ಪೆಟ್ರೋಲ್ ಬೆಲೆ ೧ ರೂ. ಅಗ್ಗ, ಡೀಸೆಲ್ ೫೦ ಪೈಸೆ ಹೆಚ್ಚಳ
Thursday, March 14th, 2013ನವ ದೆಹಲಿ : ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬೆಲೆಗಳು ಇಳಿಯುತ್ತಿರುವ ಪರಿಣಾಮ ಪೆಟ್ರೋಲ್ ಬೆಲೆಯೂ ಒಂದು ರೂಪಾಯಿಯಷ್ಟು ಇಳಿಯಲಿದೆ. ಪೆಟ್ರೋಲ್ ಬೆಲೆ ಒಂದು ರೂಪಾಯಿಯಷ್ಟು ಇಳಿಕೆಯಾಗಲಿದ್ದರೆ, ಜನವರಿಯಲ್ಲಿ ಪ್ರತಿ ತಿಂಗಳು ಡೀಸೆಲ್ ಬೆಲೆಯನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡಿರುವುದರಿಂದ, ಡೀಸೆಲ್ ಬೆಲೆ ೪೦ ರಿಂದ ೫೦ ಪೈಸೆ ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಬೆಲೆಯು ಮಾರ್ಚ್ ೧೫ ಶುಕ್ರವಾರ ಅಥವಾ ಮಾರ್ಚ್ ೧೬ ಶನಿವಾರದಿಂದು ಪ್ರಕಟಗೊಳ್ಳುವ ಸಾಧ್ಯತೆಯಿದೆ.