ಅನುಶ್ರೀ ಬೆಂಗಳೂರಿನಲ್ಲಿ ಮಾದಕ ವಸ್ತುಗಳನ್ನು ಸೇವಿಸಿ, ಡ್ರಿಂಕ್ಸ್ ಪಾರ್ಟಿ ಮಾಡಿದ್ದರು, ಚಾರ್ಜ್ ಶೀಟ್‌

Thursday, September 9th, 2021
Anushree

ಮಂಗಳೂರು  : ಡ್ರಗ್ಸ್ ಕೇಸ್‌ಗೆ ಸಂಬಂಧಿಸಿದಂತೆ  ಸಿಸಿಬಿ ಪೊಲೀಸರ ವಿಚಾರಣೆ ಎದುರಿಸಿದ್ದ ಖ್ಯಾತ ನಿರೂಪಕಿ ಅನುಶ್ರೀ ಹೆಸರು ಇದೀಗ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖವಾಗಿದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಾಕಿರುವ ಚಾರ್ಜ್ ಶೀಟ್‌ನಲ್ಲಿ ಅನುಶ್ರೀ ಹೆಸರು ಇದೆ. ‘’ಅನುಶ್ರೀ ಡ್ರಗ್ಸ್ ಸೇವಿಸುತ್ತಿದ್ದರು’’ ಎಂದು ಡ್ರಗ್ಸ್ ಪ್ರಕರಣದ ಆರೋಪಿ ಕಿಶೋರ್ ಅಮನ್ ಶೆಟ್ಟಿ ಹೇಳಿಕೆ ನೀಡಿರುವುದು ಚಾರ್ಜ್ ಶೀಟ್‌ನಲ್ಲಿದೆ. ನಾನು ಸುಮಾರು 2007-08ರ ಸಮಯದಲ್ಲಿ ಬೆಂಗಳೂರಿನ ಒಂದು ಡ್ಯಾನ್ಸ್ ಅಕಾಡೆಮಿಯಲ್ಲಿದ್ದಾಗ ಟಿವಿ ಆಂಕರ್ ಆಗಿರುವ ಅನುಶ್ರೀ ಅವರಿಗೆ ಡ್ಯಾನ್ಸ್ […]

ಡ್ರಗ್ಸ್‌ ಪ್ರಕರಣ ನಿರೂಪಕಿ ಅನುಶ್ರೀಗೆ ಮಂಗಳೂರು ಸಿಸಿಬಿ ಪೊಲೀಸರ ನೋಟಿಸ್‌

Thursday, September 24th, 2020
Anushree

ಮಂಗಳೂರು : ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ  ಡ್ಯಾನ್ಸರ್‌ ಕಿಶೋರ್ ಶೆಟ್ಟಿಯನ್ನು  ವಿಚಾರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರು ನಿರೂಪಕಿ, ನಟಿ ಅನುಶ್ರೀ ಅವರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. ಡ್ರಗ್ಸ್ ವಿಚಾರದಲ್ಲಿ ತನಿಖೆಗಾಗಿ ಮಂಗಳೂರು 4- 5 ಸಿಸಿಬಿ ಪೊಲೀಸರ ತಂಡ ಗುರುವಾರ ಬೆಂಗಳೂರಿಗೆ ತೆರಳಿತ್ತು. ವಿಚಾರಣೆಯ ಸಂದರ್ಭ ಕಿಶೋರ್‌ ಅಮನ್‌ ಶೆಟ್ಟಿ ಅವರ ಆಪ್ತ ಸ್ನೇಹಿತ ತರುಣ್‌ ಅನುಶ್ರೀ ಅವರೊಂದಿಗೆ ಪಾರ್ಟಿ ಮಾಡಿದ್ದ ಎನ್ನುವ ವಿಚಾರವನ್ನು ತಿಳಿಸಿದ್ದು, ಅನುಶ್ರೀ ಅವರಿಗೆ ಸಿಸಿಬಿ ನೋಟಿಸ್‌ ಜಾರಿ ಮಾಡಿದೆ ಎನ್ನಲಾಗಿದೆ. “ಪ್ರತೀಕ್ ಶೆಟ್ಟಿ, ಕಿಶೋರ್ […]

ಡ್ರಗ್ಸ್ ಪ್ರಕರಣ : ನಟಿ ಸಂಜನಾ ಗಲ್ರಾನಿಯನ್ನು ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ ಸಿಸಿಬಿ ಪೊಲೀಸರು

Wednesday, September 16th, 2020
sanjana

ಬೆಂಗಳೂರು : ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ  ನಟಿ ಸಂಜನಾ ಗಲ್ರಾನಿ ಇಂದು ಪರಪ್ಪನ ಅಗ್ರಹಾರ ಜೈಲಿನೊಳಗೆ ಸೇರಿದ್ದಾರೆ. ಅಲ್ಲಿ  ಹೋಗುವ ವೇಳೆಯೂ  ಗೇಟ್  ಚಿಕ್ಕದಾಯಿತು ಎಂದು  ಹೇಳಿದ್ದಾರೆ. ಸಂಜನಾ, ಜೈಲಿಗೆ ಎಂಟ್ರಿ ಕೊಡುವಾಗ ಇಷ್ಟು ಚಿಕ್ಕ ಗೇಟ್‍ನಲ್ಲಿ ನಾನು ಹೋಗಲ್ಲ ಎಂದು ಹಠಕ್ಕೆ ಬಿದ್ದಿದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿ ಒಳಗೆ ಹೋಗಿ ಎಂದು ಹೇಳಿದ್ದಾರೆ. ನಂತರ ಒಂದು ನಿಮಿಷದ ಬಳಿಕ ಸಂಜನಾ ಒಳಗೆ ಹೋಗಿದ್ದಾರೆ. ಸಂಜನಾ ಜೊತೆಗೆ ವೀರೇನ್ ಖನ್ನಾ ಮತ್ತು ರವಿಶಂಕರ್ ನನ್ನೂ ಕೂಡ ಸಿಸಿಬಿ […]