ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಳಿಗಾಲದ ಮಾಗಿ ಉತ್ಸವಕ್ಕೆ ಚಾಲನೆ
Wednesday, December 25th, 2019ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಳಿಗಾಲದ ಮಾಗಿ ಉತ್ಸವಕ್ಕೆ ನಿನ್ನೆ ಚಾಲನೆ ದೊರೆಯಿತು. ಡಿ.24ರಿಂದ ಜನವರಿ 2ರವರೆಗೆ ಮೈಸೂರಿನ ಅರಮನೆ ಆವರಣದಲ್ಲಿ ಮಾಗಿ ಉತ್ಸವ ಪ್ರಯುಕ್ತ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನಕ್ಕೆ ಮೈಸೂರು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು. ಮಾಗಿ ಉತ್ಸವದಲ್ಲಿ ಒಳಹೊಕ್ಕುತ್ತಿದ್ದಂತೆ ಸ್ವಾಗತ ಕಮಾನು ಎಲ್ಲರನ್ನು ಸ್ವಾಗತಿಸುತ್ತದೆ. ಭಾರತೀಯ ನೌಕಾಪಡೆ,ವಾಯುಪಡೆ, ಬೆಂಗಳೂರು ಅರಮನೆ,ಚಂದ್ರಯಾನ 2, ಹಳೆ ಅರಮನೆ,ಆನೆಗಾಡಿ,ಕಾವೇರಿ ಮಾತೆ,ನವಿಲು,ಅರಮನೆಯ ತ್ರೀನೇತ್ರ ಶಿವಲಿಂಗ ನಿಂಬೆಹಣ್ಣಿನ ಅಲಂಕಾರ,ಲಿಂಗದ ಮುಂಭಾಗ […]