ಅಪಘಾತಕ್ಕೊಳಗಾದ ವ್ಯಕ್ತಿಗೆ ಉಪಚರಿಸಿದ ಯುವಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು

Sunday, July 11th, 2021
Tejas

ಮಂಗಳೂರು: ಬೈಕನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಲು ಮುಂದಾಗಿದ್ದ ಯುವಕನಿಗೆ ಲಾರಿ ಡಿಕ್ಕಿ ಹೊಡೆದ  ಪರಿಣಾಮ ಯುವಕ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿರುವ ಘಟನೆ ಬೈಕಂಪಾಡಿಯಲ್ಲಿ ನಡೆದಿದೆ. ಮೃತ ಯುವಕ ತೇಜಸ್‌ (28) ಸುಳ್ಯ ತಾಲೂಕಿನ ಮರ್ಕಜೆಯ ದೊಡ್ಡತೋಟ ನಿವಾಸಿಯಾಗಿದ್ದು, ಮಂಗಳೂರಿನಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಶನಿವಾರ ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ದ್ವಿಚಕ್ರ ವಾಹವೊಂದು ಅಪಘಾತಕ್ಕೀಡಾಗಿತ್ತು. ಇದನ್ನು ಗಮನಿಸಿದ ತೇಜಸ್, ಗಾಯಾಳುವನ್ನು ಉಪಚರಿಸಿ ಆತನ ಬೈಕ್ನನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಲು ದೂಡಿಕೊಂಡು ಹೋಗುತ್ತಿದ್ದನು. ಅದೇ […]

ವಿದ್ಯುತ್ ಸರಿಪಡಿಸುವ ನೆಪದಲ್ಲಿ ಬಂದು ಒಂಟಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ

Tuesday, September 17th, 2019
bengaluru

ಬೆಂಗಳೂರು : ವಿದ್ಯುತ್ ಸರಿಪಡಿಸುವ ನೆಪದಲ್ಲಿ ಬಂದು ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಿದ್ಯುತ್ ಫ್ಯೂಸ್ ಸರಿಪಡಿಸುವ ನೆಪದಲ್ಲಿ ಮನೆಗೆ ನುಗ್ಗಿದ ಎಲೆಕ್ಟ್ರಿಷಿಯನ್ ಒಂಟಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಇದೀಗ ಪರಪ್ಪನ ಅಗ್ರಹಾರ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮಹಿಳೆ ನೀಡಿದ ದೂರಿನ ಮೇರೆಗೆ ಕೂಡ್ಲು ಗ್ರಾಮದ ರಾಮ್‌ಕುಮಾರ್ ಯಾದವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ವಿವಾಹಿತನಾಗಿದ್ದು, ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ, ಮಹಿಳೆ ಕುಟುಂಬ ಕೂಡ್ಲು ಗ್ರಾಮದಲ್ಲಿ ನೆಲೆಸಿತ್ತು. ಕಟ್ಟಡದ ನಿರ್ವಹಣೆಯನ್ನು ಆರೋಪಿಯೇ ನೋಡಿಕೊಳ್ಳುತ್ತಿದ್ದ. […]

ಹಿರಿಯ ಪೊಲೀಸ್ ಅಧಿಕಾರಿ ಬ್ಯಾಂಕ್​ ಖಾತೆಗೆ ಕನ್ನ ಹಾಕಿದ್ದ ಖದೀಮ ಅರೆಸ್ಟ್

Friday, December 21st, 2018
police-arrest

ಬೆಂಗಳೂರು: ಹಿರಿಯ ಪೊಲೀಸ್ ಅಧಿಕಾರಿ ಖಾತೆಗೆ ಕನ್ನ ಹಾಕಿದ್ದವನನ್ನು ಬಂಧಿಸುವಲ್ಲಿ ಸಿಐಡಿ ಸೈಬರ್ ಕ್ರೈಂ ವಿಭಾಗದ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಕೋಲ್ಕತ್ತಾ ಮೂಲದ ಎಲೆಕ್ಟ್ರಿಷಿಯನ್ ಕಿಶೋರ್ ಕುಮಾರ್ (28) ಬಂಧಿತ ವ್ಯಕ್ತಿ. ಅಕ್ಟೋಬರ್ 15 ರಂದು ಬ್ಯಾಂಕ್ ಕಸ್ಟಮರ್ ಕೇರ್ ಎಕ್ಸಿಕ್ಯುಟಿವ್ ಸೋಗಿನಲ್ಲಿ ಹಿರಿಯ ಅಧಿಕಾರಿ ಆಶೀತ್ ಮೋಹನ್ ಪ್ರಸಾದ್ಗೆ ಕರೆ ಮಾಡಿದ್ದ ಆರೋಪಿ, ನಿಮ್ಮ ಡೆಬಿಟ್ ಕಾರ್ಡ್ ಅವಧಿ ಮುಗಿದಿದೆ, ನವೀಕರಣ ಮಾಡಬೇಕು ಅಂತಾ ಖಾತೆಯ ವಿವರಗಳನ್ನ ಪಡೆದಿದ್ದ. ಬಳಿಕ ಮತ್ತೊಂದು ನಂಬರಿನಿಂದ ಕರೆ ಮಾಡಿ […]