ಕನ್ನಡ ಸಾಹಿತ್ಯ ಸಮ್ಮೇಳನ : ಆಮಂತ್ರಣ ಪತ್ರಿಕೆ ಬಿಡುಗಡೆ
Monday, March 9th, 2020
ಉಜಿರೆ : ಪೆರಿಂಜೆ ಗ್ರಾಮದ ಸಂತೃಪ್ತಿ ಭವನದಲ್ಲಿ ಇದೇ 24 ರಂದು ಮಂಗಳವಾರ ನಡೆಯಲಿರುವ ಬೆಳ್ತಂಗಡಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಭಾನುವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಸ್ವಾಗತ ಸಮಿತಿ ಅಧ್ಯಕ್ಷ ವಿಕಾಸ್ ಜೈನ್, ಜಿಲ್ಲಾ ಪಂಚಾಯಿತಿ ಸದಸ್ಯ ಪಿ. ಧರಣೇಂದ್ರ ಕುಮಾರ್, ಸೋಮಶೇಖರ್ ಶೆಟ್ಟಿ, ವಿದ್ಯಾನಂದ ಕುಮಾರ್, ಡಾ. ಶ್ರೀನಾಥ್ ಎಂ.ಪಿ., ರಾಮಕೃಷ್ಣ ಭಟ್ ಮತ್ತು ಇಸ್ಮಾಯಿಲ್, ಕೆ. ಉಪಸ್ಥಿತರಿದ್ದರು.