ಚಾಮರಾಜನಗರದಲ್ಲಿ ಸೆರೆಯಾದ ಪುಂಡಾನೆಯನ್ನು ತಮಿಳುನಾಡಿಗೆ ಬಿಟ್ಟ ಅಧಿಕಾರಿಗಳು

Thursday, October 24th, 2019
Pundane

ಚಾಮರಾಜನಗರ : ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು  ಬನ್ನಿತಾಳಪುರ ಸಮೀಪ  ಕಳೆದ ಮೂರು ದಿನಗಳಿಂದ ರೈತರಲ್ಲಿ ಆತಂಕ ಹುಟ್ಟಿಸಿದ್ದ ಪುಂಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ತಮಿಳುನಾಡಿನಲ್ಲಿ ಈ ಆನೆ 8  ಜನರನ್ನು  ಕೊಂದಿತ್ತು.  ಇಬ್ಬರು ರೈತರಿಗೆ ಗಾಯ ಮಾಡಿತ್ತು,  3 ಹಸುಗಳನ್ನು ತುಳಿದು ಸಾಯಿಸಿ ತ್ತು . ತಮಿಳುನಾಡಿನ ಮಧುಮಲೈ ಅರಣ್ಯದಿಂದ ಬಂದಿದ್ದ ಆನೆ ಬನ್ನಿತಾಳಪುರ ದಲ್ಲಿ ರೈತರ ಹೊಲದಲ್ಲಿ ರಂಪಾಟ ನಡೆಸಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಅರವಳಿಕೆ ನೀಡಿ ಆನೆ ನೆ ಸೆರೆಹಿಡಿಯಲು ಯಶಸ್ವಿಯಾಗಿದ್ದಾರೆ.  ಅಭಿಮನ್ಯು, ಕೃಷ್ಣ, ಗೋಪಾಲಸ್ವಾಮಿ, […]

ಸುಳ್ಯ: ಜೋಡುಪಾಲ ದುರಂತಕ್ಕೆ ಒಂದು ವರ್ಷ; ಮೂರು ಶಾಲೆಗಳಿಗಿಲ್ಲ ಸ್ವಾತಂತ್ರ್ಯ

Friday, August 16th, 2019
Jodupaala

ಸುಳ್ಯ :  ಒಂದು ವರ್ಷದ ಹಿಂದೆ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಚೂರು ಚೂರಾಗಿದ್ದ ಜೋಡುಪಾಲ ಪರಿಸರವೀಗ ಶಾಂತವಾಗಿದ್ದರೂ ನಾಳೆ ಏನಾಗಬಹುದು ಎಂಬ ಆತಂಕ ಜನರಿಂದ ಇನ್ನೂ ದೂರವಾಗಿಲ್ಲ! ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಜೋಡುಪಾಲದಲ್ಲಿ ಕಳೆದ ವರ್ಷದ ಆ. 16ರಂದು ಬೀಭತ್ಸ ರೂಪ ಪಡೆದು ಅನಾಹುತ ಸೃಷ್ಟಿಸಿದ್ದ ತೊರೆ ಈ ವರ್ಷ ತನ್ನ ಪಾಡಿಗೆ ತಾನು ಶಾಂತವಾಗಿ ಹರಿಯುತ್ತಿದೆ. ತೊರೆ ಸೃಷ್ಟಿಸಿದ ಭೀಕರತೆ ಛಾಯೆ ಇನ್ನೂ ಉಳಿದುಕೊಂಡಿದೆ. ಸನಿಹದ ಎರಡನೇ ಮೊಣ್ಣಂಗೇರಿ, ಕಾಲೂರು, ಹೆಬ್ಬೆಟ್ಟಗೇರಿ ಸರಕಾರಿ ಶಾಲೆಗಳಲ್ಲಿ ಈ […]

ಜೋಡುಪಾಲ ದುರಂತ ಪ್ರದೇಶಕ್ಕೆ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಭೇಟಿ

Monday, August 20th, 2018
u-t-khader

ಮಂಗಳೂರು: ಕೊಡಗು ಜಿಲ್ಲೆಯ ಜೋಡುಪಾಲ ದುರಂತ ಪ್ರದೇಶಕ್ಕೆ ಹಾಗೂ ಸಂತ್ರಸ್ತರು ಆಶ್ರಯ ಪಡೆದಿರುವ ಸ್ಥಳಗಳಿಗೆ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಭೇಟಿ ನೀಡಿದ್ದರು. ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅವರೊಂದಿಗೆ ಮೊದಲು ಜೋಡುಪಾಲ ಗುಡ್ಡ ಕುಸಿದ ಸ್ಥಳಕ್ಕೆ ಭೇಟಿ ನೀಡಿದ್ದ ಕಂದಾಯ ಸಚಿವರು, ಘಟನಾ ಸ್ಥಳವನ್ನು ವೀಕ್ಷಿಸಿದರು. ಬಳಿಕ ಸಂತ್ರಸ್ತರು ಆಶ್ರಯ ಪಡೆದಿರುವ ಸಂಪಾಜೆ ಸರ್ಕಾರಿ ಶಾಲೆ, ಕಲ್ಲುಗುಂಡಿ ಸರ್ಕಾರಿ ಶಾಲೆ ಹಾಗೂ ಅರಂತೋಡು ತೆಕ್ಕಿಲ್ ಹಾಲ್ಗೆ ಭೇಟಿ ನೀಡಿದ್ದರು. ಸಂತ್ರಸ್ತರು ತಂಗಿರುವ ಎಲ್ಲಾ ಕೊಠಡಿಗಳಿಗೂ ಭೇಟಿ […]

ಸುಳ್ಯದಲ್ಲಿ ಭೂಕುಸಿತ ಇಬ್ಬರು ಮೃತ, ಮೂರು ಮಂದಿ ನಾಪತ್ತೆ

Saturday, August 18th, 2018
sullia

ಸುಳ್ಯ :  ಶುಕ್ರವಾರ ಸಂಭವಿಸಿದ ಭೂಕುಸಿತದಿಂದಾಗಿ ಮಾಣಿ-ಮೈಸೂರು ಹೆದ್ದಾರಿ ಮಧ್ಯೆದಲ್ಲಿರುವ ಜೋಡುಪಾಲ ಎಂಬಲ್ಲಿ ರಸ್ತೆಯು ಇಬ್ಭಾಗವಾಗಿದೆ. ಇಬ್ಬರು ಮೃತಪಟ್ಟಿದ್ದು, ಅಲ್ಲದೆ 3 ಮಂದಿ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ . ರಾಷ್ಟ್ರೀಯ ವಿಪತ್ತು ನಿಗ್ರಹ ದಳದ 26 ಮಂದಿ, 50ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ, ಗೃಹ ರಕ್ಷಕ ದಳ, ಅಗ್ನಿ ಶಾಮಕ  ಸಿಬ್ಬಂದಿ ಹಾಗೂ 100ಕ್ಕೂ ಅಧಿಕ ಸ್ವಯಂಸೇವಕರು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಭೂ ಕುಸಿತದಿಂದಾಗಿ ಮೂರು ಮನೆಗಳು ಮಳೆಯಲ್ಲಿ ಕೊಚ್ಚಿಹೋಗಿವೆ. ಮಳೆಯು ಕಾರ್ಯಚರಣೆಗೆ ಅಡ್ಡಿಪಡಿಸುತ್ತಿದ್ದು ಅಲ್ಲದೆ ಹೆಲಿಕಾಪ್ಟರ್ ಮೂಲಕವು […]