‘ಓಶಿಯಾನಸ್ ಫೆಸ್ಟ್’ ನ ಸಮಾರೋಪ ಸಮಾರಂಭ

Thursday, February 20th, 2020
Valedictory

ಮೂಡುಬಿದಿರೆ : ಮಾನವಿಕ ಶಾಸ್ತ್ರವು ಜಗತ್ತಿನ ಎಲ್ಲಾ ವಿಷಯಗಳನ್ನು ಅರಿಯಲು ಇರುವ ಬಹುದೊಡ್ಡ ಹೆಬ್ಬಾಗಿಲು ಎಂದು ಕುವೈಟ್‌ನ ವಿಶ್ವಸಂಸ್ಥೆಯ ಪ್ರಾದೇಶಿಕ ಸಮುದ್ರ ಪರಿಸರ ಸಂರಕ್ಷಣೆ ಕಾರ‍್ಯಾಲಯದ ಹಿರಿಯ ಸಲಹೆಗಾರ ಡಾ ಸುದರ್ಶನ ರಾಮರಾಜು ತಿಳಿಸಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಹ್ಯುಮ್ಯಾನಿಟಿ ವಿಭಾಗದಿಂದ ಆಯೋಜಿಸಿದ್ದ ಎರಡು ದಿನದ ರಾಷ್ಟ್ರ ಮಟ್ಟದ ’ಓಶಿಯಾನಸ್ ಫೆಸ್ಟ್’ನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಮಾನವಿಕ ವಿಭಾಗದ ವಿದ್ಯಾರ್ಥಿಗಳಿಗೆ ಹಲವು ವಿಷಯಗಳನ್ನು ಅರಿಯಲು ವಿಫುಲ ಅವಕಾಶಗಳು ಸಿಗುತ್ತವೆ. ಲಭ್ಯವಿರುವ ಎಲ್ಲಾ ವಿಷಯಗಳನ್ನು ಸಂಯೋಜಿಸಿ ಮನುಕುಲದ […]

ಕನ್ನಡ ಡಿಂಡಿಮ ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಬಿ ಪಿ ಸಂಪತ್ ಕುಮಾರ್

Wednesday, February 19th, 2020
kannada-dindima

ವಿದ್ಯಾಗಿರಿ : ಎಂದೆಂದಿಗೂ ಕನ್ನಡವಾಗಿರು ಎಂದರೆ ಭಾಷೆ ಮಾತ್ರ ಅಲ್ಲ. ಅದು ನಾಡಿಗಾಗಿ ನುಡಿಗಾಗಿ ನೆಲಕ್ಕಾಗಿ, ಪರಿಸರಕ್ಕಾಗಿ ತೋರಿಸ ತಕ್ಕಂತ ಎಲ್ಲಾ ರೀತಿಯ ಕಾಳಜಿಯು ಕನ್ನಡ ಎಂದು ಶ್ರೀ ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯುತ್ತ ಕಾಲೇಜಿನ ಕುಲಸಚಿವರಾದ ಡಾ. ಬಿ ಪಿ ಸಂಪತ್ ಕುಮಾರ್ ಅಭಿಪ್ರಾಯ. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಕನ್ನಡ ಸಂಸ್ಕೃತಿ ಅಧ್ಯಯನ ಕೇಂದ್ರ, ಕನ್ನಡ ವಿಭಾಗ ಆಯೋಜಿಸಿದ್ದ ಕನ್ನಡ ಡಿಂಡಿಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ವಿದ್ಯಮಾನದಲ್ಲಿ ಕನ್ನಡ ಮಾಧ್ಯಮಗಳು ಅವನತಿ ಹೊಂದುತಿವೆ. […]

ಆಳ್ವಾಸ್‌ನಲ್ಲಿ “ಓಶಿಯಾನಸ್ ಫೆಸ್ಟ್”

Tuesday, February 18th, 2020
alvas

ಮೂಡುಬಿದಿರೆ : ಫೆಸ್ಟ್‌ಗಳು ವಿದ್ಯಾರ್ಥಿ ಜೀವನದಲ್ಲಿ ತುಂಬಾ ಮುಖ್ಯವಾಗುತ್ತವೆ. ಇದು ಕೊನೆಯವರೆಗೂ ಉಳಿಯುವಂತಹ ನೆನಪು ಕೂಡ ಆಗಿರುತ್ತದೆ. ಹಾಗೇ ಅನೇಕ ರೀತಿಯ ಪ್ರತಿಭೆಗಳು ಹುಟ್ಟಲು ಮತ್ತು ಬೆಳೆಯಲು ಅದ್ಭುತ ವೇದಿಕೆಯಾಗಿರುತ್ತದೆ. ಅದೇ ರೀತಿ ಸಮಾಜದ ಬಗ್ಗೆ ವಿದ್ಯಾರ್ಥಿಗಳಿಗೆ ಕಾಳಜಿ ಹುಟ್ಟುವಂತಹದ್ದು ಮತ್ತು ನಾಯಕತ್ವ ಬೆಳೆಯುವುದು ಈ ರೀತಿಯ ಫೆಸ್ಟ್‌ಗಳಿಂದ ಎಂದು ಬಿಗ್‌ಬಾಸ್ 7ನೇ ಆವೃತ್ತಿಯ ವಿನ್ನರ್ ಶೈನ್ ಶೆಟ್ಟಿ ಹೇಳಿದರು. ಇವರು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಹ್ಯೂಮ್ಯಾನಿಟಿ ವಿಭಾಗದಿಂದ ಆಯೋಜಿಸಿದ್ದ ”ಓಶಿಯಾನಸ್ ಫೆಸ್ಟ್”ನಲ್ಲಿ ಮಾತನಾಡಿದರು. ಕಾರ‍್ಯಕ್ರಮವನ್ನು […]