ಮಕ್ಕಳ ಶಿಕ್ಷಣ ಭವಿಷ್ಯದಲ್ಲಿ ಪೋಷಕರ ಪಾತ್ರ ಹಿರಿದು : ಯು.ಟಿ.ಖಾದರ್

Monday, August 1st, 2016
Udyavara-School

ಮಂಜೇಶ್ವರ: ಮಕ್ಕಳ ಶಿಕ್ಷಣ ಉನ್ನತಿಯಲ್ಲಿ ಪೋಷಕರು ಬಹಳಷ್ಟು ಗಮನ ಹರಿಸಬೇಕು, ಪ್ರಾಥಾಮಿಕ ಹಂತದಲ್ಲಿಯೇ ಮಕ್ಕಳ ಶಿಕ್ಷಣದಲ್ಲಿ ಪೋಷಕರು ಸೂಕ್ಷ್ಮ ನಿಲುವು ಹೊಂದಿರಬೇಕು, ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರಿಗಿಂತಲೂ ರಕ್ಷಕರ ಪಾತ್ರ ಹಿರಿದಾದುದೆಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ. ಅವರು ಇಲ್ಲಿನ ಉದ್ಯಾವರ ಸರಕಾರಿ ಪ್ರೌಢಶಾಲೆಯಲ್ಲಿ 30 ಲಕ್ಷ.ರೂ.ಅನುದಾನದಲ್ಲಿ ರಾಜ್ಯಸಭಾ ಸದಸ್ಯೆಡಾ. ಬಿ.ಜಯಶ್ರಿ ಅನುದಾನದಿಂದ ನಿರ್ಮಿಸಲಾದ ಮಲ್ಟಿಮೀಡಿಯಾ ತರಗತಿ ಕೊಠಡಿಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಆಧುನಿಕ ಕಾಲಘಟ್ಟದಲ್ಲಿ ನಮ್ಮ ದೇಶದ ಶಿಕ್ಷಣ […]

ದೀನದಯಾಳ ಉಪಾಧ್ಯಾಯ ಸ್ಮೃತಿ ದಿನ

Sunday, February 14th, 2016
dindayal

ಕುಂಬಳೆ: ದೀನ ದಯಾಳ ಉಪಾಧ್ಯಾಯರು ಪಕ್ಷದ ಸಿದ್ದಾಂತಕ್ಕೆ ನಿಷ್ಠರಾಗಿ ಇತರ ಪಕ್ಷಗಳೊಂದಿಗೆ ಸ್ನೇಹ, ಆದಾರಗಳೊಂದಿಗೆ ತುಲನೆಗೆ ನಿಲುಕದ ನೇತಾರರಾಗಿದ್ದರೆಂದು ಬಿಜೆಪಿ ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಮರಳೀಧರ ಯಾದವ್ ನಾಯ್ಕಾಪು ಅಭಿಪ್ರಾಯ ವ್ಯಕ್ತಪಡಿಸಿದರು. ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿಯ ಆಶ್ರಯದಲ್ಲಿ ಪಕ್ಷದ ಕಾರ್ಯಾಲಯದಲ್ಲಿ ನಡೆದ ದೀನ ದಯಾಳ ಸ್ಮೃತಿ ದಿನವನ್ನು ಪುಷ್ಪಾರ್ಚನೆಗೈದು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ದೀನ ದಯಾಳರ ಸರಳ ಜೀವನ ಕ್ರಮ ಮಾದರಿಯೆಂದು ತಿಳಿಸಿದ ಅವರು ಇಂದಿನ ಯುವ ಸಮೂಹ ಅವರ ವ್ಯಕ್ತಿತ್ವವನ್ನು ಅರ್ಥಮಾಡಿಕೊಂಡು ಅಳವಡಿಸುವಲ್ಲಿ […]