13 ಅಡಿ ಕಾಳಿಂಗ ಸರ್ಪವನ್ನು ಹಿಡಿದು ಚಾರ್ಮಾಡಿ ಘಾಟ್ ಗೆ ಬಿಟ್ಟ ಉರಗ ತಜ್ಞ ಜಾಯ್ ಮಸ್ಕರೇನಸ್!

Monday, June 18th, 2018
mangaluru

ಮಂಗಳೂರು: ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದಲ್ಲಿ ರಸ್ತೆ ಪಕ್ಕದ ಬೇಲಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಹದಿಮೂರು ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ತಜ್ಞರು ರಕ್ಷಿಸಿದ್ದಾರೆ. ಕಾಳಿಂಗ ಸರ್ಪವು ಸವಣಾಲು- ಅಯಿಲಹದಿಮೆ ರಸ್ತೆಯಲ್ಲಿ ಬೇಲಿಯಿಂದ ಹೊರಬರಲು ಹೆಣಗುತ್ತಿದ್ದ ಕಾಳಿಂಗ ಸರ್ಪವನ್ನು ಗ್ರಾಮಸ್ಥರು ನೋಡಿದ್ದಾರೆ. ಆ ಕೂಡಲೇ ಉರಗ ತಜ್ಞ ಜಾಯ್ ಮಸ್ಕರೇನಸ್ (ಸ್ನೇಕ್ ಜಾಯ್ ಅಂತಲೇ ಹೆಸರುವಾಸಿ)ಗೆ ವಿಷಯ ತಲುಪಿಸಿದ್ದಾರೆ. ಹಾವು ಹಿಡಿಯುವ ಕೋಲು ಹಾಗೂ ಚೀಲದೊಂದಿಗೆ ಜಾಯ್ ಸ್ಥಳಕ್ಕೆ ತಲುಪಿದ್ದಾರೆ. ಅಪಾಯಕಾರಿ ವಿಷಜಂತುವಾದ ಕಾಳಿಂಗ ಸರ್ಪವನ್ನು ಬೇಲಿಯಿಂದ […]