ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಳ್ಳದ ಜಮೀರ್ ಸಂವಿಧಾನಕ್ಕೂ ಬೆಲೆ ನೀಡದ ಸಚಿವ : ಡಾ.ಭರತ್ ಶೆಟ್ಟಿ ವೈ

Friday, November 17th, 2023
Bharath Shetty

ಮಂಗಳೂರು : ಎಪಿಜೆ ಅಬ್ದುಲ್ ಕಲಾಂ ಅವರಂತಹ ಶ್ರೇಷ್ಟ ರನ್ನು ರಾಷ್ಟ್ರಪತಿ ಮಾಡಿದ ಬಿಜೆಪಿ, ಸಂವಿಧಾನಾತ್ಮಕ ಹುದ್ದೆಯನ್ನು ಹೊಂದಿರುವ ಶಾಸಕ ಯು.ಟಿ ಖಾದರ್ ಅವರಿಗೂ, ಭಾರತೀಯ ಜನತಾ ಪಾರ್ಟಿ ಗೌರವವನ್ನು ಕೊಡುತ್ತದೆ. ಜಾತಿ ಮತ ಭೇದವನ್ನು ಪರಿಗಣಿಸಿಲ್ಲ. ಕಾಂಗ್ರೆಸ್ನ ವಲಸೆ ನಾಯಕ ಸಚಿವ ಜಮೀರ್ ಅಹ್ಮದ್ ಸದಾ ತನ್ನ ಕೋಮಿನ ಜನರನ್ನು ಹಿಂದುಗಳ ವಿರುದ್ದ ಎತ್ತಿಕಟ್ಟಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೋಮುವಾದಿ ಎಂದು ಬಹಿರಂಗವಾಗಿದೆ ಎಂದು ಕರೆಯಲು ಡಾ. ಭರತ್ ಶೆಟ್ಟಿ ಟೀಕಿಸಿದ್ದಾರೆ. ಬಿಜೆಪಿ‌ಯು ಶಾನ್ವಾಝ್ ,ಅಬ್ಬಾಸ್ […]

ಶಾಸಕ ಜಮೀರ್ ಅಹಮದ್ ಖಾನ್ ಗೆ ಕೋವಿಡ್ ಸೋಂಕು

Tuesday, August 18th, 2020
Zameer Ahmed

ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಗೆ ಕೋವಿಡ್ ಸೋಂಕು ದೃಢವಾಗಿದೆ. ಈ ಬಗ್ಗೆ ಸ್ವತಃ ಜಮೀರ್ ಅಹಮದ್ ಟ್ವಿಟ್ಟರ್ ನಲ್ಲಿ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಟ್ವೀಟ್ ಮಾಡಿರುವ ಶಾಸಕ ಜಮೀರ್ ಅಹಮದ್, ಸಣ್ಣ ಪ್ರಮಾಣದ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂದು ಕೋವಿಡ್-19 ಸೋಂಕು ಪರೀಕ್ಷೆಗೆ ಒಳಗಾಗಿದ್ದೆ. ವರದಿಯಲ್ಲಿ ಸೋಂಕು ದೃಢಪಟ್ಟಿದೆ. ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಕಳೆದ ಕೆಲವು ದಿನಗಳಿಂದ ನನ್ನೊಂದಿಗೆ ಸಂಪರ್ಕವಿದ್ದವರು ಸೋಂಕು ಪರೀಕ್ಷೆಗೆ ಒಳಗಾಗಿ ಎಂದು ಮನವಿ ಮಾಡಿದ್ದಾರೆ.