ನಾಗರಪಂಚಮಿಗೂ ಕೊರೋನಾ ಎಫೆಕ್ಟ್, ದೇವಸ್ಥಾನಕ್ಕೆ ಭಕ್ತರಿಗಿಲ್ಲ ಪ್ರವೇಶ..!

Friday, July 24th, 2020
naragapanchami

ಮಂಗಳೂರು: ಕೊರೋನಾ  ಎಫೆಕ್ಟ್ ಈ ಬಾರಿಯ ಹಬ್ಬಗಳ ಆಚರಣೆಗೂ ತಟ್ಟಿದೆ, ಹಿಂದೂ ಹಬ್ಬಗಳಲ್ಲಿ ಮೊದಲಿಗೆ ಬರುವ ಹಬ್ಬ ನಾಗರ ಪಂಚಮಿ. ಅದಕ್ಕೂ ಕೊರೋನಾಮಹಾಮಾರಿ ತಡೆಯೊಡ್ಡಿದೆ. ಈ ಬಾರಿ ನಾಗರ ಪಂಚಮಿಯನ್ನು ಭಕ್ತರು ದೇವಸ್ಥಾನಗಳಿಗೆ ತೆರಳಿ ಆಚರಿಸುವಂತಿಲ್ಲ. ಮಂಗಳೂರು ಸಮೇತ ರಾಜ್ಯದ ಎಲ್ಲಾ ನಾಗ ದೇವಸ್ಥಾನಗಳಲ್ಲಿ ನಾಗರಪಂಚಮಿ ಜುಲೈ 25 ರ ಶನಿವಾರ  ಆಚರಿಸುವಂತಿಲ್ಲ. ಮಂಗಳೂರಿನ ಇತಿಹಾಸ ಪ್ರಸಿದ್ದ ಕುಡುಪು‌ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಈ ಬಾರಿ ಅರ್ಚರು ಮಾತ್ರ ನಾಗನಿಗೆ ಹಾಲೆರೆಯುವ ಮತ್ತು ಇತರ ಸೇವೆಗಳನ್ನು ಮಾಡಲಿದ್ದಾರೆ. ಮಂಗಳೂರಿನ […]

ಅನಂತಪದ್ಮನಾಭನಿಗೆ ವೈಭವದ ಬ್ರಹ್ಮಕಳಶೋತ್ಸವ

Thursday, February 8th, 2018
ananthapadbanabh

ಮಂಗಳೂರು: ಇಲ್ಲಿನ ಕಡಪುವಿನ ಅನಂತಪದ್ಮನಾಭ ದೇವಾಲಯದಲ್ಲಿ ಫೆಬ್ರವರಿ 18 ರಿಂದ 25ರ ವರೆಗೆ ಬ್ರಹ್ಮಕಳಶೋತ್ಸವ ಆಯೋಜಿಸಲಾಗಿದೆ. ಫೆಬ್ರವರಿ 25ರಂದು ದೇವರಿಗೆ ಬ್ರಹ್ಮಕಳಶೋತ್ಸವ ನಡೆಯಲಿದೆ. ವಾರಗಳ ಕಾಲ ನಡೆಯುವ ಬ್ರಹ್ಮಕಳಶೋತ್ಸವ ಕಾರ್ಯಕ್ರಮಕ್ಕೆ ರಾಜ್ಯದಾದ್ಯಂತದಿಂದ ಭಕ್ತಾಧಿಗಳು ಆಗಮಿಸಲಿದ್ದಾರೆ. ಬ್ರಹ್ಮಕಳಶೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳು ದೇವರಿಗೆ ಹಸಿರು ಹೊರೆ ಕಾಣಿಕೆ ಅರ್ಪಿಸುವುದು ಮುಂಚಿನಿಂದಲೂ ನಡೆದು ಬಂದಿರುವ ಪ್ರತೀತಿ.ಬ್ರಹ್ಮಕಳಶೋತ್ಸವದ ಬಗ್ಗೆ ಹಾಗೂ ಹೊರೆ ಕಾಣಿಕೆ ಬಗ್ಗೆ ಪೂರ್ಣ ಮಾಹಿತಿಯನ್ನು ನಾಳೆ (ಫೆ.09) ಮಧ್ಯಾಹ್ನ 12ಗಂಟೆಗೆ ನಗರದ ವುಡ್‌ಲ್ಯಾಂಡ್‌ ಹೊಟೆಲ್‌ನಲ್ಲಿ ನಡೆಯುವ ಪತ್ರಿಕಾಗೋಷ್ಠಿಯಲ್ಲಿ ವಿನಿಮಯ ಮಾಡಿಕೊಳ್ಳಲಾಗುತ್ತದೆ […]