ದನದ ವ್ಯಾಪಾರಿ ಸಾವು ಕೇಸ್, ಪೊಲೀಸ್ ಆರೋಪಿಗಳನ್ನು ಕರೆಂಟ್ ತೆಗೆದು ಕರೆದೊಯ್ದ ಪೊಲೀಸರು
Monday, June 4th, 2018ಉಡುಪಿ: ದನದ ವ್ಯಾಪಾರಿ ಅನುಮಾನಾಸ್ಪದ ಸಾವು ಪ್ರಕರಣ ಸಂಬಂಧ ಅಮಾನತಾದ ಪೊಲೀಸ್ ಸಹಿತ ಆರೋಪಿಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಎಸ್ಐ ಡಿಎನ್ ಕುಮಾರ್, ಜೀಪು ಚಾಲಕ ಗೋಪಾಲ್, ಹೆಡ್ ಕಾನ್ಸ್ಟೇಬಲ್ ಮೋಹನ್ ಕೋತ್ವಾಲ್ ಹಾಗೂ ಆರೋಪಿಗಳಾದ ಚೇತನ್, ಶೈಲೇಶ್ ಹಾಗೂ ಗಣೇಶ್ ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಲಾಯಿತು. ನ್ಯಾಯಾಧೀಶರ ಮನೆಗೆ ಹಾಜರು ಪಡಿಸುವ ಮೊದಲು ಆರೋಪಿಗಳಿಗೆ ವೈದ್ಯಕೀಯ ತಪಾಸಣೆ ಮಾಡಲಾಯಿತು. ಜಿಲ್ಲಾಸ್ಪತ್ರೆಯ ಹೊರ ಆವರಣದ ಎಲ್ಲಾ ಲೈಟ್ ಬಂದ್ ಮಾಡಿ ಪೊಲೀಸ್ ಆರೋಪಿಗಳನ್ನು ಪೊಲೀಸರು ಕರೆದೊಯ್ದರು.