ದೋಣಿ ಎಳೆಯುತ್ತಿರುವ ವೇಳೆ ಬೃಹತ್ ಅಲೆ ಅಪ್ಪಳಿಸಿ ಓರ್ವ ಸಾವು..ಇನ್ನೋರ್ವ ನಾಪತ್ತೆ!

Wednesday, July 25th, 2018
died-sea

ಉಡುಪಿ: ಮಲ್ಪೆಯ ಪಡುಕರೆ ತೀರದಲ್ಲಿ ದೋಣಿ ಎಳೆಯುತ್ತಿರುವ ವೇಳೆ ಬೃಹತ್ ಅಲೆ ಅಪ್ಪಳಿಸಿದ ಪರಿಣಾಮ ಓರ್ವ ಮೃತಪಟ್ಟು, ಇನೋರ್ವ ಸಮುದ್ರ ಪಾಲಾಗಿರುವ ಬಗ್ಗೆ ಬುಧವಾರ ಬೆಳಗ್ಗೆ ವರದಿಯಾಗಿದೆ. ಮೃತರನ್ನು ಉದ್ಯಾವರ ಪಿತ್ರೋಡಿಯ ನಿತೇಶ್ (29) ಎಂದು ಗುರುತಿಸಲಾಗಿದ್ದು, ಅವರಿಗೆ 7 ತಿಂಗಳ ಹಿಂದೆ ವಿವಾಹವಾಗಿತ್ತು. ನಿಶಾಂತ್ ಎಂಬವರು ನೀರು ಪಾಲಾಗಿದ್ದು, ನಾಪತ್ತೆಯಾಗಿದ್ದಾರೆ. ಇಂದು ಬೆಳಗ್ಗೆ ಮೀನುಗಾರಿಕೆ ಮುಗಿಸಿ ದಡಕ್ಕೆ ಬಂದಿದ್ದು, ಸುಮಾರು 200 ಮೀ. ದೂರದಲ್ಲಿ ಎಂಬತ್ತಕ್ಕೂ ಅಧಿಕ ಮಂದಿ ದೋಣಿಯನ್ನು ದಡಕ್ಕೆ ಎಳೆಯುವ ವೇಳೆ ಬೃಹತ್ […]

ಭಾರೀ ಗಾಳಿ-ಮಳೆಯಿಂದಾಗಿ ರಸ್ತೆ ಸಂಚಾರ ಅಸ್ತವ್ಯಸ್ತ, ಶಾಲೆಗಳಿಗೆ ರಜೆ ಘೋಷಣೆ..!

Tuesday, May 29th, 2018
huge-rain-2

ಉಡುಪಿ: ಉದ್ಯಾವರ ಪರಿಸರದಲ್ಲಿ ನಿನ್ನೆ ರಾತ್ರಿ ಭಾರೀ ಗಾಳಿಯೊಂದಿಗೆ ಸುರಿದ ಮಳೆಗೆ ಹಲವೆಡೆ ಬೃಹತ್ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಇದರಿಂದ ಹಲವೆಡೆ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿರುವ ಹಿನ್ನೆಲೆಯಲ್ಲಿ ಉದ್ಯಾವರ ಪರಿಸರದ ಶಾಲೆಗಳಿಗೆ ಇಂದು ರಜೆ ಸಾರಲಾಗಿದೆ. ರಾತ್ರಿ ಬೀಸಿದ ಭಾರೀ ಗಾಳಿಗೆ ಉದ್ಯಾವರ ಪೇಟೆಯ ಕಾಮತ್ ಹೊಟೇಲ್ ಬಳಿಯಿದ್ದ ಬೃಹತ್ ಮರವೊಂದು ರಸ್ತೆಗಡ್ಡವಾಗಿ ಉರುಳಿಬಿದ್ದಿದೆ. ಶಂಭುಕಲ್ಲು ದೇವಳದ ಬಳಿ ಹಾಗೂ ಪಿತ್ರೋಡಿಯಲ್ಲಿ ಮರಗಳು ಉರುಳಿ ರಸ್ತೆಗೆ ಬಿದ್ದಿವೆ. ಕೆಲವೆಡೆ ವಿದ್ಯುತ್ ಕಂಬಗಳು ರಸ್ತೆಗುರುಳಿವೆ. ಇದರಿಂದ ರಸ್ತೆ […]

ರಸ್ತೆ ಅವಘಡದಲ್ಲಿ ಮಗುವನ್ನು ಕಳೆದುಕೊಂಡವರ ವಿರುದ್ಧವೇ ಪ್ರಕರಣ ದಾಖಲು

Monday, October 9th, 2017
Udupi

ಉಡುಪಿ: ಪರ್ಕಳ ರಾಷ್ಟ್ರೀಯ ಹೆದ್ದಾರಿ  ನಡೆದ ರಸ್ತೆ ಅವಘಡದಲ್ಲಿ ಮಗುವನ್ನು ಕಳೆದುಕೊಂಡವರ ವಿರುದ್ಧವೇ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 279ನೇ ಕಲಂ (ನಿರ್ಲಕ್ಷ್ಯದ ಚಾಲನೆ), 337ನೇ ಕಲಂ (ಇನ್ನೊಬ್ಬ ರಿಗೆ ಗಾಯ ವಾದದ್ದು), 304ಎ ಕಲಂ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದದ್ದು) ಹೀಗೆ ಮೂರು ಪ್ರಕರಣಗಳು ದಾಖಲಾಗಿವೆ. ಉದ್ಯಾವರ ಕುತ್ಪಾಡಿ ನಿವಾಸಿಗಳಾದ ಉಮೇಶ ಮತ್ತು ಪ್ರಮೋದಾ ಅವರು ಒಂದೂವರೆ ವರ್ಷದ ಮಗು ಚಿರಾಗ್‌ನೊಂದಿಗೆ ಅ. 2ರಂದು ಪರ್ಕಳದಿಂದ ಆತ್ರಾಡಿಗೆ ತೆರಳುವಾಗ ಪರ್ಕಳ ಬಿ.ಎಂ. ಶಾಲೆ ಬಳಿ ಹೊಂಡಗುಂಡಿಗಳನ್ನು ತಪ್ಪಿಸುವಾಗ ಬೈಕ್‌ […]