ಮಂಗಳೂರಿನಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದವನ ಸಂಬಂಧಿಕನ ಪ್ರತಿಕಾರ, ಪೋಲೀಸರ ಮೇಲೆ ತಲವಾರಿನಿಂದ ಹಲ್ಲೆ

Monday, December 21st, 2020
Noushin

ಮಂಗಳೂರು : ಮಂಗಳೂರಿನಲ್ಲಿ ನಡೆದ ಗಲಭೆಯಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ಸಂಬಂಧಿಕನೊಬ್ಬ ಅದಕ್ಕೆ  ಪ್ರತಿಕಾರವಾಗಿ ಮಂಗಳೂರಿನ ರಥಬೀದಿಯ ಬಳಿಯ ನ್ಯೂ ಚಿತ್ರ ಫರ್ನಿಚರ್ ಮುಂಭಾಗದಲ್ಲಿ ಕರ್ತವ್ಯದಲ್ಲಿದ್ದ ಹೆಡ್ ಕಾನ್‌ಸ್ಟೆಬಲ್ ಮೇಲೆ ತಲವಾರಿನಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಕುದ್ರೋಳಿ ನಿವಾಸಿ ಮಹಮ್ಮದ್‌‌ ನವಾಝ್‌ (30) ಹಾಗೂ 16 ವರ್ಷದ ಬಾಲಕ ಎಂದು ತಿಳಿದುಬಂದಿದೆ. ನವಾಝ್‌ಗೆ ಡಿ.24ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಬಾಲಕನನ್ನು ಉಡುಪಿಯ ನಿಟ್ಟೂರಿನ ಬಾಲಮಂದಿರಕ್ಕೆ ರವಾನೆ ಮಾಡಲಾಗಿದೆ. 2019ರ ಡಿ.19ರಂದು […]

ಕೆ.ಜಿ.ಹಳ್ಳಿ ಗಲಭೆಯಲ್ಲಿ ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ ಕೊಪ್ಪಳದಲ್ಲಿ ಪತ್ರ ಚಳುವಳಿ

Wednesday, August 12th, 2020
koppala

ಕೊಪ್ಪಳ: ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದಕ್ಕೆ  ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಯ ಮೇಲೆ ಕಲ್ಲುಎಸೆದು ಹಿಂಸಾಚಾರ ಮಾಡಿದ್ದಲ್ಲದೆ ಅಲ್ಲಿದ್ದ ಪತ್ರಕರ್ತರ ಮೇಲೆ ಹಲ್ಲೆ ಮಾಡಿದ್ದನ್ನು ಖಂಡಿಸಿ ಕೊಪ್ಪಳ ಮೀಡಿಯಾ ಕ್ಲಬ್ ಬುಧವಾರ ಪತ್ರ ಚಳುವಳಿ ನಡೆಸಿತು. ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ, ಸಮಾಜದ ಏಳಿಗೆಗಾಗಿ ಪತ್ರಕರ್ತರು ಹಗಲಿರುಳು ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿ ಕರ್ತವ್ಯ ನಿರತ ಪತ್ರಕರ್ತರ ಮೇಲೆ ಎಲ್ಲೆಡೆ ಹಲ್ಲೆ, ದೌರ್ಜನ್ಯ ನಡೆಯುತ್ತಿವೆ. ಬೆಂಗಳೂರಿನಲ್ಲಿ ನಡೆದ ಹಲ್ಲೆಯೂ ತೀವ್ರ ನೋವಿನ ಸಂಗತಿ. ಪತ್ರಕರ್ತರ ಮೇಲೆ ಹಲ್ಲೆ ಮಾಡಿದ […]

ದೆಹಲಿ ಹಿಂಸಾಚಾರ : ಗಲಭೆಯಲ್ಲಿ ಬಲಿಯಾದವರ ಸಂಖ್ಯೆ 34ಕ್ಕೆ ಏರಿಕೆ

Thursday, February 27th, 2020
himsachara

ನವದೆಹಲಿ : ಕಳೆದ 4 ದಿನಗಳಿಂದ ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದಿರುವ ಹಿಂಸಾಚಾರದಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಕಂಡಿದೆ. ಇದುವರೆಗೂ ದೆಹಲಿಯ ಸಿಎಎ ಹಿಂಸಾಚಾರಕ್ಕೆ ಒಬ್ಬ ಪೊಲೀಸ್‌ ಕಾನ್ಸ್‌ಟೇಬಲ್‌ ಹಾಗೂ ಐಬಿ ಅಧಿಕಾರಿ ಸೇರಿ 34 ಮಂದಿ ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಭಜನ್‌ಪುರ, ಮೌಜ್‌ಪುರ್‌ ಮತ್ತು ಕಾರವಾಲ್‌ ಪ್ರದೇಶಗಳಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ದೆಹಲಿ ಪೊಲೀಸರು ಇದುವರೆಗೂ 18ಎಫ್‌ಐಆರ್‌ಗಳನ್ನು ದಾಖಲಿಸಿದ್ದು, ಗಲಭೆಗೆ ಸಂಬಂಧಿಸಿದಂತೆ 106 ಜನರನ್ನು ಬಂಧಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಈಶಾನ್ಯ ದೆಹಲಿಯಲ್ಲಿ ಒಂದು ತಿಂಗಳ […]

ಗಲಭೆಗೆ ರಾಜ್ಯ ಸರ್ಕಾರದ ವೈಫಲ್ಯ ಕಾರಣ : ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್

Tuesday, December 24th, 2019
dinesh-gundu rao

ಮಂಗಳೂರು : ನಗರದ ಕೆಪಿಸಿಸಿ ಕಚೇರಿಯಲ್ಲಿ ಡಿ.24 ರ ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, ಗಲಭೆ ರಾಜ್ಯ ಸರ್ಕಾರದ ವೈಫಲ್ಯ ಎಂದು ಹೇಳಿದ್ದಾರೆ. ” ಗಲಭೆಯಲ್ಲಿ ಎಂಟು ಮಂದಿ ಗಾಯಗೊಂಡು, ಇಬ್ಬರು ಅಮಾಯಕರು ಸಾವನ್ನಪ್ಪಿದ್ದಾರೆ. ನಾನು ಮೃತರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯೂ ದೇಶದಾದ್ಯಂತ 25 ಕ್ಕೂ ಹೆಚ್ಚು ಜೀವಗಳನ್ನು ಬಲಿಪಡೆದಿದೆ. ಗಲಭೆಯ ಘಟನೆಗಳಾದಾಗ ಇಷ್ಟು ತುರ್ತಾಗಿ ಗೋಲಿಬಾರ್ ಮಾಡಿರುವ ಘಟನೆ ರಾಜ್ಯದ ಇತಿಹಾಸದಲ್ಲೇ ಇಲ್ಲ, ಪ್ರತಿಭಟನಾಕಾರರನ್ನು ನಿಯಂತ್ರಿಸಲು […]