ಉತ್ತರ ಕ್ರಿಯೆಯ ಸೇವೆಯ ಮಾಡುವ ಕಾಗೆಯನ್ನು ಎತ್ತಿಕೊಂಡು ಹೋದ ಕಾಪು ಅರಣ್ಯ ಸಿಬ್ಬಂದಿಗಳು

Saturday, July 13th, 2019
prashanth poojary

ಕಾಪು : ಕೊಂಬಗುಡ್ಡೆಯ ಪ್ರಾಣಿ ಪ್ರಿಯ ಪ್ರಶಾಂತ್ ಪೂಜಾರಿಯವರು ಮೂರು ತಿಂಗಳಿಂದ ಪ್ರೀತಿಯಿಂದ ಸಾಕಿದ್ದ ಮುದ್ದಿನ ಕಾಗೆಯನ್ನು ಅದರ ಗೂಡಿನಿಂದ ಶನಿವಾರ ಬೆಳಿಗ್ಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಎತ್ತಿಕೊಂಡು ಹೋಗಿರುವುದಾಗಿ ಮೆಗಾ ಮೀಡಿಯಾಗೆ ಹೇಳಿದರು. ಕಾಗೆ ಸಾಕಿದ ಸುದ್ದಿ ತಿಳಿದ ಉಡುಪಿ ವಲಯ ಅರಣ್ಯಾಧಿಕಾರಿಗಳ ಆದೇಶದ ಮೇರೆಗೆ ಕಾಪು ಅರಣ್ಯ ಸಿಬ್ಬಂದಿಗಳು  ಪ್ರಶಾಂತ್ ಮನೆಗೆ ತೆರಳಿ ಕಾಗೆಯನ್ನು ಹುಡುಕಿಕೊಂಡು ಬಂದಿದ್ದರು. ಮೂರು ತಿಂಗಳ ಹಿಂದೆ ಮನೆ ಸಮೀಪದ ತೆಂಗಿನ ಮರದಿಂದ ಮೂರು ಕಾಗೆ ಮರಿಗಳು ಕೆಳಗೆ ಬಿದ್ದಿದ್ದವು. ಪಕ್ಷಿ ಪ್ರಿಯ ಪ್ರಶಾಂತ್ ಕಾಗೆಮರಿಗಳನ್ನು […]

ಉತ್ತರಕ್ರೀಯೆಗೆ ಕಾಗೆ ಬೇಕಾದರೆ ಈ ಮೊಬೈಲ್ ನಂಬರಿಗೆ ಕರೆ ಮಾಡಿ : ಫೇಸ್‌ಬುಕ್ ಪೋಸ್ಟ್

Thursday, July 11th, 2019
crow rent

ಮಂಗಳೂರು : ಇತ್ತೀಚೆಗೆ ಹೆಬ್ರಿ ಸಮೀಪ ಅಪಘಾತದಲ್ಲಿ ಮೃತಪಟ್ಟ ಯುವಕನೊಬ್ಬನ ಉತ್ತರಕ್ರಿಯೆಗೆ ಸಂಪ್ರದಾಯದಂತೆ ಊಟದ ಮೊದಲು ಕಾಗೆಗೆ ಬಡಿಸಿಟ್ಟಿದ್ದರು. ಅಲ್ಲಿ ಕಾಗೆ ಬರಲೇ ಇಲ್ಲ. ಬದಲಿಗೆ ಅಲ್ಲಿಗೆ ವ್ಯಕ್ತಿಯೊಬ್ಬರು ಸಾಕಿದ ಕಾಗೆಯನ್ನು ತಂದಿದ್ದರು. ಆತ ಕಾಗೆಯನ್ನು ಸತ್ತ ವ್ಯಕ್ತಿಗೆ ಊಟ ಇಟ್ಟಲ್ಲಿ ಬಿಡುತ್ತಾರೆ. ಆ ಕಾಗೆ ಅದನ್ನು ತಿಂದು ಉತ್ತರಕ್ರಿಯೆಗೆ ಬಂದ ಜನರನ್ನು ಅಚ್ಚರಿ ಮೂಡಿಸಿತು. ಕಾಪು ಸಮೀಪದ ಮಲ್ಲಾರ್, ಕೊಂಬಗುಡ್ಡೆಯ ಪ್ರಶಾಂತ್ ಪೂಜಾರಿ ಎಂಬವರು ಉತ್ತರಕ್ರೀಯೆಗೆಂದೇ ಕಾಗೆ ಸಾಕಿದ್ದಾರೆ. ನೀವು ಉತ್ತರಕ್ರೀಯೆ ಇದ್ದರೆ ಇವರಿಗೆ ಕರೆಮಾಡಿ […]

ಮಂಜೇಶ್ವರದಲ್ಲಿಯೂ ಸಿಎಂ ಸಿದ್ದರಾಮಯ್ಯನನ್ನು ಕಾಡಿದ ಕಾಗೆ

Thursday, January 19th, 2017
cm crow

ಮಂಜೇಶ್ವರ : ಮಂಜೇಶ್ವರದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಗೌರವಾರ್ಥ ಅವರ ಹುಟ್ಟೂರು ಮಂಜೇಶ್ವರದಲ್ಲಿ ಕೇರಳ ಸರಕಾರದ ಸಹಾಯದೊಂದಿಗೆ ನಿರ್ಮಿಸಲಾಗಿರುವ ಗಿಳಿವಿಂಡು ಸಾಂಸ್ಕೃತಿಕ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಇಂದು ಭಾಗವಹಿದ್ದ ಮುಖ್ಯ ಮಂತ್ರಿ ಸಿದ್ದ ರಾಮಯ್ಯ ಅವರಿಗೆ ಕಾಗೆಯೊಂದು ಅಡ್ಡಿಪಡಿಸಿತು. ವೇದಿಕೆಯ ಮೇಲೆ ಕುಳಿತಿದ್ದ ಸಿಎಂ ಮೇಲೆ ಪಕ್ಕದ ಮರದಲ್ಲಿ ಕುಳಿತಿದ್ದ ಕಾಗೆಯೊಂದು ಹಿಕ್ಕೆ ಹಾಕಿತು. ಇದರಿಂದ ಸಿಎಂ ಮುಜುಗರಕ್ಕೊಳಗಾದರು. ತಕ್ಷಣ ಶಾಸಕ ಮೊಯ್ದೀನ್ ಬಾವಾ ಸ್ವಚ್ಛಗೊಳಿಸಲು ಟಿಶ್ಯೂ ಪೇಪರ್ ಕೊಟ್ಟರು.ಮೂಡಾದ ಮಾಜಿ ಅಧ್ಯಕ್ಷ ತೇಜೋಮಯ ಅವರು ಸಿಎಂ ಪಂಚೆ […]