ಗುದನಾಳದಲ್ಲಿ ಅಡಗಿಸಿಟ್ಟು ಚಿನ್ನ ಸಾಗಾಟ, ಕಸ್ಟಮ್ ಅಧಿಕಾರಿಗಳಿಂದ ವಿಚಾರಣೆ

Friday, March 19th, 2021
Gold

ಮಂಗಳೂರು : ದುಬೈನಿಂದ ಬಂದ ಪ್ರಯಾಣಿಕರೊಬ್ಬರು ಗುದನಾಳದಲ್ಲಿ ಚಿನ್ನವನ್ನು ಅಡಗಿಸಿಟ್ಟು ಸಾಗಾಟ ಮಾಡುತ್ತಿದ್ದಕ್ಕೆ ನಗರದ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳು ಬಂಧಿಸಿದ್ದಾರೆ. ನಗರದ ಉಲ್ಲಾಸ್‌ ‌ನಗರದ ವ್ಯಕ್ತಿ ಸ್ಪೈಸ್ ಜೆಟ್ ವಿಮಾನದ ಮೂಲಕ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ  ಬಂದಿದ್ದರು. ಕಸ್ಟಮ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಚಿನ್ನವನ್ನು ಪೌಡರ್ ರೂಪದಲ್ಲಿ ಅಡಗಿಸಿ ಸಾಗಾಟ ಮಾಡಿರುವುದು ಪತ್ತೆಯಾಗಿದೆ. ಜೊತೆಗೆ ಬಳಿ ರಿಂಗ್, ಕಡ, ಬಟನ್ ರೂಪದಲ್ಲಿಯೂ ಚಿನ್ನ ಪತ್ತೆಯಾಗಿದೆ. ಆರೋಪಿಯಿಂದ 284.900 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ರೂ. 13,16,238 ಎಂದು […]

ಬಜಾಲ್ : ಬಾವಿಗೆ ಬಿದ್ದ ಸ್ಕೂಟರ್ ಸವಾರರು, ಓರ್ವ ಮೃತ್ಯು

Monday, January 4th, 2021
Ajith

ಮಂಗಳೂರು : ಬಜಾಲ್ ಸಮೀಪದ  ಪಕ್ಕಲಡ್ಕ ಎಂಬಲ್ಲಿ ಬಾವಿಯ ತಡೆಗೋಡೆಗೆ ಸ್ಕೂಟರ್ ಡಿಕ್ಕಿ ಹೊಡೆದು ಸವಾರರು ಬಿದ್ದು ಓರ್ವ ಮೃತಪಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ. ಇಬ್ಬರು ಸವಾರರ ಪೈಕಿ ಓರ್ವನ ಮೃತದೇಹ ಪತ್ತೆಯಾಗಿದ್ದು ಆತನನ್ನು  ಎಮ್ಮೆಕೆರೆ ನಿವಾಸಿ ಅಜಿತ್ (22) ಎಂದು ಗುರುತಿಸಲಾಗಿದೆ. ಅಜಿತ್ ಸೋಮವಾರ ಬಜಾಲ್ನ ಉಲ್ಲಾಸ್ ನಗರದ ತನ್ನ ಸಂಬಂಧಿಕರ ಮನೆಗೆ ಬರುವಾಗ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ರಾತ್ರಿ ವೇಳೆಗೆ ಸ್ಕೂಟರ್ ಸವಾರ ನಿಯಂತ್ರಣ ಕಳೆದುಕೊಂಡು  ರಸ್ತೆ ಪಕ್ಕದಲ್ಲೇ ಇದ್ದ ಬಾವಿ ಆವರಣಕ್ಕೆ ಡಿಕ್ಕಿ ಹೊಡೆದು ಸ್ಕೂಟರ್‌ನಲ್ಲಿದ್ದ ಇಬ್ಬರು ಬಿದ್ದಿದದ್ದಾರೆ ಎನ್ನಲಾಗಿದೆ. […]