ಪತ್ರಕರ್ತರು ವ್ರತ್ತಿಪರ ಮೌಲ್ಯವನ್ನು ಕಾಪಾಡಿಕೊಳ್ಳುವುದು ಸವಾಲಿನ ಕಾರ್ಯ : ಡಾ. ಅಶ್ವಥ ನಾರಾಯಣ

Saturday, March 7th, 2020
journalist

ಮಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆತಿಥ್ಯದಲ್ಲಿ ಎರಡು ದಿನಗಳ ಕಾಲ  ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನ ದಲ್ಲಿ ನಡೆಯುತ್ತಿರುವ 35ನೇ ಸಮ್ಮೇಳನಕ್ಕೆ  ಚೆಂಡೆ, ವಾದ್ಯ ಘೋಷದೊಂದಿಗೆ  ಶನಿವಾರದ ಎಲ್ಲ ಪತ್ರಿಕೆಗಳು ಹಾಗೂ ಟಿವಿ ಮಾಧ್ಯಮಗಳ ಲೋಗೋಗಳನ್ನು ಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆ ಮೂಲಕ ತಂದು ವೇದಿಕೆಯ ಮುಂಬಾಗದಲ್ಲಿರಿಸಿ,  ಆ ಮೂಲಕ ಸಮ್ಮೇಳನದ ಮಹತ್ವವನ್ನು ತಿಳಿಸಲಾಯಿತು. ಬಳಿಕ ವ್ಯಂಗ್ಯ ಚಿತ್ರ ಪ್ರದರ್ಶನವನ್ನು ಉಪ ಮುಖ್ಯ ಮಂತ್ರಿ ಸಿ.ಎನ್. ಅಶ್ವತ್ಥ ನಾರಾಯಣ ಉದ್ಘಾಟಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ […]

ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡುವಂತೆ ಡಿಸಿಎಂ ಗೆ ಮನವಿ

Saturday, February 15th, 2020
dcm

ಮಡಿಕೇರಿ : ಕನಾ೯ಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಬಿ.ಎಸ್.ಜೈರಾಂ ನೇತೃತ್ವದಲ್ಲಿ ಕನಾ೯ಟಕ ಬೆಳೆಗಾರರ ಒಕ್ಕೂಟದ ನಿಯೋಗವು ರಾಜ್ಯ ಸಕಾ೯ರದ ಉಪಮುಖ್ಯಮಂತ್ರಿ ಡಾ|| ಅಶ್ವಥ ನಾರಾಯಣ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. 2017-18 ರ ಬಜೆಟ್ ನಲ್ಲಿ ಸಕಾ೯ರಿ ಭೂಮಿಯನ್ನು ಬೆಳೆಗಾರರಿಗೆ ಗುತ್ತಿಗೆ ಆಧಾರದಲ್ಲಿ ನೀಡುವುದಾಗಿ ಘೋಷಿಸಲಾಗಿತ್ತು. ಅದರಂತೆ ರೂಪುಗೊಂಡ ಕರುಡು ನಿಯಮಗಳು ಬೆಳೆಗಾರರ ಪರವಾಗಿ ಇಲ್ಲ. ಎಲ್ಲಾ ಬೆಳೆಗಾರರ ಹಿತದೃಷ್ಟಿಯಿಂದ ಕನಾ೯ಟಕ ಬೆಳೆಗಾರರ ಒಕ್ಕೂಟದ ಸಲಹೆಗಳನ್ನು ಪರಿಗಣಿಸಿ, ಸಕಾ೯ರಿ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ಕೊಡಗು, ಚಿಕ್ಕಮಗಳೂರು, […]