ಗುಜರಿ ಗ್ಯಾಸ್ ಸಿಲಿಂಡರ್ ಸ್ಫೋಟ : ಇಬ್ಬರು ಸಜೀವ ದಹನ

Monday, March 21st, 2022
Gas Cylinder Blast

ಉಡುಪಿ : ಗುಜರಿಗೆ ಬಂದಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಇಬ್ಬರು ಸಜೀವ ದಹನಗೊಂಡ ಘಟನೆ ಇಂದು ಬೆಳಗ್ಗೆ ಮಲ್ಲಾರು ಸಲಫಿ ಮಸೀದಿ ಸಮೀಪದಲ್ಲಿರುವ ಗುಜರಿ ಅಂಗಡಿಯಲ್ಲಿ ನಡೆದಿದೆ. ಚಂದ್ರನಗರದ ರಜಬ್ ಹಾಗೂ ಇನ್ನೊಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇನ್ನೋರ್ವ ಪಾಲುದಾರ ಹಸನಬ್ಬ, ಬೆಳಪು ಗ್ರಾಪಂ ಸದಸ್ಯ ಫಹೀಮ್ ಬೆಳಪು ಸೇರಿದಂತೆ ಮೂವರು ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಗಡಿಯಲ್ಲಿ ಗುಜರಿಗೆ ಬಂದಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ. ಸ್ಫೋಟದ ತೀವ್ರತೆಗೆ ಇಬ್ಬರು ಮೃತಪಟ್ಟಿದ್ದಾರೆ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ, ಬೆಂಕಿ […]

ಮಂಗಳೂರು ಮಿನಿ ವಿಧಾನಸೌಧದ ಲಿಫ್ಟ್‌ನಲ್ಲಿ ಸಿಲುಕಿಕೊಂಡ ಮೂವರು ಹಿರಿಯ ನಾಗರಿಕರು

Saturday, July 10th, 2021
mangaloreMiniVidhanaSoudha

ಮಂಗಳೂರು: ನಗರದ ಮಿನಿ ವಿಧಾನಸೌಧದ ಲಿಫ್ಟ್‌ನಲ್ಲಿ ಸಿಲುಕಿಕೊಂಡ ಮೂವರು ಹಿರಿಯ ನಾಗರಿಕರನ್ನು ಶುಕ್ರವಾರ ಬೆಳಗ್ಗೆ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಕಚೇರಿ ಕೆಲಸದಲ್ಲಿ ಮಿನಿ ವಿಧಾನಸೌಧಕ್ಕೆ ಬಂದಿದ್ದ ಮೂವರು ಹಿರಿಯ ನಾಗರಿಕರು ಲಿಫ್ಟ್ ಹತ್ತಿದ್ದರು. ಇವರಲ್ಲಿ ಒಬ್ಬರು ಮಹಿಳೆ, ಇಬ್ಬರು ಪುರುಷರಿದ್ದರು. ಇವರು ಲಿಫ್ಟ್ ಏರಿದ ಕೆಲವೇ ಕ್ಷಣಗಳಲ್ಲಿ ಅರ್ಧದಲ್ಲೇ ಸ್ಥಗಿತಗೊಂಡಿತ್ತು. ವಿಷಯ ತಿಳಿದ ಅಧಿಕಾರಿಗಳು ಪಾಂಡೇಶ್ವರ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಲಿಫ್ಟ್‌ನಲ್ಲಿ ಸಿಲುಕಿದ್ದವರನ್ನು ರಕ್ಷಿಸಿದರು. ತಾಂತ್ರಿಕ ದೋಷದಿಂದ ಲಿಫ್ಟ್ ಕೆಟ್ಟಿರಬಹುದು […]

ಬ್ಯಾಟರಿ ಶಾರ್ಟ್ ಸರ್ಕ್ಯೂಟ್ – ಕಾರು ಚಲಿಸುತ್ತಿರುವಾಗಲೇ ಬೆಂಕಿ

Tuesday, March 16th, 2021
Mudradi Car

ಹೆಬ್ರಿ :  ಮಂಗಳವಾರ ಮುಂಜಾನೆ ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಕಾರು ಸಂಪೂರ್ಣವಾಗಿ ಹೊತ್ತಿ ಉರಿದ ಘಟನೆ ತಾಲೂಕಿನ ಮುದ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೋಮೇಶ್ವರ ರಸ್ತೆಯಲ್ಲಿ ನಡೆದಿದೆ. ಘಟನೆಯಲ್ಲಿ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾವೇರಿ ಮೂಲದ ರಮೇಶ್ ಎಂಬವರು ಹಿರಿಯಡ್ಕದಲ್ಲಿ ಪೂಜೆ ಕಾರ್ಯಕ್ರಮ ಮುಗಿಸಿ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ತನ್ನ ಮಾರುತಿ ಆಲ್ಟೋ ಕಾರಿನಲ್ಲಿ ಮನೆಗೆ ವಾಪಾಸುಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ತಕ್ಷಣ ಅವರು ಕಾರಿನಿಂದ ಕೆಳಗಿದು ಬಚಾವ್ ಆಗಿದ್ದಾರೆ. ಸ್ಥಳಕ್ಕಾಗಮಿಸಿದ […]

ಕಾರು ಗ್ಯಾರೇಜ್ ನಲ್ಲಿ ಬೆಂಕಿ, ಸುಟ್ಟು ಕರಕಲಾದ ಕಾರುಗಳು

Monday, March 15th, 2021
Car Garage

ವಿಟ್ಲ : ನಗರ ಹೊರವಲಯದ ಚಂದಳಿಕೆ ಎಂಬಲ್ಲಿ ಗ್ಯಾರೇಜ್ ವೊಂದು ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ. ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದ ಗ್ಯಾರೇಜ್ ಭಾಗಶಃ ಸುಟ್ಟು ಕರಕಲಾಗಿತ್ತು. ಗ್ಯಾರೇಜ್ ಒಳಗಡೆ ರಿಪೇರಿಗೆಂದು ಇರಿಸಲಾಗಿದ್ದ ಕೆಲವೊಂದು ಕಾರುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ತಕ್ಷಣ ಪುತ್ತೂರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದರೂ ಅವರು ಸ್ಥಳಕ್ಕಾಗಮಿಸುವಷ್ಟರಲ್ಲಿ ಗ್ಯಾರೇಜ್ ಭಾಗಶಃ ಸುಟ್ಟು ಸುಟ್ಟು  ಹೋಗಿದೆ. ಕಾರು ಗ್ಯಾರೇಜ್  ಚಂದಳಿಕೆ ಹರೀಶ್ ಎಂಬವರದ್ದಾಗಿದೆ.  ಗ್ಯಾರೇಜ್ ಒಳಗಡೆ 10ಕ್ಕಿಂತಲೂ ಅಧಿಕ ವಾಹನಗಳಿದ್ದವು. ಬೆಂಕಿ ಕಾಣಿಸಿಕೊಂಡ ಕೂಡಲೇ […]

ಕೂಳೂರು ಮೇಲ್ಸೇತುವೆಯಿಂದ ಹಾರಿದ ವ್ಯಕ್ತಿ ನಾಪತ್ತೆ

Tuesday, November 3rd, 2020
Kuluru River

ಮಂಗಳೂರು : ಪ್ರತ್ಯಕ್ಷದರ್ಶಿಯೊಬ್ಬರು  ಕೂಳೂರು ಮೇಲ್ಸೇತುವೆಯಿಂದ ಮಂಗಳವಾರ ಬೆಳಗ್ಗೆ ವ್ಯಕ್ತಿಯೋರ್ವ ನದಿಗೆ ಹಾರಿರುವ  ಬಗ್ಗೆ  ಪೊಲೀಸರಿಗೆ ದೂರು  ನೀಡಿದ ಹಿನ್ನಲೆಯಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ. ಇಂದು ಬೆಳಗ್ಗೆ 10:30ರ ಸುಮಾರಿಗೆ ವ್ಯಕ್ತಿಯೊಬ್ಬರು ಮೇಲ್ಸೇತುವೆಯಲ್ಲಿ ಸ್ವಲ್ಪ ನಡೆದು ಬಳಿಕ ನದಿಗೆ ಹಾರಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ‌‌ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕಾಗಮಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಪಣಂಬೂರು ಹಾಗೂ ಕಾವೂರು ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಜತೆಗೆ ಅಗ್ನಿಶಾಮಕ ದಳವೂ ಸ್ಥಳದಲ್ಲಿ ಕಾರ್ಯಾಚರಣೆ […]

ಬಲ್ಮಠ ಬ್ಯಾಂಕ್ ಆಫ್ ಬರೋಡದ ಶಾಖಾ ಕಚೇರಿಯಲ್ಲಿ ಬೆಂಕಿ ಅವಘಡ

Wednesday, September 30th, 2020
Bankof Baroda

ಮಂಗಳೂರು : ನಗರದ ಬಲ್ಮಠದಲ್ಲಿರುವ ಬ್ಯಾಂಕ್ ಆಫ್ ಬರೋಡದ ಶಾಖಾ ಕಚೇರಿಯಲ್ಲಿ ಇಂದು ಮುಂಜಾನೆ ಸಂಭವಿಸಿದ  ಬೆಂಕಿ‌ ಅನಾಹುತದಲ್ಲಿ ಐದು ಹವಾನಿಯಂತ್ರಣ ಯಂತ್ರ, ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳು ಸುಟ್ಟುಹೋಗಿವೆ. ಮುಂಜಾನೆ ‌5:30ರಿಂದ 6 ಗಂಟೆಯ‌ ಮಧ್ಯೆ‌ ಈ ಅನಾಹುತ ಸಂಭವಿಸಿದೆ ಎನ್ನಲಾಗುತ್ತಿದೆ. ಕೂಡಲೇ  ಅಗ್ನಿಶಾಮಕ ದಳ ಸ್ಥಳಕ್ಕೆಆಗಮಿಸಿ ಬೆಂಕಿಯನ್ನು ನಂದಿಸಲು ಸಫಲವಾಯಿತು. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ‌ ಅನಾಹುತ ನಡೆದಿದೆ ಎಂದು ಹೇಳಲಾಗುತ್ತಿದೆ. ದುರಂತದ ಬಗ್ಗೆ ‌ಬ್ಯಾಂಕ್ ಅಧಿಕಾರಿಗಳು ಮತ್ತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗ‌ […]

ಸ್ಕೂಟರ್ ಮತ್ತು ಟ್ಯಾಂಕರ್ ಡಿಕ್ಕಿ- ತಂದೆ ಮಗಳು ಸಾವು

Tuesday, September 29th, 2020
Karawar Accident

ಕಾರವಾರ: ಸ್ಕೂಟರ್ ಮತ್ತು ಟ್ಯಾಂಕರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ತಂದೆ ಹಾಗೂ ಮಗಳು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಮಂಗಳವಾರ  ನಡೆದಿದೆ. ಯಲ್ಲಾಪುರದ ಅರೆಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಈ ಘಟನೆ ನಡೆದಿದೆ. ವಿನೋದ್ ಕಿಂದಳಕರ್ (56) ಹಾಗೂ ಅವರ ಮಗಳು ಸುನೇಹಾ ಕಿಂದಳಕರ್ (12) ಮೃತ ದುರ್ದೈವಿಗಳು. ವಿನೋದ್ ಕಿಂದಳಕರ್ ಯಲ್ಲಾಪುರದ ಅಗ್ನಿಶಾಮಕ ದಳ ಠಾಣೆಯಲ್ಲಿ ಪ್ರಮುಖ ಅಗ್ನಿಶಾಮಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮಗಳನ್ನು ಯಲ್ಲಾಪುರದಿಂದ ತಮ್ಮ […]

ಕೂಳೂರು ಚರ್ಚ್‌ನ ತಡೆಗೋಡೆ ಕುಸಿದು ಕಾರ್ಮಿಕ ಮೃತ್ಯು, ಇಬ್ಬರಿಗೆ ಗಾಯ

Saturday, September 19th, 2020
kulooru Compound

ಮಂಗಳೂರು : ಕಳೆದ ಎರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿವರುವ ಮಳೆಯ ನಡುವೆ ಮುಂಜಾಗ್ರತೆಯಿಲ್ಲದೆ ಕೆಲಸ ಕೈ ಗೊಂಡ ಪರಿಣಾಮ ಕೂಳೂರಿನ ಸೈಂಟ್ ಆ್ಯಂಟನಿ ಚರ್ಚ್‌ನ ತಡೆಗೋಡೆ ಕುಸಿದು ಕಾರ್ಮಿಕನೋರ್ವ ಮಣ್ಣಿನಡಿಯಲ್ಲಿ ಸಿಲುಕಿ ಮೃತಪಟ್ಟ ಘಟನೆ ಶನಿವಾರ  ಬೆಳಗ್ಗೆ ನಡೆದಿದೆ. ಮೃತರನ್ನು ನೀರುಮಾರ್ಗ ನಿವಾಸಿ ಉಮೇಶ್(37) ಎಂದು ಗುರುತಿಸಲಾಗಿದೆ. ತಡೆಗೋಡೆ ಕುಸಿದ ಸ್ಥಳದಲ್ಲೇ ಉಮೇಶ ಕೆಲಸ ಮಾಡುತ್ತಿದ್ದರೆನ್ನ ಲಾಗಿದೆ. ಉಳಿದ ಇಬ್ಬರು ಕಾರ್ಮಿಕರಾದ ಬಸವರಾಜ್ ಹಾಗೂ ನಾರಾಯಣ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಹಾಗೂ ಪೊಲೀಸರು ಮಣ್ಣಿನಡಿಗೆ ಸಿಲುಕಿದ್ದ ಉಮೇಶ್ […]

ಕಲ್ಲಾಪು : ಹಾಸಿಗೆಯ ಗೋಡಾನ್ ನಲ್ಲಿ ಅಗ್ನಿ ದುರಂತ

Saturday, October 19th, 2019
Agni

ಉಳ್ಳಾಲ : ಕಲ್ಲಾಪು ಪಟ್ಲದಲ್ಲಿ ಹಾಸಿಗೆ ಶೇಖರಿಸಿಟ್ಟಿದ್ದ ಗೋಡಾನ್‌ವೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಶನಿವಾರ ಸಂಭವಿಸಿದೆ. ತೊಕ್ಕೊಟ್ಟಿನ ಸಪ್ನಾ ಎಂಟರ್ ಪ್ರೈಸಸ್‌ಗೆ ಸೇರಿದ ಗೋಡಾನ್ ಇದಾಗಿದೆ. ಬೆಂಕಿಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಬೆಂಕಿ ನಂದಿಸುವಲ್ಲಿ ಶ್ರಮಿಸಿದರು. ಶಾರ್ಟ್ ಸರ್ಕ್ಯೂಟ್ ನಿಂದ ಈ ಬೆಂಕಿ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.  

ಮಂಜೇಶ್ವರ : ಬೆಂಕಿಗಾಹುತಿಯಾದ ಅಲ್ಫಾ ಬೇಕರಿ

Monday, September 9th, 2019
alfaa-bekari

ಮಂಜೇಶ್ವರ : ಮಂಜೇಶ್ವರ ಒಳಗಿನ ಪೇಟೆಯಲ್ಲಿ ಬೇಕರಿಯೊಂದು ಶಾರ್ಟ್ ಸೆಕ್ಯೂರ್ಟ್ ನಿಂದ ಉಂಟಾದ ಬೆಂಕಿಯಿಂದಾಗಿ ಸಂಪೂರ್ಣ ಬೆಂಕಿ ಗಾಹುತಿಯಾದ ಘಟನೆ ತಡರಾತ್ರಿ ನಡೆದಿದೆ. ಸೋಮವಾರ ಬೆಳಗ್ಗೆ ಪತ್ರಿಕೆ ಹಾಕುತ್ತಿದ್ದ ವ್ಯಕ್ತಿ ಅಂಗಡಿಯೊಳಗಿಂದ ಹೊಗೆ ಬರುತ್ತಿರುವುದ್ದನ್ನು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ಹಮೀದ್ ಮಾಲಕತ್ವದ ಅಲ್ಫಾ ಬೇಕರಿಯ ಸುಮಾರು ಮೂರು ಲಕ್ಷಕ್ಕೂ ಹೆಚ್ಚಿನ ಸಾಮಾಗ್ರಿಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಉಪ್ಪಳದಿಂದ ತಲುಪಿದ ಅಗ್ನಿಶಾಮಕ ದಳ ಹಾಗೂ ಮಂಜೇಶ್ವರ ಪೊಲೀಸರು ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸಿದರು.