ಬಂಗಾರಪಲ್ಕೆ ಗುಡ್ಡ ಕುಸಿತದಿಂದ ಮಣ್ಣಿನಡಿ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆ

Tuesday, February 16th, 2021
sanath

ಬೆಳ್ತಂಗಡಿ :  ಮಲವಂತಿಗೆ ಗ್ರಾಮದ ಬಂಗಾರಪಲ್ಕೆ ಜಲಪಾತದಲ್ಲಿ ಜ.25ರಂದು ಗುಡ್ಡ ಕುಸಿತದಿಂದ ಮಣ್ಣಿನಡಿ ನಾಪತ್ತೆಯಾಗಿದ್ದ ವಿದ್ಯಾರ್ಥಿಯ  ಮೃತದೇಹ ಮಂಗಳವಾರ ಪತ್ತೆಯಾಗಿದೆ. ಲಾಯಿಲ ಗ್ರಾಮದ ಕಾಶಿಬೆಟ್ಟು ವಾಸುದೇವ ಶೆಟ್ಟಿ ಅವರ ಪುತ್ರ ಸನತ್ ಶೆಟ್ಟಿ (20) ಅವರ ಮೃತದೇಹ ಮೂರು ವಾರಗಳ ನಂತರ ಪತ್ತೆಯಾಗಿದೆ. ಬಂಗಾರಪಲ್ಕೆ ಜಲಪಾತದಲ್ಲಿ ಕಾರ್ಯಾಚರಣೆ ನಡೆಸಲು ಬೇಕಾದ ಯಂತ್ರಗಳನ್ನು ಬಳಸಲು ಸರಿಯಾದ ವಾತಾವರಣವಿಲ್ಲದ ಕಾರಣ ಹಲವು ಸಮಯದವರೆಗೂ ಮೃತ ದೇಹ ಪತ್ತೆಯಾಗಿರಲಿಲ್ಲ. ಮಂಗಳವಾರ ಕಲ್ಲು ಬಂಡೆಯಡಿ ಮೃತದೇಹ ಲಭ್ಯವಾಗಿದೆ.  

ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿತ, ವಾಹನ ಸಂಚಾರಕ್ಕೆ ಮತ್ತೆ ಅಡ್ಡಿ

Friday, August 7th, 2020
charmadi

ಬೆಳ್ತಂಗಡಿ : ಚಾರ್ಮಾಡಿ ಘಾಟಿಯಲ್ಲಿ ಗುರುವಾರ ರಾತ್ರಿ ಗುಡ್ಡ ಕುಸಿತಗೊಂಡು ಸಂಚಾರಕ್ಕೆ ತೊಡಕಾಗಿದೆ.  ಈಗಾಗಲೇ  ಚಾರ್ಮಾಡಿ ಘಾಟಿಯಲ್ಲಿ ರಾತ್ರಿ ಸಂಚಾರ ನಿಷೇಧಗೊಲಿಸಲಾಗಿದೆ. ಅಲೆಖಾನ್ ಸಮೀಪ ಗುಡ್ಡ ಕುಸಿತಗೊಂಡ ಪರಿಣಾಮ ಮುಂಜಾನೆ ವೇಳೆ ವಾಹನ ಸಂಚಾರಕ್ಕೆ ಮತ್ತೆ ಅಡ್ಡಿಯಾಗಿದೆ. ಸದ್ಯ ಸ್ಥಳದಲ್ಲಿ ತೆರವು ಕಾರ್ಯಾಚರಣೆ ಸಾಗುತ್ತಿದ್ದು ಒಂದು ಜಿಸಿಬಿ ನಿಯೋಜಿಸಲಾಗಿದೆ. ಇನ್ನು ಕೊಟ್ಟಿಗೆಹಾರ ಬಳಿಯೂ ಭಾರೀ ಮಳೆಯಿಂದ ಚಾರ್ಮಾಡಿ ಘಾಟ್‍ನ ಮಣ್ಣು ರಸ್ತೆ ಕುಸಿದಿದೆ. ರಸ್ತೆಯ ಮೇಲೆ ಬಂಡೆಗಳು, ಮರಗಳು ಉರುಳಿ ಬೀಳುತ್ತಿದ್ದು, ಸವಾರರು ಎಚ್ಚರಿಕೆಯಾಗಿ ಪ್ರಯಾಣಿಸಬೇಕಾಗಿದೆ ಕಳೆದ ವರ್ಷವೂ […]

ಶಿರಾಡಿ : ಗುಡ್ಡ ಕುಸಿತದಿಂದಾಗಿ ಬಂಡೆ ಕಲ್ಲುಗಳು ರಸ್ತೆಗೆ ಉರುಳಿ ಬಿದ್ದಿವೆ

Friday, September 6th, 2019
shiradi

ನೆಲ್ಯಾಡಿ : ಶಿರಡಿ ಘಾಟ್ ನ ಮಾರನಹಳ್ಳಿ ಸಮೀಪ ಗುಡ್ಡ ಕುಸಿತ ಸಂಭವಿಸಿದ್ದು, ಐದಾರು ಬಂಡೆ ಕಲ್ಲುಗಳು ರಸ್ತೆ ಬದಿಗೆ ಉರುಳಿ ಬಿದ್ದಿವೆ. ಇನ್ನು ಒಂದು ಬಂಡೆ ಕುಸಿದು ಬೀಳುವ ಹಂತದಲ್ಲಿದ್ದು, ಅಪಾಯಕಾರಿಯಾಗಿ ಗೋಚರಿಸಿದೆ. ಈ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಇದರಿಂದಾಗಿ ಗುಡ್ಡ ಕುಸಿತ ಸಂಭವಿಸಿದೆ ಎನ್ನಲಾಗಿದೆ. ಗುಡ್ಡ ಕುಸಿತದಿಂದ ಶಿರಾಡಿ ಘಾಟ್ ನಲ್ಲಿ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ. ಆದರೆ ಅಪಾಯಕಾರಿ ಸ್ಥಿತಿಯಲ್ಲಿರುವ ಬಂಡೆ ಉರುಳಿ ಬಿದ್ದರೆ ಅನಾಹುತ ಉಂಟಾಗುವ ಸಾಧ್ಯತೆ […]