ಆಳಸಮುದ್ರ ಮೀನುಗಾರರಿಗೆ ಅಪಾರ ಪ್ರಮಾಣದಲ್ಲಿ ಸಿಗುತ್ತಿರುವ ಒಡನಸ್‌ ನಿಗರ್ ಮೀನುಗಳು

Thursday, October 1st, 2020
Kargilfish

ಮಲ್ಪೆ: ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟುಗಳಿಗೆ ಅಪಾರ ಪ್ರಮಾಣದಲ್ಲಿ ಕಾರ್ಗಿಲ್‌ ಮೀನು ಗಳು ಬಲೆಗೆ ಬೀಳುತ್ತಿವೆ. ಕಳೆದ ವರ್ಷ ಭಾರೀ ಸುದ್ದಿ ಮಾಡಿದ ಕಾರ್ಗಿಲ್‌ ಮೀನುಗಳು ಈ ಸಲವೂ ಭಾರೀ ಪ್ರಮಾಣದಲ್ಲಿ ಮೀನುಗಾರರ ಬಲೆಗೆ ಬಿದ್ದಿವೆ. ಕಾರ್ಗಿಲ್‌ ತಿನ್ನಲು ಯೋಗ್ಯವಿಲ್ಲದ್ದರಿಂದ ಫಿಶ್‌ಮೀಲ್‌ಗೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿವೆ. ಪ್ರಸ್ತುತ ಮಲ್ಪೆ ಬಂದರಿನಲ್ಲಿ ಇದು ಕೆ.ಜಿ.ಗೆ 15 ರೂ.ಗೆ ಮಾರಾಟವಾಗುತ್ತಿವೆ. ಬೋಟುಗಳಿಗೆ 10ರಿಂದ 40 ಟನ್‌ಗಳಷ್ಟು ಮೀನುಗಳು ದೊರೆಯುತ್ತಿವೆ. ಒಂದೆರಡು ಬೋಟಿಗೆ 70 ಟನ್‌ ದೊರೆತಿದ್ದೂ ಇದೆ. ವಿಪರೀತ ವಾಸನೆ […]

ಮಂಗಳೂರಲ್ಲಿ ಇಂದಿನಿಂದ ಆಳಸಮುದ್ರ ಮೀನುಗಾರಿಕೆ ಸ್ಥಗಿತ

Friday, June 1st, 2018
deep-sea-fishing

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ವಹಿವಾಟು ಮೀನುಗಾರಿಕೆ ಇಂದಿನಿಂದ ಸ್ಥಗಿತಗೊಂಡಿದೆ. ಮೀನುಗಳ ಸಂತಾನೋತ್ಪತ್ತಿ ಸಮಯ ಹಾಗೂ ಸಮುದ್ರದಲ್ಲಿ ಭಾರಿ ಏರಿಳಿತ ಉಂಟಾಗುವುದರಿಂದ ಇಂದಿನಿಂದ ಜುಲೈ 31 ರವರೆಗೆ ಆಳಸಮುದ್ರ ಮೀನುಗಾರಿಕೆ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ಮೀನುಗಾರರು ಮೀನುಗಾರಿಕೆಗೆ ತೆರಳದೆ‌ ಮಂಗಳೂರಿನ ಬಂದರಿನಲ್ಲಿ ಬೋಟುಗಳನ್ನು ಲಂಗರು ಹಾಕಿದ್ದಾರೆ. ಇಂದಿನಿಂದ ಎರಡು ತಿಂಗಳು ಆಳಸಮುದ್ರ ಮೀನುಗಾರಿಕೆ ಸ್ಥಗಿತಗೊಂಡಿರುವುದರಿಂದ ಮಂಗಳೂರು ಬಂದರಲ್ಲಿ ಸಾವಿರಾರು ಬೋಟ್‌ಗಳು ಲಂಗರು ಹಾಕಿವೆ. ಮೀನುಗಾರಿಕೆ ಸ್ಥಗಿತವಾದ ಹಿನ್ನೆಲೆಯಲ್ಲಿ ಸದಾ ಗಿಜಿಗುಡುತ್ತಿದ್ದ ಬಂದರು ಪ್ರದೇಶದಲ್ಲಿ […]