ಎಕ್ಕಡ ಚಿಹ್ನೆಯೊಂದಿಗೆ ಕಣಕ್ಕಿಳಿದಿರುವ ಹುಚ್ಚ ವೆಂಕಟ್
Saturday, April 28th, 2018ಬೆಂಗಳೂರು: ಹುಚ್ಚಾ ವೆಂಕಟ್ ಗೆ ಕೊನೆಗೂ ಚುನಾವಣಾ ಆಯೋಗ ಎಕ್ಕಡವನ್ನು ದಯಪಾಲಿಸಿದೆ. ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಟ, ನಿರ್ದೇಶಕ ಹುಚ್ಚ ವೆಂಕಟ್ ಸ್ಪರ್ಧಿಸುತ್ತಿದ್ದು,ಈಗಾಗಲೇ ಚುನಾವಣೆ ಪ್ರಚಾರವನ್ನು ಶುರು ಮಾಡಿದ್ದಾರೆ. ಹುಚ್ಚ ವೆಂಕಟ್ ಆರ್ ಆರ್ ನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಚುನಾವಣೆ ಆಯೋಗವು ಅಭ್ಯರ್ಥಿಗಳ ಗುರುತನ್ನ, ಚಿಹ್ನೆಯನ್ನು ಘೋಷಣೆ ಮಾಡಿದೆ. ಎಕ್ಕಡದೊಂದಿಗೆ ಕಣಕ್ಕಿಳಿದಿರುವ ವೆಂಕಟ್ ಆರ್ ಆರ್ ನಗರದಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಲಿದ್ದಾರೆ.