ನವರಾತ್ರಿ – ಶಸ್ತ್ರಾಸ್ತ್ರ, ವಾಹನಗಳಿಗೆ ಆಯುಧ ಪೂಜೆ

Saturday, October 24th, 2020
Ayudha Pooja

ಮಂಗಳೂರು : ಆಯುಧ ಪೂಜೆ ನವರಾತ್ರಿ ಹಬ್ಬದ ದಿನಗಳಲ್ಲಿ ಬರುವ ಒಂದು ವಿಶೇಷ ದಿನ. ಇದನ್ನು ಸಾಂಪ್ರದಾಯಿಕವಾಗಿ ಭಾರತದಲ್ಲಿ ಆಚರಿಸಲಾಗುತ್ತದೆ. ನವರಾತ್ರಿ ಯಲ್ಲಿ ಒಂಬತ್ತನೇ ದಿನ ಶಸ್ತ್ರಾಸ್ತ್ರ ಮತ್ತು ಸಾಧನಗಳನ್ನು ಪೂಜಿಸಲಾಗುತ್ತದೆ ಅದನ್ನೇ ಆಯುಧ ಪೂಜೆ ಎಂದು ಕರೆಯಲಾಗುತ್ತದೆ ನವರಾತ್ರಿಯ ಸಂದರ್ಭದಲ್ಲಿ ಬರುವ ಆಯುಧ ಪೂಜೆಯ ದಿನ ಜನರು ಜೀವನೋಪಾಯಕ್ಕಾಗಿ ಬಳಸುವ ಸಾಧನಗಳು ಮತ್ತು ವಸ್ತುಗಳನ್ನು ಪೂಜಿಸಿವುದು ಹಿಂದಿನಿಂದಲೂ ಬಂದ ಸಂಪ್ರದಾಯ. ಹಿಂದೂ ಸಮುದಾಯದ ಪೂಜಾ ಸಾಧನಗಳು, ವಿದ್ಯುತ್ ಉಪಕರಣಗಳು, ವಾಹನಗಳು ಮತ್ತುತಮ್ಮ ಜೀವನೋಪಾಯವನ್ನು ಗಳಿಸಲು ಬಳಸುವ ಉಪಕರಣಗಳಿಗೆ […]

ಚಿಕ್ಕಮಗಳೂರು : ಕೆರೆಯಲ್ಲಿ ಸೈಕಲ್ ತೊಳೆದು, ಬಳಿಕ ಈಜಲು ನೀರಿಗೆ ಇಳಿದ ಮೂವರು ಬಾಲಕರು ನೀರುಪಾಲು

Tuesday, October 8th, 2019
chikkamagaluru

ಚಿಕ್ಕಮಗಳೂರು : ಆಯುಧ ಪೂಜೆಯ ಹಿನ್ನೆಲೆ ಕೆರೆಯಲ್ಲಿ ತಮ್ಮ ಸೈಕಲ್‍ಗಳನ್ನು ತೊಳೆದು, ಬಳಿಕ ಈಜಲು ನೀರಿಗೆ ಇಳಿದಿದ್ದ ಮೂವರು ಬಾಲಕರು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ತಾಲೂಕಿನ ಬಿಳೇಕಲ್ಲಳ್ಳಿ ಗ್ರಾಮದಲ್ಲಿ ನಡೆದಿದೆ. ಹೌಸಿಂಗ್ ಬೋರ್ಡ್ ನಿವಾಸಿಗಳಾದ ಮುರುಳಿ(15), ಜೀವಿತ್(14), ಚಿರಾಗ್(15) ಮೃತ ದುರ್ದೈವಿಗಳು. ಸೋಮವಾರ ಆಯುಧ ಪೂಜೆ ಇದ್ದ ಕಾರಣಕ್ಕೆ ಸಂಜೆ ತಮ್ಮ ಸೈಕಲ್‍ಗಳನ್ನು ತೊಳೆಯಲೆಂದು ಬಿಳೇಕಲ್ಲಳ್ಳಿ ಗ್ರಾಮದ ಕಂಚಿಕಟ್ಟೆ ಕೆರೆ ಬಳಿ ಮೂವರು ಬಾಲಕರು ತೆರೆಳಿದ್ದರು. ಹೀಗೆ ಕೆರೆಯಲ್ಲಿ ಸೈಕಲ್ ತೊಳೆದ ಬಳಿಕ ಈಜಲು ಬಾಲಕರು ನೀರಿಗೆ […]

ಸೈನಿಕರೊಂದಿಗೆ ಆಯುಧ ಪೂಜೆ ಆಚರಿಸಿದ ರಾಜನಾಥ್​ ಸಿಂಗ್​​!

Friday, October 19th, 2018
rajnath-singh

ಗುಜರಾತ್: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಗುಜರಾತ್ನ ಬಿಕಾನೆರ್ನ ಭಾರತ-ಪಾಕ್ ಗಡಿಯಲ್ಲಿರುವ ಸೈನಿಕರೊಂದಿಗೆ ದಸರಾ ಹಬ್ಬ ಆಚರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗುರುವಾರ ಆಯುಧ ಪೂಜೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಡಿ ಭದ್ರತಾ ಪಡೆಗಳ ಕುಟುಂಬಗಳ ಜೊತೆ ಹಬ್ಬ ಆಚರಿಸುವುದು ತುಂಬಾ ಖುಷಿ ತಂದಿದೆ. ನಮ್ಮ ಗಡಿ ಭದ್ರತಾ ಪಡೆಗಳ ಸೈನಿಕರಿಗೆ ಅವರ ಕುಟುಂಬಗಳೇ ಬೆನ್ನೆಲುಬು ಎಂದು ಸೈನಿಕರನ್ನು ಹೊಗಳಿದರು. ಸೈನಿಕರ ಕುಟುಂಬಗಳು ನೀಡುವ ಪ್ರೋತ್ಸಾಹವೇ ಸೈನಿಕರು ಗಡಿಯಲ್ಲಿ ನಿಂತು ದೇಶ […]

ಭಕ್ತಿ ಭಾವೈಕತೆಯ ಆಯುಧ ಪೂಜೆ

Wednesday, October 5th, 2011
Viajaya Dashami

ದಸರಾ ಹಬ್ಬದ ಕೊನೆಯ ದಿನ ವಿಜಯದಶಮಿಯಾದರೆ. ಒಂಭತ್ತನೆ ದಿನ ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮವನ್ನು ಆಚರಿಸಲಾಗುತ್ತದೆ, ಎಲ್ಲೆಡೆ ವಾಹನಗಳಿಗೆ ಹಾಗೂ ಆಯುಧಗಳಿಗೆ ಪೂಜೆ ನಡೆಸಲಾಗುತ್ತದೆ ಅಂಗಡಿ, ಕಚೇರಿ, ಮಳಿಗೆಗಳಲ್ಲಿ ವಾಹನ ಸೇರಿದಂತೆ ಉಪಯೋಗಿಸುವ ಎಲ್ಲಾ ಆಯುಧಗಳನ್ನು ಹೂ ತೋರಣಗಳಿಂದ ಶೃಂಗಾರಗೊಳಿಸಿ ಭಕ್ತಿ ಭಾವೈಕತೆಯಿಂದ ಪೂಜೆ ಸಲ್ಲಿಸಲಾಗುತ್ತಿದೆ. ಜಾತಿ ಭೇಧವಿಲ್ಲದೆ ಆಯುಧ ಪೂಜೆಯನ್ನು ನಾಡಿನೆಲ್ಲೆಡೆ ಆಚರಿಸುತ್ತಾರೆ. ವಾಹನಗಳಿಗೆ ಪೂಜೆ ಸಲ್ಲಿಸುವುದರಿಂದ ದೀರ್ಘ ಬಾಳ್ವಿಕೆ ಸಹಿತ ಅಪಘಾತವನ್ನು ತಪ್ಪಿಸಬಹುದಾಗಿದೆ ಎಂಬುದು ನಂಬಿಕೆಯಾಗಿದೆ. ಇದರಂತೆ ತಮ್ಮ ತಮ್ಮ ಊರುಗಳಲ್ಲಿ ದೇವಾಲಯಗಳಿಗೆ ತೆರಳಿ […]

ಮಂಗಳೂರು ಪೊಲೀಸ್ ಪ್ರಧಾನ ಕಛೇರಿಯಲ್ಲಿ ಆಯುಧ ಪೂಜೆ.

Saturday, October 16th, 2010
ಪೊಲೀಸ್ ಪ್ರಧಾನ ಕಛೇರಿಯಲ್ಲಿ ಆಯುಧ ಪೂಜೆ

ಮಂಗಳೂರು: ನಗರದ ಪೊಲೀಸ್ ಪ್ರಧಾನ ಕಛೇರಿಯಲ್ಲಿ ಇಂದು ಬೆಳಿಗ್ಗೆ ಇಲಾಖೆಯ ತುಪಾಕಿಗಳಿಗೆ ಮತ್ತು ವಾಹನಗಳಿಗೆ ಆಯುಧ ಪೂಜೆಯನ್ನು ಮಾಡಲಾಯಿತು. ಐಜಿಪಿ ಅಲೋಕ್ ಮೋಹನ್, ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಎಸ್.ಪಿ ಸುಬ್ರಹ್ಮಣ್ಯೇಶ್ವರ ರಾವ್ ಆಯುಧ ಪೂಜೆಯಲ್ಲಿ ಭಾಗವಹಿಸಿದ್ದರು. ಎಡಬಿಡದೆ ಕೆಲಸ ನಿರ್ವಹಿಸುತ್ತಿದ್ದ ಪೊಲೀಸ್ ವಾಹನಗಳು, ಪೊಲೀಸರ ಹೆಗಲೇರುತ್ತಿದ್ದ ತುಪಾಕಿಗಳು ಇಂದು ಸ್ವಚ್ಚವಾಗಿ ಸುಂದರವಾಗಿ ಅಲಂಕರಿಸಲ್ಪಟ್ಟಿದ್ದವು ಪೂಜೆಯಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.