ಬಂಟ್ವಾಳ: 10 ತಿಂಗಳ ಮಗುವಿಗೆ ಇದೀಗ ಕೋವಿಡ್ 19 ವೈರಸ್ ಸೋಂಕು ದೃಢ
Friday, March 27th, 2020ಬಂಟ್ವಾಳ: ಮಾರ್ಚ್ 23ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ 10 ತಿಂಗಳ ಮಗುವಿಗೆ ಇದೀಗ ಕೋವಿಡ್ 19 ವೈರಸ್ ಸೋಂಕು ತಗಲಿರುವುದು ಮಗುವಿನ ಗಂಟಲು ಸ್ರಾವ ಪರೀಕ್ಷಾ ವರದಿಯಿಂದ ಇಂದು ಸಾಬೀತುಗೊಂಡಿದೆ. ಈ ಹಿನ್ನಲೆಯಲ್ಲಿ ಕೊವಿಡ್ 19 ಸೋಂಕು ಮಗುವಿನ ಪೋಷಕರು ವಾಸವಿದ್ದ ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದಲ್ಲಿ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಇದೀಗ ಪೂರ್ತಿ ಗ್ರಾಮವನ್ನು ಕ್ವಾರೆಂಟೈನ್ ಮಾಡಲಾಗಿದೆ. ಹೀಗಾಗಿ ಈ ಗ್ರಾಮದಿಂದ ಯಾರು ಹೊರ ಹೋಗದಂತೆ ಮತ್ತು ಈ ಗ್ರಾಮಕ್ಕೆ ಯಾರೂ ಪ್ರವೇಶಿಸದಂತೆ ಜಿಲ್ಲಾಡಳಿತವು […]