ರೈಲಿನ ಎಲ್‌ಪಿಜಿ ಟ್ಯಾಂಕ್ ಮೇಲೆ ಹತ್ತಿ ಸೆಲ್ಫಿ ತೆಗೆಯುತ್ತಿದ್ದ ಬಾಲಕನಿಗೆ ವಿದ್ಯುತ್ ಶಾಕ್

Thursday, April 15th, 2021
Selfi

ಮಂಗಳೂರು : ರೈಲಿನ ಎಲ್‌ಪಿಜಿ ಟ್ಯಾಂಕ್ ಮೇಲೆ ಹತ್ತಿ ಸೆಲ್ಫಿ ತೆಗೆಯುತ್ತಿದ್ದ ವೇಳೆ ರೈಲ್ವೆ ವಿದ್ಯುತ್‌ ತಂತಿ ತಗುಲಿ ಬಾಲಕನಿಗೆ ಗಂಭೀರ ಸುಟ್ಟ ಗಾಯವಾದ ಘಟನೆ ಏ.14ರ ಬುಧವಾರ ಇಲ್ಲಿನ ಕೆಂಜಾರು ತೋಕೂರು ಬಳಿ ನಿಲ್ಲಿಸಿದ್ದ ನಡೆದಿದೆ. ಜೋಕಟ್ಟೆ ಎಚ್‌ಪಿಸಿಎಲ್‌ ಕಾಲನಿ ನಿವಾಸಿ ಮಹಮ್ಮದ್‌ ದಿಶಾನ್‌(15)ವಿದ್ಯುತ್‌ ಅಘಾತಕ್ಕೊಳಗಾದ ಬಾಲಕ. ಎ.14ರಂದು ಇತರ ಸ್ನೇಹಿತರೊಂದಿಗೆ ರೈಲ್ವೆ ವ್ಯಾಗನ್‌ ಬಳಿ ಆಟವಾಡುತ್ತಿದ್ದಾಗ ದಿಶಾನ್‌ ಸೆಲ್ಫಿ ತೆಗೆಯಲು ಮೇಲೆ ಹೋಗಿದ್ದ ಎನ್ನಲಾಗಿದೆ. ಈ ಸಂದರ್ಭ ವಿದ್ಯುತ್‌ ತಂತಿ ಗಮನಿಸದೆ ಬಾಲಕ ದಿಶಾನ್‌ […]

ಅಭಿವೃದ್ಧಿಯ ಜೊತೆಗೆ ಜನ ಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವುದು ಸಂಸ್ಥೆಗಳ ಹೊಣೆ: ಯು.ಟಿ. ಖಾದರ್

Saturday, September 15th, 2018
u-t-khader

ಮಂಗಳೂರು: ಜಿಲ್ಲಾಡಳಿತ ಮತ್ತು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ಕೆಂಜಾರಿನಲ್ಲಿ ಶಾಶ್ವತ ಚರಂಡಿ ನಿರ್ಮಾಣಕ್ಕೆ 6 ಕೋಟಿ 75 ಲಕ್ಷ ರೂ.ಗಳನ್ನು ಸಿಎಸ್‍ಆರ್ ನಿಧಿಯಿಂದ ನೀಡಿದ್ದು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಲೋಕಸಭಾ ಸದಸ್ಯರ ಉಪಸ್ಥಿತಿಯಲ್ಲಿ ಪರಸ್ಪರ ಒಡಂಬಡಿಕೆ ನಡೆಯಿತು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದು, ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ಮಾತನಾಡಿ, ಅಭಿವೃದ್ಧಿಯ ಜೊತೆಗೆ ಅಭಿವೃದ್ಧಿಗೆ ಪೂರಕ ನೆರವು ನೀಡುವ ಜನ ಸಾಮಾನ್ಯರಿಗೆ ಪರಿಹಾರ ನೀಡುವುದಲ್ಲದೆ […]

ಆತ್ಮಗೌರವ, ಸ್ವಾಭಿಮಾನ, ನಿಸ್ವಾರ್ಥ ಸೇವೆಯಿಂದ ಶಕ್ತಿಶಾಲಿ ರಾಷ್ಟ್ರ ನಿರ್ಮಾಣವಾಗುತ್ತದೆ : ಮೋಹನ್ ಭಾಗವತ್

Monday, February 4th, 2013
RSS Vibhag Sanghik

ಮಂಗಳೂರು : ಯುವಜನತೆಯೇ ದೇಶದ ಶಕ್ತಿ, ಯುವಜನತೆ ಕೈಗೆತ್ತಿಕೊಂಡ ಸದಾಶಯದ ಕಾರ್ಯಗಳೆಲ್ಲವೂ ಗುರಿ ತಲುಪುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ಮಾರ್ಗದರ್ಶನವನ್ನು ನೀಡುತ್ತಿದೆ. ಆತ್ಮಗೌರವ, ಸ್ವಾಭಿಮಾನ, ಪರರ ಹಿತಕ್ಕಾಗಿ ನಿಸ್ವಾರ್ಥ ಸ್ಪಂದನದ ಕರ್ತವ್ಯವನ್ನು ಪ್ರತಿಯೋರ್ವನೂ ನಿರ್ವಹಿಸಿದಾಗ ತೇಜಸ್ವಿಯಾದ ಶಕ್ತಿಶಾಲಿ ರಾಷ್ಟ್ರ ನಿರ್ಮಾಣವಾಗುತ್ತದೆ. ಎಂದು ರಾಷ್ಟ್ರೀಯ ಸ್ವಯಂಸೇವ ಸಂಘದ ಸರಸಂಘಚಾಲಕ್‌ ಮೋಹನ್‌ ಭಾಗವತ್‌ ಹೇಳಿದರು. ಬಜಪೆ ಸಮೀಪದ ಕೆಂಜಾರು ಬಳಿ ಭಾನುವಾರ ಸಂಘದ ಮಂಗಳೂರು ವಿಭಾಗದ ವತಿಯಿಂದ ನಡೆದ ಆರ್‌ಎಸ್‌ಎಸ್‌ನ ಸಾಂಘಿಕ್ ಕಾರ್ಯಕ್ರಮದಲ್ಲಿ  ಭಾಗವಹಿಸಿ ಅವರು ಮಾತನಾಡಿದರು. ಸಚ್ಚ್ಯಾರಿತ್ರ್ಯದಿಂದ ಕೂಡಿದ ಸಂಘಟನೆಯಿಂದ […]

ಏರ್‌ ಇಂಡಿಯಾ ದುರಂತ

Saturday, August 21st, 2010
ಏರ್‌ ಇಂಡಿಯಾ ದುರಂತ

ದುಬೈಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ, ಮಂಗಳೂರಿನ ಕೆಂಜಾರು ಬಳಿಯಿರುವ ಬಜ್ಪೆ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿರುವಾಗ ನಿಯಂತ್ರಣ ತಪ್ಪಿದ್ದರಿಂದ ಅಪಘಾತಕ್ಕೀಡಾಗಿ 158 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ದುಬೈಯಿಂದ ಮಂಗಳೂರಿಗೆ ಬೆಳಿಗ್ಗೆ 6.30 ಗಂಟೆಗೆ ಆಗಮಿಸಿದ ಏರ್‌ಇಂಡಿಯಾ ವಿಮಾನ, ಲ್ಯಾಂಡಿಂಗ್ ಮಾಡುವ ಸಂದರ್ಭದಲ್ಲಿ ಅಕಸ್ಮಿಕವಾಗಿ ನಿಯಂತ್ರಣ ತಪ್ಪಿ ತಗ್ಗುಪ್ರದೇಶಕ್ಕೆ ನುಗ್ಗಿ, ನಂತರ ಸ್ಫೋಟಗೊಂಡಿತು ಎಂದು ಏರ್‌ ಇಂಡಿಯಾ ಮೂಲಗಳು ತಿಳಿಸಿವೆ.