ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಇಂಟರ್ನೆಟ್ ಸೇವೆ ಪುನರಾರಂಭ

Sunday, December 22nd, 2019
mobie network

ಮಂಗಳೂರು: ಮಂಗಳೂರು ಹಿಂಸಾಚಾರದ  ವಿಡಿಯೋಗಳನ್ನು ಮತ್ತು ಪ್ರಚೋದನಕಾರಿ ಸಂದೇಶಗಳನ್ನು ದುರುದ್ದೇಶ ಪೂರಕವಾಗಿ ವಾಟ್ಸ್ ಆಪ್ ಗಳ ಮೂಲಕ ರವಾನಿಸಿದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಮೊಬೈಲ್ ಇಂಟರ್ ನೆಟ್ ಸೇವೆ ಶನಿವಾರ  ರಾತ್ರಿ 10 ಗಂಟೆಯ ಸುಮಾರಿಗೆ ಪುನರಾರಂಭಗೊಂಡಿದೆ. ಏರ್ ಟೆಲ್,  ರಿಲಯನ್ಸ್ ಜಿಯೋ ಗ್ರಾಹಕರಿಗೆ ಇಂಟರ್ ನೆಟ್ ಸೇವೆಗಳು ಮತ್ತು ಇತರ ನೆಟ್ ವರ್ಕ್ ಸೇವೆಗಳು  ಪುನರಾರಂಭಗೊಂಡಿದೆ.