ಕೊಡಗು ಅರಣ್ಯದಲ್ಲಿ ಪ್ಲಾಸ್ಟಿಕ್ ತಿನ್ನುವ ಜಿಂಕೆ, ಮಂಗಗಳು

Wednesday, November 27th, 2019
kodagu

ಮಡಿಕೇರಿ : ಮಾನವ ಸಂಕುಲಕ್ಕೆ ಮಾರಕವಾಗಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳು ಇದೀಗ ವನ್ಯಜೀವಿಗಳಿಗೂ ವಿಷವಾಗಿ ಪರಿಣಮಿಸಿದೆ. ಹಚ್ಚ ಹಸಿರಿನ ಕೊಡಗು ಜಿಲ್ಲೆಯಲ್ಲಿ ಹೆಚ್ಚು ಭಾಗ ಅರಣ್ಯ ಪ್ರದೇಶವೇ ಇದ್ದು, ಪ್ರಾಣಿಗಳಿಗೂ ಕೊರತೆ ಇಲ್ಲ. ಜಿಲ್ಲೆಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗುತ್ತಿದ್ದು, ಇದೇ ಕಾರಣದಿಂದ ಪ್ಲಾಸ್ಟಿಕ್ ತ್ಯಾಜ್ಯ ತುಂಬಿ ಹೋಗಿದೆ. ಈ ಪ್ಲಾಸ್ಟಿಕ್‌ಗಳು ರಸ್ತೆ ಬದಿಯ ಅರಣ್ಯ ಪ್ರದೇಶವನ್ನು ವ್ಯಾಪಿಸುತ್ತಿದ್ದು, ಏನೂ ಅರಿಯದ ವನ್ಯಜೀವಿಗಳು ಇವುಗಳನ್ನು ತಿಂದು ಜೀವಕ್ಕೆ ಕುತ್ತು ತಂದುಕೊಳ್ಳುತ್ತಿವೆ. ಮಂಗ, ಜಿಂಕೆ ಮತ್ತಿತರ ಪ್ರಾಣಿಗಳು ಪ್ಲಾಸ್ಟಿಕ್ […]