Blog Archive

ಕಂಕನಾಡಿ: ಹಳೆ ರಸ್ತೆ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ

Saturday, January 20th, 2018
kankanadi

ಮಂಗಳೂರು: ಸ್ಮಾರ್ಟ್‌ ಸಿಟಿಯಾಗಲು ಸಿದ್ಧಗೊಳ್ಳುತ್ತಿರುವ ನಗರದ ಹೃದಯ ಭಾಗದಲ್ಲೇ ಸಮಸ್ಯೆಗಳು ಹೆಚ್ಚುತ್ತಿದ್ದು, ಕಂಕನಾಡಿ ಹಳೆ ರಸ್ತೆ ಭಾಗದ ಜನರು ಮಹಾನಗರ ಪಾಲಿಕೆಗೆ ಹಿಡಿಶಾಪ ಹಾಕತೊಡಗಿದ್ದಾರೆ. ವಾಹನ ದಟ್ಟನೆ ಹಾಗೂ ಜನಸಂದಣಿ ಜಾಸ್ತಿಯಿರುವ ಕಂಕನಾಡಿ ಹಳೆ ರಸ್ತೆಯ ಕೊಚ್ಚಿನ್‌ ಬೇಕರಿಯಿಂದ ಪಂಪ್‌ವೆಲ್‌ ರಾಷ್ಟ್ರೀಯ ಹೆದ್ದಾರಿ ವರೆಗಿನ (ಕಂಕನಾಡಿ ಓಲ್ಡ್‌ ರೋಡ್‌) ಸುಮಾರು ಮುಕ್ಕಾಲು ಕಿಲೋ ಮೀಟರ್‌ ರಸ್ತೆಯ ಕಾಮಗಾರಿ ಪ್ರಾರಂಭವಾಗಿ 2 ತಿಂಗಳು ಕಳೆದಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ಅರ್ಧಂಬರ್ಧ ಕಾಮಗಾರಿಯಿಂದ ತೊಂದರೆಯಾಗುತ್ತಿರುವುದೇ ಇದಕ್ಕೆ ಕಾರಣ. ಸ್ಥಳೀಯರು ಹೇಳುವಂತೆ, ಹಿಂದೆ […]

ಕಂಕನಾಡಿ ರೈಲ್ವೆ ಸ್ಟೇಷನ್ ರಸ್ತೆ ಅಗಲೀಕರಣ ಕಾರ್ಯ ಪ್ರಗತಿಯಲ್ಲಿದೆ – ಶಾಸಕ ಜೆ.ಆರ್.ಲೋಬೊ

Monday, January 8th, 2018
J-R-Lobo

ಮಂಗಳೂರು:ಕಂಕನಾಡಿ ರೈಲ್ವೆ ಸ್ಟೇಷನ್‌ಗೆ ಹೋಗುವ ರಸ್ತೆ ಅತ್ಯಂತ ಕಿರಿದಾಗಿದ್ದು, ಸಾರ್ವಜನಿಕರಿಗೆ ಅಲ್ಲಿಗೆ ಮುಟ್ಟಲು ಬಹಳ ಕಷ್ಟದ ಪರಿಸ್ಥಿತಿ ಎದುರಾಗಿತ್ತು. ಬೆಂಗಳೂರು, ಮುಂಬಯಿ, ದೆಹಲಿ, ಉತ್ತರ ಬಾರತಕ್ಕೆ ಚಲಿಸುವ ರೈಲುಗಳು ಆ ನಿಲ್ದಾಣಕ್ಕೆ ಆಗಮಿಸುವುದರಿಂದ ಈ ರಸ್ತೆಯ ಅಭಿವೃದ್ಧಿ ಅತ್ಯಂತ ಅಗತ್ಯವಾಗಿದ್ದು, ಈಗಾಗಲೇ ಕಾರ್ಯ ಆರಂಭಿಸಲಾಗಿದೆ. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಶ್ರೀ.ಜೇ.ಆರ್ ಲೋಬೊರವರು ಇಂದು ತಾ.05-01-2018ರಂದು ಅಗಲೀಕರಣ ಕಾಮಗಾರಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ಮಾಡಿ, ಈ ರಸ್ತೆಯು ಅತೀ ಕಿರಿದಾಗಿದ್ದು, ಸಾರ್ವಜನಿಕರಿಗೆ ಪ್ರಯಾಣಿಸಲು ತೊಂದರೆಯಾಗುತ್ತಿತ್ತು. ಜನರು ಅನೇಕ […]

ನಗರದ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ, ಬಸ್‌‌‌ ಕಂಡಕ್ಟರ್‌ ಪೊಲೀಸ್ ವಶ

Wednesday, October 18th, 2017
ganja

ಮಂಗಳೂರು:  ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡಸಿ ನಗರದ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾವನ್ನು ಮಾರಾಟ ಮಾಡುತ್ತಿದ್ದವನನ್ನು ಬಂಧಿಸಿದ್ದಾರೆ. ಮೊಹಮ್ಮದ್ ಇಝುದ್ದಿನ್ (32) ಬಂಧಿತ ಆರೋಪಿ. ಕಂಕನಾಡಿ ನಗರ ವ್ಯಾಪ್ತಿಯ ಪಂಪ್ವೆಲ್ ವೃತ್ತ ಬಳಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು, ವೃತ್ತಿಯಲ್ಲಿ ಬಸ್ ನಿರ್ವಾಹಕನಾಗಿರುವ ಬಂಟ್ವಾಳ ಅಮ್ಮುಂಜೆಯ ಮೊಹಮ್ಮದ್ ಇಝುದ್ದಿನ್‌ನನ್ನು ವಶಕ್ಕೆ ಪಡೆದುಕೊಂಡು ಆತನಿಂದ 200 ಗ್ರಾಂ ಗಾಂಜಾ ಹಾಗೂ ಮೊಬೈಲ್ […]

ಕಂಕನಾಡಿ: ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ರಿಕ್ಷಾ ಚಾಲಕ

Thursday, October 5th, 2017
Bhasheer

ಮಂಗಳೂರು: ರಿಕ್ಷಾ ಚಾಲಕನೊಬ್ಬ ಕಂಕನಾಡಿ ಬಳಿ ನೇತ್ರಾವತಿ ನದಿಯ ಸೇತುವೆ ಮೇಲಿಂದ ಜಿಗಿದು  ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ. ಅಶೋಕನಗರದ ಬಶೀರ್ ಅಹಮ್ಮದ್ ಎಂಬ ರಿಕ್ಷಾ ಚಾಲಕ ಆತ್ಮಹತ್ಯೆಗೈದ ವ್ಯಕ್ತಿ ಎಂದು ತಿಳಿದು ಬಂದಿದೆ.ರಿಕ್ಷಾ ನಿಲ್ಲಿಸಿ ಕೂಡಲೇ ನದಿಗೆ ಹಾರಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಕಂಕನಾಡಿ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು , ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಶವಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ.