ಅಂತಾರಾಜ್ಯ ಜಲವಿವಾದ ಇತ್ಯರ್ಥಕ್ಕೆ ಸಮಗ್ರ ಜಲನೀತಿ ಅಗತ್ಯ: ಐವನ್‌ ಡಿ.ಸೋಜಾ

Thursday, September 15th, 2016
ivan-dsouza

ಮಂಗಳೂರು: ಅಂತಾರಾಜ್ಯ ಜಲವಿವಾದಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ರಾಷ್ಟ್ರದಲ್ಲಿ ನಿರ್ದಿಷ್ಟವಾದ ಜಲನೀತಿ ಇಲ್ಲ. ದೇಶಕ್ಕೆ ಒಂದು ಸಮಗ್ರವಾದ ಜಲನೀತಿಯ ಅಗತ್ಯವಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ. ಸೋಜಾ ಹೇಳಿದ್ದಾರೆ. ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ನೀರಿನ ವ್ಯಾಜ್ಯಗಳ ಇತ್ಯರ್ಥಕ್ಕಾಗಿ ಜಲನೀತಿಯನ್ನು ಜಾರಿಗೊಳಿಸಬೇಕು. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರವೇಶಿಸಬೇಕು. ಸರ್ವೋಚ್ಛ ನ್ಯಾಯಾಲಯದ ಆದೇಶವು ಕೇವಲ ಕಾನೂನಿನ ಪರಿಧಿಯಲ್ಲಿ ಆಗಿದೆ. ತೀರ್ಪು ವಸ್ತುಸ್ಥಿತಿಯ ಪ್ರತಿಫಲನವಲ್ಲ. ತಂತ್ರಜ್ಞರ ಸಮಿತಿ […]