ಕರಾವಳಿಯಾದ್ಯಂತ ನಾಗರಪಂಚಮಿ ಆಚರಣೆ
Friday, August 13th, 2021ಮಂಗಳೂರು : ನಾಗರಪಂಚಮಿಯನ್ನು ಕರಾವಳಿಯಾದ್ಯಂತ ಸಾಂಪ್ರದಾಯಿಕವಾಗಿ ವೈದಿಕ ವಿಧಿ ವಿಧಾನಗಳು ಮತ್ತು ವಿಶೇಷ ಪೂಜೆಯೊಂದಿಗೆ ಕೋವಿಡ್ ನಿಯಮಗಳಿಗನುಸಾರವಾಗಿ ಸರಳವಾಗಿ ಆಚರಿಸಲಾಯಿತು. ಮಂಗಳೂರಿನ ಕುಡುಪು ಅನಂತಪದ್ಮನಾಭ ದೇವಸ್ಥಾನದಲ್ಲಿ ನಾಗರಪಂಚಮಿಯನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು. ಭಕ್ತರು ತಮ್ಮ ಪ್ರಾರ್ಥನೆಯನ್ನು ದೇವಸ್ಥಾನದ ಗೇಟ್ಗಳ ಹೊರಗೆ ಮಾಡಿದರು. ದೇವಸ್ಥಾನಗಳಲ್ಲಿ ವಿಶೇಷ ಸೇವೆ ಗಳು ಇರಲಿಲ್ಲ , ಭಕ್ತರು ತಮ್ಮ ಕುಟುಂಬದ ನಾಗಬನಗಳಲ್ಲಿ ಸೀಯಾಳಾಭಿಷೇಕ, ಹಾಲೆರೆಯುವ ಮೂಲಕ ಪೂಜೆ ಸಲ್ಲಿಸುತ್ತಿದ್ದಾರೆ. ನಗರದ ಶರವು ದೇವಾಲಯದಲ್ಲಿ ಸರಕಾರದ ಮಾರ್ಗಸೂಚಿಯಂತೆ ನಾಗರಪಂಚಮಿ ಆಚರಿಸಲಾಯಿತು. ಕುಕ್ಕೆ ಸುಬ್ರಹ್ಮಣ್ಯೇಶ್ವರ ದೇವಸ್ಥಾನ, ಮಂಜೇಶ್ವರ ಅನಂತೇಶ್ವರ ದೇವಸ್ಥಾನ, ಮಂಗಳಾದೇವಿ ದೇವಸ್ಥಾನಗಳಲ್ಲೂ ನಾಗರ […]