ರಾಜ್ಯ ಸರಕಾರದ ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸಿ: ಜೆ. ಆರ್. ಲೋಬೊ

Saturday, December 22nd, 2018
j-r-lobo

ಮಂಗಳೂರು: ಕರ್ನಾಟಕ ಸರಕಾರವು ಹಿಂದುಳಿದ ವರ್ಗದ ಜನರಿಗೆ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ರೂಪಿಸಿದೆ. ಅದನ್ನು ಜನತೆಗೆ ತಲುಪಿಸುವಂತಹ ಕೆಲಸವು ಕಾಂಗ್ರೆಸ್ ಹಿಂದುಳಿದ ವರ್ಗ ಘಟಕದ ಪದಾಧಿಕಾರಿಗಳ ಮೂಲಕ ಆಗಬೇಕು ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಶ್ರೀ ಜೆ. ಆರ್. ಲೋಬೊ ರವರು ತಾರೀಕು 21.12.2018 ರಂದು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ಘಟಕದ ನೂತನ ಅಧ್ಯಕ್ಷರಾದ ಶ್ರೀ ರಮಾನಂದ ಪೂಜಾರಿ ಯವರಿಗೆ ಅಧಿಕರ ಹಸ್ತಾಂತರ […]

ನೆಹರೂ ಪ್ರತಿಮೆಯ ಮುಂಭಾಗ ಮಕ್ಕಳ ದಿನಾಚರಣೆ ಆಚರಣೆ

Wednesday, November 14th, 2018
childrens-day

ಮಂಗಳೂರು: ಭಾರತ ‌ಸೇವಾದಳದ ವತಿಯಿಂದ ಭಾರತದ ಮೊದಲ ಪ್ರಧಾನಿ‌ ಜವಹರಲಾಲ್ ನೆಹರುರವರ ಜನ್ಮ ದಿನಾಚರಣೆಯನ್ನು ಇಂದು ಬೆಳಗ್ಗೆ ನಗರದ ಪಾಂಡೇಶ್ವರದಲ್ಲಿರುವ ನೆಹರೂ ಪ್ರತಿಮೆಯ ಮುಂಭಾಗ ಆಚರಿಸಲಾಯಿತು. ಈ ಸಂದರ್ಭ ನೆಹರೂ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಭಾರತ ಸೇವಾದಳದ ದ.ಕ. ಜಿಲ್ಲಾಧ್ಯಕ್ಷ ಬಶೀರ್ ಬೈಕಂಪಾಡಿ, ಇಂದು ಭಾರತ ಸೇವಾದಳದ ಪ್ರಥಮ ಅಧ್ಯಕ್ಷ ಹಾಗೂ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರುರವರ ಜನ್ಮದಿನಾಚರಣೆಯನ್ನು‌ ಆಚರಿಸಲಾಗುತ್ತಿದೆ. ಜವಹರಲಾಲ್ ನೆಹರುರವರು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು‌ ಮಾಡಿದ್ದು, ಇಂದು ನಮ್ಮ ದೇಶ […]

ಜೆ.ಆರ್.ಲೋಬೊರಿಂದ ಬಿರುಸಿನ ಮತ ಯಾಚನೆ

Monday, May 7th, 2018
j-r-lobo

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್. ಲೋಬೊ ಅವರು ಶನಿವಾರ ಹೊಯಿಗೆ ಬಝಾರ್, ಸುಭಾಶ್ ನಗರ, ಮರೋಳಿ ಪರಿಸರದಲ್ಲಿ ಬಿರುಸಿನ ಪ್ರಚಾರ ಪ್ರಚಾರ ಕೈಗೊಂಡರು. 300ಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿದ ಅವರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಜೆ.ಆರ್.ಲೋಬೊ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 20 ವರ್ಷಗಳಿಂದ ಸಾಧ್ಯವಾಗದ ರಸ್ತೆ ಅಭಿವೃದ್ಧಿಗಳು, ಚರಂಡಿ, ಫುಟ್ಪಾತ್ ನಿರ್ಮಾಣ ಕಾಮಗಾರಿಗಳು ಪ್ರಸಕ್ತ ಆರಂಭವಾಗಿದೆ. ವಾಹನಗಳ ಸಂಖ್ಯೆಗಳು […]

ಬಸ್‌ಗೆ ನುಗ್ಗಿ ಹಲ್ಲೆ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಾಸಕ ಲೋಬೋ ಆಗ್ರಹ

Thursday, February 22nd, 2018
j-r-lobo

ಮಂಗಳೂರು: ನಗರದ ಬೆಂಗರೆ ಕಸಬಾ ಹಾಗೂ ತೋಟಬೆಂಗರೆಯಲ್ಲಿ ಮಂಗಳವಾರ ರಾತ್ರಿ ಬಸ್‌ಗೆ ನುಗ್ಗಿ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಜೆ.ಆರ್.ಲೋಬೋ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ. ಬುಧವಾರ ಘಟನೆ ನಡೆದ ಈ ಎರಡು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಂಗಳವಾರ ಸಂಜೆ ಮಲ್ಪೆಯಲ್ಲಿ ನಡೆದ ಮೀನುಗಾರರ ಸಮಾವೇಶಕ್ಕೆ ಬೆಂಗ್ರೆಯಿಂದ ಐದು ಬಸ್‌ಗಳಲ್ಲಿ ಮೀನುಗಾರರು ತೆರಳಿದ್ದರು. ತಡರಾತ್ರಿ ವಾಪಸ್‌ ಬರುತ್ತಿದ್ದಾಗ ಕೊನೆಯ […]

ಕಂಕನಾಡಿ ರೈಲ್ವೆ ಸ್ಟೇಷನ್ ರಸ್ತೆ ಅಗಲೀಕರಣ ಕಾರ್ಯ ಪ್ರಗತಿಯಲ್ಲಿದೆ – ಶಾಸಕ ಜೆ.ಆರ್.ಲೋಬೊ

Monday, January 8th, 2018
J-R-Lobo

ಮಂಗಳೂರು:ಕಂಕನಾಡಿ ರೈಲ್ವೆ ಸ್ಟೇಷನ್‌ಗೆ ಹೋಗುವ ರಸ್ತೆ ಅತ್ಯಂತ ಕಿರಿದಾಗಿದ್ದು, ಸಾರ್ವಜನಿಕರಿಗೆ ಅಲ್ಲಿಗೆ ಮುಟ್ಟಲು ಬಹಳ ಕಷ್ಟದ ಪರಿಸ್ಥಿತಿ ಎದುರಾಗಿತ್ತು. ಬೆಂಗಳೂರು, ಮುಂಬಯಿ, ದೆಹಲಿ, ಉತ್ತರ ಬಾರತಕ್ಕೆ ಚಲಿಸುವ ರೈಲುಗಳು ಆ ನಿಲ್ದಾಣಕ್ಕೆ ಆಗಮಿಸುವುದರಿಂದ ಈ ರಸ್ತೆಯ ಅಭಿವೃದ್ಧಿ ಅತ್ಯಂತ ಅಗತ್ಯವಾಗಿದ್ದು, ಈಗಾಗಲೇ ಕಾರ್ಯ ಆರಂಭಿಸಲಾಗಿದೆ. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಶ್ರೀ.ಜೇ.ಆರ್ ಲೋಬೊರವರು ಇಂದು ತಾ.05-01-2018ರಂದು ಅಗಲೀಕರಣ ಕಾಮಗಾರಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ಮಾಡಿ, ಈ ರಸ್ತೆಯು ಅತೀ ಕಿರಿದಾಗಿದ್ದು, ಸಾರ್ವಜನಿಕರಿಗೆ ಪ್ರಯಾಣಿಸಲು ತೊಂದರೆಯಾಗುತ್ತಿತ್ತು. ಜನರು ಅನೇಕ […]

ವಿದ್ಯಾರ್ಥಿಗಳಿಗೆ ವಂಚನೆ ಖಂಡಿಸಿ ಎಬಿವಿಪಿಯಿಂದ ಪ್ರತಿಭಟನೆ

Saturday, December 16th, 2017
ABVP-mangaluru

ಮಂಗಳೂರು: ನಗರದ ಕೊಲಾಸೋ ಪ್ಯಾರಾಮೆಡಿಕಲ್ ಕಾಲೇಜಿನ ಸುಮಾರು 150 ವಿದ್ಯಾರ್ಥಿಗಳಿಗೆ ಸರ್ಕಾರಿ ಪ್ಯಾರಾಮೆಡಿಕಲ್ ಸೀಟು, ಹಾಸ್ಟೆಲ್ ವ್ಯವಸ್ಥೆ ಹಾಗೂ ವಿದ್ಯಾರ್ಥಿ ವೇತನ ಕೊಡಿಸುವುದಾಗಿ ನಂಬಿಸಿ 7,000ಕ್ಕೂ ಹೆಚ್ಚು ಹಣ ಪಡೆದು ವಂಚನೆ ಮಾಡಿರುವ ಪ್ರಕರಣ ಖಂಡಿಸಿ ಎಬಿವಿಪಿಯಿಂದ ಪ್ರತಿಭಟನೆ ನಡೆಸಲಾಯಿತು. ಆರೋಪಿ ಮನೋಜ್ ಪೌಲ್ ವಿರುದ್ಧ ಈಗಾಗಲೇ ದೂರು ದಾಖಲಾಗಿದ್ದು, ಆತ ತಲೆ ಮರೆಸಿಕೊಂಡಿದ್ದಾನೆ. ಪೊಲೀಸ್ ಇಲಾಖೆ ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಿ ಕಾನೂನು ರೀತಿಯಲ್ಲಿ ಕಠಿಣ ಶಿಕ್ಷೆಗೊಳಪಡಿಸಬೇಕು. ಅಲ್ಲದೆ ಬಡ-ಗ್ರಾಮೀಣ ವಿದ್ಯಾರ್ಥಿಗಳಿಂದ ವಂಚಿಸಿ ವಸೂಲಿ ಮಾಡಿರುವ ಹಣವನ್ನು […]