ಅಕ್ಟೊಬರ್ 2 : ಕಂಕನಾಡಿ ಗರಡಿ ಕ್ಷೇತ್ರದಲ್ಲಿ ಗಾಂಧಿ 150 ಚಿಂತನಾ ಯಾತ್ರೆ ಉದ್ಘಾಟನೆ
Tuesday, October 1st, 2019ಮಂಗಳೂರು : ನಮ್ಮ ರಾಷ್ಟ್ರಪಿತ, ಬ್ರಿಟಿಷರೆದುರು ಭರತಖಂಡವನ್ನು ಒಗ್ಗೂಡಿಸಿದ ಸ್ವಾತಂತ್ರ್ಯ ಸಂಗ್ರಾಮದ ಅಗ್ರಗಣ್ಯ ನೇತಾರ, ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಮಹಾತ್ಮನ ಬದುಕು ಮತ್ತು ಚಿಂತನೆಗಳನ್ನು ಇಂದಿನ ಪೀಳಿಗೆಗೆ, ಅದರಲ್ಲೂ ಮಕ್ಕಳಿಗೆ ಮತ್ತು ಯುವಜನರಿಗೆ ಮನದಟ್ಟು ಮಾಡುವ ಉದ್ದೇಶದಿಂದ ಮಂಗಳೂರಿನ ಹಲವು ಪ್ರಗತಿಪರ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾದ ಪರಂಪರೆಯುಳ್ಳ, ದೇಶಪ್ರೇಮಿ ಸಂಘಟನೆಗಳು ಗಾಂಧಿ 150 ಚಿಂತನಾ ಯಾತ್ರೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ. ಅಕ್ಟೊಬರ್ 2ರ ಗಾಂಧಿ ಜಯಂತಿಯಿಂದ ಆರಂಭಿಸಿ ಜನವರಿ 30ರ ಗಾಂಧಿ ಹುತಾತ್ಮರಾದ […]