ರೋಟರಿ ಕ್ಲಬ್ ಸಂಘಟನೆಯ ದಾನಧರ್ಮ ಜಗತ್ತಿನೆಲ್ಲೆಡೆ ಪ್ರಸಿದ್ಧವಾಗಿದೆ: ಡಿ ವೇದವ್ಯಾಸ ಕಾಮತ್

Thursday, July 19th, 2018
vedavyas-kamath

ಮಂಗಳೂರು: ಮಂಗಳೂರು ಸರಕಾರಿ ವೆನ್ ಲಾಕ್ ಆಸ್ಪತ್ರೆಗೆ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ಮಂಕಿಯೇಮ್ ಕಿಕ್ ಬಾಕ್ಸಿಂಗ್ ಸಂಸ್ಥೆಯ ವತಿಯಿಂದ ಪಿಸಿಯೋಥೆರಪಿ ಸಲಕರಣೆಗಳನ್ನು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ರೋಟರಿ ಕ್ಲಬ್ ಸಂಘಟನೆಯ ದಾನಧರ್ಮ ಜಗತ್ತಿನೆಲ್ಲೆಡೆ ಪ್ರಸಿದ್ಧವಾಗಿದೆ. ವೆನ್ ಲಾಕ್ ಆಸ್ಪತ್ರೆಗೆ ಪಿಸಿಯೋಥೆರಪಿ ಸಲಕರಣೆಗಳನ್ನು ನೀಡುವ ಮೂಲಕ ಜನಸಾಮಾನ್ಯರ ಸಂಕಷ್ಟಗಳಿಗೆ ರೋಟರಿ ಕ್ಲಬ್ ಮತ್ತು ಮಂಕಿಯೇಮ್ ಕಿಕ್ ಬಾಕ್ಸಿಂಗ್ ಸಂಸ್ಥೆ ಸ್ಪಂದಿಸಿದ ಹಾಗಾಗಿದೆ. […]

ಪಟ್ಲ ಸಂಭ್ರಮ, ಧನ್ಯೋತ್ಸವ ಕಾರ್ಯಕ್ರಮ

Monday, June 4th, 2018
sathish-patla

ಮಂಗಳೂರು: ಅಡ್ಯಾರ್‌ಗಾರ್ಡ್‌ನ್‌ನಲ್ಲಿ ಜರಗಿದ ಪಟ್ಲ ಸಂಭ್ರಮ 2018ರ ಯಶಸ್ಸಿಗೆ ಸಹಕರಿಸಿದ ಎಲ್ಲಾ ಘಟಕದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವ ಧನ್ಯೋತ್ಸವ ಕಾರ್ಯಕ್ರಮವು ಬಲ್ಲಾಲ್‌ಭಾಗ್‌ನ ಪತ್ತುಮುಡಿ ಸೌಧದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ವಹಿಸಿದ್ದರು. ಪಟ್ಲ ಸಂಭ್ರಮದ ಯಶಸ್ಸಿಗೆ ೩೦ ಘಟಕಗಳು ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದರು. ಎಲ್ಲಾ ಘಟಕಗಳು ಸಕ್ರಿಯವಾಗಿ ಭಾಗವಹಿಸಿದ ಕಾರಣ ಪಟ್ಲ ಸಂಭ್ರಮ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು ಎಂದರು. ಮುಂದಿನ ದಿನಗಳಲ್ಲಿ ಎಲ್ಲಾ ಘಟಕಗಳು […]

ಬಿಜೆಪಿಯ ‘ಜನಸುರಕ್ಷಾ ಯಾತ್ರೆ’ ಕೇವಲ ಢೋಂಗಿ ರಾಜಕಾರಣ: ಮುತಾಲಿಕ್

Thursday, March 1st, 2018
janasuraksha

ಮಂಗಳೂರು: ಬಿಜೆಪಿ ನಡೆಸಲು ಉದ್ದೇಶಿಸಿರುವ ಜನಸುರಕ್ಷಾ ಯಾತ್ರೆ ಕೇವಲ ಢೋಂಗಿ ರಾಜಕಾರಣ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಗುರುವಾರ ಮಾತನಾಡಿದ ಅವರು ಬಿಜೆಪಿಯವರಿಗೆ ಕಾಳಜಿ ಇದ್ದರೆ ಭಟ್ಕಳದಿಂದ ಯಾತ್ರೆ ಆರಂಭಿಸಲಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. “ಭಟ್ಕಳ ಬಿಜೆಪಿ ಶಾಸಕ ಚಿತ್ತರಂಜನ್ ಕೊಲೆ ಪ್ರಕರಣದಲ್ಲಿ ಈವರೆಗೆ ಆರೋಪಿಗಳ ಪತ್ತೆಯಾಗಿಲ್ಲ. 1997ರಲ್ಲಿ ಭಟ್ಕಳದ 21 ಜನರ ಕೊಲೆ ಪ್ರಕರಣವನ್ನು ಈವರೆಗೂ ಭೇದಿಸಲು ಸಾಧ್ಯವಾಗಿಲ್ಲ. ಭಟ್ಕಳ ತಾಲೂಕು ಬಿಜೆಪಿ ಅಧ್ಯಕ್ಷರಾಗಿದ್ದ ತಿಮ್ಮಪ್ಪ […]

ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ

Thursday, January 25th, 2018
jaganath

ಮಂಗಳೂರು : ಕರ್ನಾಟಕ ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಸಮಾರಂಭ ಬೆಂಗಳೂರಿನ ವಸಂತ ನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಜರಗಿದ್ದು ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಅವರು ಪತ್ರಿಕೋದ್ಯಮದಲ್ಲಿ ಸಲ್ಲಿಸಿದ ಸೇವೆಗಾಗಿ ಮಾಧ್ಯಮ ಅಕಾಡೆಮಿ ಪ್ರಶಸ್ತಿಯನ್ನು ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರಿಂದ ಸ್ವೀಕರಿಸಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಸಿದ್ಧರಾಮ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ ಎಸ್ ಹರ್ಷ, ಸಾಹಿತಿ ಬರಗೂರು ರಾಮಚಂದ್ರಪ್ಪ, […]

ರಾಷ್ಟ್ರೀಯ ಕಲೋತ್ಸವ ಸ್ಪರ್ಧೆಯಲ್ಲಿ ಯಕ್ಷಗಾನಕ್ಕೆ ಪ್ರಥಮ ಸ್ಥಾನ

Thursday, January 11th, 2018
kalostava

ಬಂಟ್ವಾಳ: ಶಂಭೂರು ಗ್ರಾಮದ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು 2017-18ನೇ ಸಾಲಿನ ರಾಷ್ಟ್ರೀಯ ಕಲೋತ್ಸವ ಸ್ಪರ್ಧೆಯ ರಂಗಭೂಮಿ ವಿಭಾಗದಲ್ಲಿ ಪ್ರದರ್ಶಿಸಿದ ಕಿಷ್ಕಿಂದಾ ಕೌತುಕ ಯಕ್ಷಗಾನವು ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಕೊಂಡಿದ್ದು, ಈ ವಿದ್ಯಾರ್ಥಿಗಳನ್ನು ಮಂಗಳವಾರ ಶಾಲೆಗೆ ಆಗಮಿಸಿದಾಗ ಅದ್ದೂರಿಯಿಂದ ಸ್ವಾಗತಿಸಲಾಯಿತು. ಈ ಸಂದರ್ಭ ಶಾಲಾ ಮೇಲುಸ್ತುವಾರಿ ಕಾರ್ಯಾಧ್ಯಕ್ಷ ಹಾಗೂ ಬೊಂಡಾಲ ಚಾರಿಟೆಬಲ್‌ ಟ್ರಸ್ಟ್‌ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕ ಕಮಲಾಕ್ಷ ಕಲ್ಲಡ್ಕ, ದೈಹಿಕ ಶಿಕ್ಷಣ ಶಿಕ್ಷಕ ಚೆನ್ನಪ್ಪ ಕೆ. […]