ನಿರ್ಮಾಣಗೊಂಡು ಎರಡು ವರ್ಷವಾದರೂ ಉಪಯೋಗ ಶೂನ್ಯ ಆಸ್ಪತ್ರೆ
Tuesday, October 18th, 2016ಮುಳ್ಳೇರಿಯಾ: ನಿರ್ಮಾಣ ಕಾಮಗಾರಿ ಪೂರ್ತಿಗೊಂಡು ವರ್ಷಗಳೆರಡು ಕಳೆದರೂ ಮುಳ್ಳೇರಿಯಾ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಉದ್ಘಾಟನೆಗೊಳ್ಳದೆ ಉಪಯೋಗ ಶೂನ್ಯವಾಗಿದ್ದು, ಲಕ್ಷಾಂತರ ರೂ.ವ್ಯಯಿಸಿ ನಿರ್ಮಿಸಲಾದ ಕಟ್ಟಡ ವ್ಯರ್ಥವಾಗುತ್ತಿದೆ. ಎಂಡೋಸಲ್ಫಾನ್ ಸಂತ್ರಸ್ಥರು ಅಧಿಕವಿರುವ ಪ್ರದೇಶವೆಂದು ಪರಿಗಣಿಸಿ ನಿರ್ಮಿಸಲಾದ ಈ ಆಸ್ಪತ್ರೆ ನಿತ್ಯ ಚಿಕಿತ್ಸೆಗಳಿಗೆ ಆಗಮಿಸುವ ನೂರಾರು ರೋಗಿಗಳಿಗೆ ಯಾವುದೇ ಪ್ರಯೋಜನಕ್ಕೆ ಬಾರದೆ ಉಪಯೋಗಶೂನ್ಯವಾಗಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ.ಈ ನೂತನ ಕಟ್ಟಡ ನಿರ್ಮಾನಕ್ಕೆ ಎಂಡೋಸಲ್ಫಾನ್ ಪ್ಯಾಕೇಜ್ ಹಾಗೂ ನಬಾರ್ಡ್ ಅನುದಾನದಿಂದ ಒಟ್ಟು 64 ಲಕ್ಷ ರೂ.ಗಳನ್ನು ವ್ಯಯಿಸಿ 2013 ಮೇ ತಿಂಗಳಲ್ಲಿ ಕಾಮಗಾರಿ ಆರಂಭಿಸಿ […]