ಉಳ್ಳಾಲ,ಸೋಮೇಶ್ವರ,ಉಚ್ಚಿಲದಲ್ಲಿ ತೀವ್ರಗೊಂಡ ಕಡಲಿನಬ್ಬರ
Monday, April 23rd, 2018ಉಳ್ಳಾಲ: ಹವಾಮಾನ ವೈಪರಿತ್ಯದಿಂದಾಗಿ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಪದೇಶಗಳಲ್ಲಿ ಕಡಲಿನ ಅಬ್ಬರ ತೀವ್ರಗೊಂಡಿದ್ದು, ಬೃಹತಾಕರಾದ ಅಲೆಗಳು ಸಮುದ್ರ ತೀರಕ್ಕೆ ಅಪ್ಪಳಿಸುತ್ತಿವೆ. ಕಡಲ್ಕೊರೆತ ತೀವ್ರಗೊಂಡ ಪರಿಣಾಮ ಉಚ್ಚಿಲ ಪ್ರದೇಶದ ಕೆಲವು ಮನೆಗಳಿಗೆ ಹಾನಿಯಾಗಿದೆ. ಶನಿವಾರ ರಾತ್ರಿಯಿಂದಲೇ ಈ ಭಾಗದಲ್ಲಿ ಕಡಲ್ಕೊರೆತದ ತೀವ್ರತೆ ವೀಪರೀತವಾಗಿದ್ದು, ಕಡಲ ತಡಿಯ ಜನರು ಭಯಭೀತರಾಗಿದ್ದಾರೆ. ಸೋಮೇಶ್ವರ, ಉಚ್ಚಿಲದಲ್ಲಿ ನಾಲ್ಕು ಮನೆಗಳಿಗೆ ಹಾನಿಯಾಗಿದ್ದು, ರವಿವಾರ ಮಧ್ಯಾಹ್ನವೇ ಉಳ್ಳಾಲ ಸೋಮೇಶ್ವರ ಪ್ರದೇಶದಲ್ಲಿ ಕಡಲು ಪ್ರಕ್ಷುಬ್ದಗೊಂಡಿದ್ದು, ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಪ್ರತಿ ವರ್ಷ ಮಳೆಗಾಲ ಆರಂಭದ ಬಳಿಕವಷ್ಟೇ […]