ಈಶ್ವರಮಂಗಲದ ಮದುವೆಯ ಬಸ್ಸು ದುರಂತ ; ಮೃತರ ಸಂಖ್ಯೆ ಎಂಟಕ್ಕೇರಿಕೆ
Sunday, January 3rd, 2021ಕಾಸರಗೋಡು : ಸುಳ್ಯದ ಈಶ್ವರಮಂಗಲದಿಂದ ಕಾಸರಗೋಡಿನ ಪಾಣತ್ತೂರು ಕರಿಕೆಗೆ ಮದುವೆಯ ದಿಬ್ಬಣ ಹೊರಟಿದ್ದ ಸುಮಾರು ಅರವತ್ತು ಜನರಿದ್ದ ಖಾಸಗಿ ಬಸ್ಸೊಂದು ಪಲ್ಟಿಯಾಗಿ ಇಬ್ಬರು ಮಕ್ಕಳು ಸೇರಿದಂತೆ 8 ಜನ ದಾರುಣವಾಗಿ ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡ ಘಟನೆ ಪಾಣತ್ತೂರು ಕಲ್ಲಪ್ಪಳ್ಳಿ ಬಳಿ ನಡೆದಿದೆ. ಮೃತರನ್ನು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಮತ್ತು ಪುತ್ತೂರಿನ ನಿವಾಸಿಗಳಾದ ರಾಜೇಶ್, ರವಿ ಚಂದ್ರನ್, ಸುಮತಿ, ಜಯಲಕ್ಷ್ಮಿ, ಶ್ರೇಯಸ್ ಮತ್ತು ಆದರ್ಶ್ ಎಂದು ಗುರುತಿಸಲಾಗಿದೆ. ಗಾಯಾಳುಗಳಿಗೆ ಕಾಞಂಗಾಡ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಜಿಲ್ಲಾಸ್ಪತ್ರೆಗೆ ದಾಖಲಾದ 29 […]