಿದ್ದರು. ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಮೂರು ದಿನಗಳಿಂದ ಚಿಕಿತ್ಸೆ […]

ಸಂಚಾರಿ ವಿಜಯ್ ಗೆ ಶ್ರದ್ಧಾಂಜಲಿ, ಮರಣದ ಬಳಿಕ ಅಂಗಾಂಗ ದಾನ ಮಾಡುವುದಾಗಿ ಘೋಷಿಸಿದ ಅಭಯಚಂದ್ರ ಜೈನ್

Friday, June 18th, 2021
Abhayachandra Jain

ಮಂಗಳೂರು  : ನಟ ಸಂಚಾರಿ ವಿಜಯ್ ಮರಣ ನಂತರವೂ ಏಳು ಜನರಿಗೆ ಅಂಗಗಳನ್ನು ನೀಡಿ ಇತರರಿಗೆ ಜೀವದಾನದ ಮಾದರಿಯಾಗಿದ್ದಾರೆ ಎಂದು ಮಾಜಿ ಸಚಿವ ಅಭಯ ಚಂದ್ರ ಜೈನ್ ತಿಳಿಸಿದ್ದಾರೆ. ದ.ಕ. ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿಂದು ಸಂಚಾರಿ ವಿಜಯ್ ಭಾವಚಿತ್ರಕ್ಕೆ ಹೂಮಾಲೆ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಿದ ಅವರು, ಮರಣಾ ನಂತರ ತಾನೂ ಕೂಡಾ ತನ್ನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿರುವುದಾಗಿ ಪ್ರಕಟಿಸಿದರು. ನಾನು  ಮರಣ ಹೊಂದಿದ  ಬಳಿಕ ನನ್ನ ಅಂಗಾಂಗಳನ್ನು ದಾನ ಮಾಡುವಂತೆ   ವಿಲ್  ಬರೆಯಲು ನಿರ್ಧರಿಸಿದ್ದೇನೆ ಎಂದು ಹೇಳಿದ ಅವರು, ದ.ಕ. ಜಿಲ್ಲಾ […]

ನಟ ಸಂಚಾರಿ ವಿಜಯ್‌ ಅಂಗ ಜೋಡಣೆಯಿಂದ ಮರು ಜೀವ ಪಡೆದ ಮೂವರು ಅದೃಷ್ಟ ವಂತರು

Tuesday, June 15th, 2021
Sanchari-Vijay

ಬೆಂಗಳೂರು: ಬೈಕ್‌ ಅಪಘಾತದಲ್ಲಿ ಮೃತಪಟ್ಟ ನಟ ಸಂಚಾರಿ ವಿಜಯ್‌ ಅವರ ಅಂಗಾಂಗಗಳನ್ನು  ಅಗತ್ಯ ಇರುವವರಿಗೆ ನೀಡುವ ಕುಟುಂಬಸ್ಥರು  ದಾನ ಮಾಡಿದ್ದಾರೆ. ವಿಜಯ್‌ ಅವರ ಮೂತ್ರಪಿಂಡಗಳನ್ನು ಲಗ್ಗೆರೆ ಮೂಲದ 34 ವರ್ಷದ ಮಹಿಳೆಯೊಬ್ಬರಿಗೆ ಚಿಕಿತ್ಸೆ ಮೂಲಕ ಜೋಡಣೆ ಮಾಡಲಾಗಿದೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ ಎಂದು ಬೆಂಗಳೂರಿನ ಎಂ ಎಸ್ ರಾಮಯ್ಯ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ವಿಜಯ್‌ ಅವರ ಬ್ಲಡ್ ಗ್ರೂಪ್ , ಡಿ ಎನ್ ಎ , ಕಿಡ್ನಿ ಸೈಜ್ ಎಲ್ಲವೂ ಮಹಿಳೆಗೆ ಮ್ಯಾಚ್ ಆಗಿತ್ತು. ಈ ಹಿನ್ನೆಲೆಯಲ್ಲಿ ವಿಜಯ್ […]

ಬೈಕ್ ಅಪಘಾತದಲ್ಲಿ ವಿದ್ಯಾರ್ಥಿ ಮೃತ್ಯು : ಅಂಗಾಂಗ ದಾನಕ್ಕೆ ಕುಟುಂಬ ನಿರ್ಧಾರ

Saturday, March 14th, 2020
kushal

ಮಂಗಳೂರು : ನಗರದ ಬಿಜೈ ಬಳಿ ಬೈಕ್ ಸ್ಕಿಡ್‌ನಿಂದಾಗಿ ಗಂಭೀರ ಗಾಯಗೊಂಡ ನಗರದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ರಾಮನಗರ ಜಿಲ್ಲೆಯ ಕುಶಾಲ್ ಕುಮಾರ್ (19) ಮೃತಪಟ್ಟ ವಿದ್ಯಾರ್ಥಿ. ಗುರುವಾರ ಬೆಳಗ್ಗೆ ಕುಶಾಲ್ ಅವರು ತನ್ನ ಪಿಜಿಯಿಂದ ಬೈಕ್‌ನಲ್ಲಿ ಜಿಮ್‌ಗೆ ಹೋಗುತ್ತಿದ್ದಾಗ ಬಿಜೈ-ಕೆಎಸ್ಸಾರ್ಟಿಸಿ ರಸ್ತೆಯಲ್ಲಿ ಬೈಕ್ ಸ್ಕಿಡ್ ಆಗಿದೆ. ಇದರ ಪರಿಣಾಮ ತಲೆಯ ಹಿಂಭಾಗಕ್ಕೆ ಗಂಭೀರ ಗಾಯವಾಗಿದ್ದು, ಕೂಡಲೇ ಸ್ಥಳೀಯರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ನಿಗಾ […]

ಮೈಸೂರು : ಮೆದುಳು ನಿಷ್ಕ್ರೀಯಗೊಂಡ ಯುವಕನ ಅಂಗಾಂಗ ದಾನ

Tuesday, December 17th, 2019
apollo

ಮೈಸೂರು : ಶ್ರೀರಂಗಪಟ್ಟಣದಲ್ಲಿ ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕರೋರ್ವರ ಮೆದುಳು ನಿಷ್ಕ್ರೀಯಗೊಂಡ ಕಾರಣ ಅವರ ದೇಹದ ವಿವಿಧ ಅಂಗಾಂಗಗಳನ್ನು ಅವರ ಮನೆಯವರು ದಾನ ಮಾಡುವ ಮೂಲಕ ಚಂದ್ರಶೇಖರ್ ಸಾವಿನಲ್ಲೂ ಸಾರ್ಥಕತೆ ಕಾಣುವಂತೆ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಡಿ.14ರಂದು ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಮೈಸೂರು ನಿವೇದಿತಾ ನಗರದ 27ವರ್ಷದ ಚಂದ್ರಶೇಖರ್ ಎಂಬ ಯುವಕರೋರ್ವರನ್ನು ಅಪೋಲೋ ಬಿಜಿಎಸ್ ಆಸ್ಪತ್ರೆಗೆ ಚಕಿತ್ಸೆಗಾಗಿ ದಾಖಲಿಸಲಾಗಿತ್ತು. 24ಗಂಟೆಗಳ ಕಾಲ ತೀವ್ರ ನಿಗಾಘಟಕದಲ್ಲಿರಿಸಿ […]

ವಿದ್ಯಾರ್ಥಿನಿ ತರಗತಿಯಲ್ಲಿ ಕುಸಿದು ಬಿದ್ದು ಮೃತ್ಯು : ಪೋಷಕರಿಂದ ಅಂಗಾಂಗ ದಾನ

Thursday, December 5th, 2019
Rimple

ಗಾಂಧಿನಗರ : ತರಗತಿಯಲ್ಲಿ ವಿದ್ಯಾರ್ಥಿನಿ ಕುಸಿದು ಬಿದ್ದು ಮೃತಪಟ್ಟ ಘಟನೆ ಗುಜರಾತಿನ ಸೂರತ್‍ನಲ್ಲಿ ನಡೆದಿದ್ದು, ಪೋಷಕರು ಆಕೆಯ ಅಂಗಾಂಗ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ರಿಂಪಲ್(12) ಮೃತಪಟ್ಟ ಬಾಲಕಿ. ಭಾವೇಶ್‍ಬಾಯಿ ಸಂಗಾಣಿ ಮಗಳಾಗಿರುವ ರಿಂಪಲ್ ಪಿಪಿ ಸವಾಣಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದಳು. ಮಂಗಳವಾರ ರಿಂಪಲ್ ತರಗತಿಯಲ್ಲೇ ಏಕಾಏಕಿ ಕುಸಿದು ಬಿದ್ದಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ವೈದ್ಯರು ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದರು. ಮಂಗಳವಾರ ಬೆಳಗ್ಗೆ ರಿಂಪಲ್ ತರಗತಿಯಲ್ಲಿ ಭಾಷಣ ಮಾಡಿದ […]