ಪುತ್ತೂರು : ಕೊಡಿಪ್ಪಾಡಿ ಶೂಟೌಟ್ ಪ್ರಕರಣ; ಓರ್ವ ಪೊಲೀಸರ ವಶಕ್ಕೆ

Wednesday, November 27th, 2019
Abdul-Kader

ಪುತ್ತೂರು : ತಾಲೂಕಿನ ಕೊಡಿಪ್ಪಾಡಿ ಗ್ರಾಮದ ಕಲ್ಲಂದಡ್ಕ ಎಂಬಲ್ಲಿ ಮಂಗಳವಾರ ಸಂಜೆ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಪುತ್ತೂರು ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ. ಕಲ್ಲಂದಡ್ಕ ನಿವಾಸಿ ಅಬ್ದುಲ್ ಖಾದರ್(36) ಎಂಬವರ ಮೇಲೆ ಮಂಗಳವಾರ ಸಂಜೆ ಕಾರಿನಲ್ಲಿ ಬಂದ ತಂಡವೊಂದು ಗುಂಡಿನ ದಾಳಿ ನಡೆಸಿತ್ತು. ಈ ವೇಳೆ ಖಾದರ್‌ರ ಎದೆ ಭಾಗಕ್ಕೆ ಗುಂಡು ತಗುಲಿದೆ. ಗಾಯಾಳು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣದ ತನಿಖೆಗೆ ಪುತ್ತೂರು ಡಿವೈಎಸ್ಪಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಇದೀಗ […]

ಸೌದಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಪಡುಬಿದ್ರೆಯ ಯುವಕ ಸಾವು

Friday, October 18th, 2019
Abdul

ಪಡುಬಿದ್ರೆ : ಸೌದಿಯಲ್ಲಿ ನಡೆದ ಅಪಘಾತದಲ್ಲಿ ಪಡುಬಿದ್ರೆಯ ಯುವಕ ಮೃತಪಟ್ಟಿದ್ದಾನೆ. ಪಡುಬಿದ್ರೆಯ ಕಂಚಿನಡ್ಕ ನಿವಾಸಿ ಹಂಝ ಎಂಬವರ ಪುತ್ರ ಅಬ್ದುಲ್ ಖಾದರ್ (35) ಮೃತರು ಎಂದು ಗುರುತಿಸಲಾಗಿದೆ. ಅವರು ಸೌದಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದು, ಕಾರಿನಲ್ಲಿ ಪ್ರಾಯಾಣಿಸುತ್ತಿದ್ದಾಗ ಹೈಲ್ ನ 180 ಕಿಲೋ.ಮೀ. ದೂರದಿಂದ ತಯಾರ್ ಸ್ಪೋಟಗೊಂಡು ಅಪಘಾತ ಸಂಭವಿಸಿತ್ತು. ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಸ್ಪಂದಿಸದೆ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ. ಎಂದು ತಿಳಿದು ಬಂದಿದೆ. ಮೃತರ ತಂದೆ, ಪತ್ನಿ, ಪುತ್ರರು, ಸಹೋದದರು ಆಗಲಿದ್ದಾರೆ. ಮೃತದೇಹವನ್ನು ಸೌದಿಯಲ್ಲಿಯೇ […]

ಸಮುದಾಯ ಭವನಕ್ಕೆ ಜಮೀನು ಮಂಜೂರು ಮಾಡಲು ಒತ್ತಾಯಿಸಿ ಬ್ಯಾರಿ ಒಕ್ಕೂಟದಿಂದ ಸಿಎಂಗೆ ಮನವಿ

Saturday, December 16th, 2017
shringari

ಶೃಂಗೇರಿ: ಶೃಂಗೇರಿಯಲ್ಲಿ ಬ್ಯಾರಿ ಸಮುದಾಯ ಭವನ/ಬ್ಯಾರಿ ಸಾಂಸ್ಕೃತಿಕ ಕೇಂದ್ರ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡುವಂತೆ ಶೃಂಗೇರಿ ಕ್ಷೇತ್ರ ಬ್ಯಾರಿ ಒಕ್ಕೂಟವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ. ಇತ್ತೀಚೆಗೆ ಕೊಪ್ಪಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾದ ಒಕ್ಕೂಟದ ಅಧ್ಯಕ್ಷ ಅಬ್ದುಲ್ ಖಾದರ್ ಹಾಗೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಕೆ.ಮುಹಮದ್ ಅವರು ಈ ಮನವಿ ಸಲ್ಲಿಸಿದ್ದು, ಒಕ್ಕೂಟದ ಬಹುಕಾಲದ ಬೇಡಿಕೆಯಾಗಿರುವ ಸಮುದಾಯ ಭವನಕ್ಕೆ ಮೂರು ಎಕರೆ ಸರಕಾರಿ ಜಮೀನು ಮಂಜೂರು ಮಾಡುವಂತೆ ಮನವಿ ಮಾಡಿದರು.