ಮನೆ ಕಟ್ಟುವ ವಿಚಾರವಾಗಿ ಜಗಳವಾಡಿ ಇಬ್ಬರು ಮಕ್ಕಳ ಜೊತೆ ಕಾಲುವೆಗೆ ಜಿಗಿದ ಪ್ರೌಢಶಾಲೆಯ ಶಿಕ್ಷಕಿ
Tuesday, October 13th, 2020ದಾವಣಗೆರೆ: ಮನೆ ಕಟ್ಟುವ ವಿಚಾರವಾಗಿ ಪತಿಯ ಜೊತೆ ಜಗಳ ಮಾಡಿಕೊಂಡ ಮಹಿಳೆಯೊಬ್ಬರು ಇಬ್ಬರು ಮಕ್ಕಳ ಜೊತೆ ತುಂಗಭದ್ರಾ ಕಾಲುವೆಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ. ಶ್ರೀದೇವಿ (38), ಅನುಷಾ (10), ನೂತನ್ (08) ಆತ್ಮಹತ್ಯೆಗೆ ಶರಣಾದ ತಾಯಿ ಮಕ್ಕಳು. ದಾವಣಗೆರೆ ನಗರದ ಹೊರವಲಯದ ಎಚ್ ಕಲ್ಪನಹಳ್ಳಿ ಬಳಿ ತುಂಗಭದ್ರ ಕಾಲುವೆಯಲ್ಲಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಾವಣಗೆರೆಯ ಜಯನಗರದಲ್ಲಿ ವಾಸವಾಗಿದ್ದ ಶ್ರೀದೇವಿ ವೃತ್ತಿಯಲ್ಲಿ ಪ್ರೌಢಶಾಲೆಯ ಶಿಕ್ಷಕಿಯಾಗಿದ್ದರು. ಪತಿ ಜೊತೆ ಮನೆ ಕಟ್ಟುವ ವಿಚಾರವಾಗಿ ಜಗಳ ಮಾಡಿಕೊಂಡಿ ಆತ್ಮಹತ್ಯೆಯ ನಿರ್ಧಾರಕ್ಕೆ ಮುಂದಾಗಿದ್ದರು. […]