ತಾಲೂಕು ಕಚೇರಿಯಲ್ಲಿ ಕೆಲಸ ದೊರಕಿಸಿಕೊಡುವುದಾಗಿ ವಂಚಿಸಿದವನಿಗೆ ಬೆಲ್ಟ್ ನಿಂದ ಹಲ್ಲೆ
Thursday, March 4th, 2021ಮಂಗಳೂರು: ಫೇಸ್ ಬುಕ್ ಮೂಲಕ ಪರಿಚಯ ಮಾಡಿಸಿಕೊಂಡು ತಾಲೂಕು ಕಚೇರಿಯಲ್ಲಿ ಕೆಲಸ ದೊರಕಿಸಿಕೊಡುವುದಾಗಿ ಹೇಳಿ ಮಹಿಳೆಯರ ಸಹಿತ ಹಲವು ಮಂದಿಗೆ ವಂಚನೆಗೈದ ಆರೋಪಿಗೆ ಕೆಲವು ವ್ಯಕ್ತಿಗಳು ಬೆಲ್ಟ್ ನಿಂದ ಮತ್ತು ಗುಂಪಾಗಿ ಸೇರಿ ಹಲ್ಲೆ ನಡೆಸಿರುವ ಘಟನೆ ಮುಲ್ಕಿ ಸಮೀಪ ನಡೆದಿದೆ. ಪುನರೂರು ಎಂಬಲ್ಲಿನ ಜೀತು ಶೆಟ್ಟಿ ಅಲಿಯಾಸ್ ಅಜಯ್ ಶೆಟ್ಟಿ ಎಂಬಾತ, ತನಗೆ ಶಾಸಕ ಡಾ.ವೈ.ಭರತ್ ಶೆಟ್ಟಿಯವರ ಪರಿಚಯ ಇದೆ ಎಂದು ಏಳೆಂಟು ಮಂದಿಗೆ ನಂಬಿಸಿದ್ದಾನೆ. ಎಫ್ಬಿ ಮುಖಾಂತರ ಅವರನ್ನು ಪರಿಚಯಿಸಿಕೊಂಡು ತಾಲೂಕು ಆಫೀಸ್ ನಲ್ಲಿ ಕೆಲಸ ದೊರಕಿಸುವ ಭರವಸೆ ನೀಡಿದ್ದಾನೆ. […]