ಮಂಗಳೂರು : ಲಾಕ್ ಡೌನ್ ಹಿನ್ನೆಲೆಯಲ್ಲಿ ಅಗತ್ಯ ಸೇವೆಗಳನ್ನು ಒದಗಿಸುವವರಿಗೆ ಆನ್ ಲೈನ್ ಮೂಲಕ ಪಾಸುಗಳಿಗೆ ಅರ್ಜಿ ಸಲ್ಲಿಸುವ ಸೇವೆ ಇಂದಿನಿಂದ ( ಏಪ್ರಿಲ್ 16) ಆರಂಭವಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಗತ್ಯ ಸೇವೆ ಒದಗಿಸುವರು ಪಾಸುಗಳಿಗೆ ಆನ್ ಲೈನ್ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.