ಸಮುದಾಯ ಭವನಕ್ಕೆ ಜಮೀನು ಮಂಜೂರು ಮಾಡಲು ಒತ್ತಾಯಿಸಿ ಬ್ಯಾರಿ ಒಕ್ಕೂಟದಿಂದ ಸಿಎಂಗೆ ಮನವಿ

Saturday, December 16th, 2017
shringari

ಶೃಂಗೇರಿ: ಶೃಂಗೇರಿಯಲ್ಲಿ ಬ್ಯಾರಿ ಸಮುದಾಯ ಭವನ/ಬ್ಯಾರಿ ಸಾಂಸ್ಕೃತಿಕ ಕೇಂದ್ರ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡುವಂತೆ ಶೃಂಗೇರಿ ಕ್ಷೇತ್ರ ಬ್ಯಾರಿ ಒಕ್ಕೂಟವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ. ಇತ್ತೀಚೆಗೆ ಕೊಪ್ಪಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾದ ಒಕ್ಕೂಟದ ಅಧ್ಯಕ್ಷ ಅಬ್ದುಲ್ ಖಾದರ್ ಹಾಗೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಕೆ.ಮುಹಮದ್ ಅವರು ಈ ಮನವಿ ಸಲ್ಲಿಸಿದ್ದು, ಒಕ್ಕೂಟದ ಬಹುಕಾಲದ ಬೇಡಿಕೆಯಾಗಿರುವ ಸಮುದಾಯ ಭವನಕ್ಕೆ ಮೂರು ಎಕರೆ ಸರಕಾರಿ ಜಮೀನು ಮಂಜೂರು ಮಾಡುವಂತೆ ಮನವಿ ಮಾಡಿದರು.