ಹಿಂದಿ ಈಗ ಜಾಗತಿಕ ಭಾಷೆ: ಜಾನ್ ಎ. ಅಬ್ರಹಾಂ

Tuesday, January 11th, 2022
World Hindi Day

ಮಂಗಳೂರು: ಹಿಂದಿ ಭಾಷೆ ಉಪನ್ಯಾಸಕ ವೃತ್ತಿಗೆ ಸೀಮಿತವಾಗಿರದೆ ಇತರ ಕ್ಷೇತ್ರಗಳಲ್ಲಿಯೂ ವಿಪುಲ ಉದ್ಯೋಗಾವಕಾಶಗಳಿವೆ, ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ರಾಜಭಾಷಾ ವಿಭಾಗದ ವರಿಷ್ಠ ಪ್ರಬಂಧಕ ಜಾನ್ ಎ. ಅಬ್ರಹಾಂ ತಿಳಿಸಿದರು. ನಗರದ ವಿಶ್ವವಿದ್ಯಾಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಹಿಂದಿ ವಿಭಾಗದ ವತಿಯಿಂದ ಮಂಗಳವಾರ ನಡೆದ ವಿಶ್ವ ಹಿಂದಿ ದಿನಾಚರಣೆಯಲ್ಲಿ ʼಹಿಂದಿ ಭಾಷೆಯಲ್ಲಿ ಉದ್ಯೋಗಾವಕಾಶಗಳುʼ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಅವರು, ಆನಿವಾಸಿ ಭಾರತೀಯರು ವಿಶ್ವಾದ್ಯಂತ ಹಿಂದಿಯನ್ನು ಬಳಸುತ್ತಿರುವುದರಿಂದ ಅದೊಂದು […]

ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರಾಗಿ ಎಂ.ಪಿ.ಶ್ರೀನಾಥ್ ಆಯ್ಕೆ

Sunday, November 21st, 2021
srinath

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರಾಗಿ ಉಪನ್ಯಾಸಕ, ಲೇಖಕ ಎಂ.ಪಿ.ಶ್ರೀನಾಥ್ ಆಯ್ಕೆಯಾದರು.  ಶ್ರೀನಾಥ್ ಅವರು ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ 26 ವರ್ಷಗಳಿಂದ ಕನ್ನಡ ಉಪನ್ಯಾಸಕರಾಗಿದ್ದಾರೆ. ಭಾನುವಾರ ಏಕಕಾಲಕ್ಕೆ ರಾಜ್ಯಾದ್ಯಂತ ಕಸಾಪ ರಾಜ್ಯ ಘಟಕ ಹಾಗೂ ಎಲ್ಲಾ ಜಿಲ್ಲಾ ಘಟಕಗಳಿಗೆ ಚುನಾವಣೆ ನಡೆಯಿತು. ದ.ಕ ಜಿಲ್ಲೆಯಲ್ಲಿ ಮಂಗಳೂರು ಅಲ್ಲದೆ ಮೂಡುಬಿದಿರೆ, ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬ ತಾಲೂಕು ಕಚೇರಿ, ಮೂಲ್ಕಿ ನಗರ ಪಂಚಾಯಿತಿ, ವಿಟ್ಲ ಪಟ್ಟಣ ಪಂಚಾಯಿತಿ, ಕೊಕ್ಕಡ ನಾಡ ಕಚೇರಿಯಲ್ಲಿ ಮತದಾನ […]

ಕೋವಿಡ್‌ನಿಂದ ಶ್ರೀನಿವಾಸ ಕಾಲೇಜಿನ ಉಪನ್ಯಾಸಕ ನಿಧನ

Thursday, May 13th, 2021
Deepakraj

ಪುತ್ತೂರು:  ಕೆಮ್ಮಿಂಜೆ ಗ್ರಾಮದ ಬೆದ್ರಾಳ ನಿವಾಸಿ, ಮಂಗಳೂರಿನ ಶ್ರೀನಿವಾಸ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ದೀಪಕ್‌ರಾಜ್ (32) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕೋವಿಡ್‌ ತಗುಲಿ ಅಸ್ಪತ್ರೆಗೆ ದಾಖಲಾಗಿದ್ದ ಅವರು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಅವರಿಗೆ ಪತ್ನಿ, ಪುತ್ರಿ, ತಂದೆ, ತಾಯಿ ಹಾಗೂ ಸಹೋದರನನ್ನು  ಅಗಲಿದ್ದಾರೆ.

ಕರ್ನಾಟಕ ಪಾಲಿಟೆಕ್ನಿಕ್‌ ಕಾಲೇಜಿನ ಉಪನ್ಯಾಸಕ ರಸ್ತೆ ಅಫಘಾತದಲ್ಲಿ ಸಾವು

Friday, April 22nd, 2016
Sushanth thoudugoli

ಉಳ್ಳಾಲ: ಬೈಕಂಪಾಡಿ ಬಳಿ ಟ್ಯಾಂಕರ್‌ -ಬೈಕ್‌ ನಡುವೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್‌ ಕಾಲೇಜಿನ ಉಪನ್ಯಾಸಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸೋಮೇಶ್ವರ ಸಾರಸ್ವತ ಕಾಲನಿ ನಿವಾಸಿ ಸುಶಾಂತ್‌ ಕುಮಾರ್‌ (28) ಮೃತಪಟ್ಟವರು. ಜೋಕಟ್ಟೆಯಲ್ಲಿರುವ ಸ್ನೇಹಿತನ ಮೆಹೆಂದಿ ಸಮಾರಂಭ ಮುಗಿಸಿ ಹೆದ್ದಾರಿ ತಲುಪುತ್ತಿದ್ದಂತೆ ಮಂಗಳೂರು ಕಡೆ ತೆರಳಲು ಸ್ಥಳೀಯರಲ್ಲಿ ವಿಚಾರಿಸಿ ಹೆದ್ದಾರಿಗೆ ಬರುತ್ತಿದ್ದಂತೆ ಅತೀ ವೇಗದಲ್ಲಿ ಬಂದ ಟ್ಯಾಂಕರ್‌ ಲಾರಿ ಇವರಿದ್ದ ಬೈಕಿಗೆ ಢಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡು […]

ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕೂಡಲೇ ಉಪನ್ಯಾಸಕರ ನೇಮಕಾತಿ ಮಾಡುವಂತೆ ಆಗ್ರಹಿಸಿ ಎಬಿವಿಪಿಯಿಂದ ನಗರ ಜ್ಯೋತಿವೃತ್ತದಲ್ಲಿ ಮಾನವ ಸರಪಳಿ

Tuesday, June 25th, 2013
abvp protest

ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಶಾಖೆಯ ವತಿಯಿಂದ ಸರ್ಕಾರಿ ಪದವಿ ಕಾಲೇಜುಗಳಿಗೆ ಉಪನ್ಯಾಸಕರನ್ನು ನೇಮಕ ಮಾಡುವಂತೆ ಆಗ್ರಹಿಸಿ ನಗರದ ಜ್ಯೋತಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವುದರ ಮೂಲಕ ಪ್ರತಿಭಟಿಸಲಾಯಿತು. ನಂತರ ಜ್ಯೋತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಬಲ್ಮಠ ಸರ್ಕಾರಿ ಕಾಲೇಜಿನ ಅಧ್ಯಕ್ಷೆ ಕು. ರಕ್ಷಿತಾ, ಕು. ದಿವ್ಯಾ, ಕು. ವಿನುತಾ ಮಾತನಾಡಿ ಮಂಗಳೂರು ವಿಶ್ವವಿದ್ಯಾಲಯವು ರಾಜ್ಯದಲ್ಲಿಯೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಫಲಿತಾಂಶ […]