ಭೂಗತ ಪಾತಕಿ ಛೋಟಾ ರಾಜನ್ ವಿರುದ್ಧ ನಾಲ್ಕು ಪ್ರಕರಣಗಳ ತನಿಖೆ
Thursday, January 23rd, 2020ನವದೆಹಲಿ : ಭೂಗತ ಪಾತಕಿ ಛೋಟಾ ರಾಜನ್ ಅವರ ಪಾತ್ರವಿದೆಯೆನ್ನಲಾದ, ನಾಲ್ಕು ಪ್ರಕರಣಗಳ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ. 1997ರಲ್ಲಿ ಪತ್ರಕರ್ತ ಬಲ್ಜೀತ್ ಶೆರ್ಸಿಂಗ್ ಪರ್ಮಾರ್ ಕೊಲೆಯತ್ನವೂ ಇದರಲ್ಲಿದೆ. ಸದ್ಯ ಛೋಟಾ ರಾಜನ್ ಬಂಧನದಲ್ಲಿ ಇದ್ದಾನೆ. 2015ರಲ್ಲಿ ಆತ ನನ್ನು ಇಂಡೋನೇಷ್ಯಾದಲ್ಲಿ ಬಂಧಿಸಿ ಭಾರತಕ್ಕೆ ಗಡೀಪಾರು ಮಾಡಲಾಗಿತ್ತು.1995ರಲ್ಲಿ ಮುಂಬಯಿ ಉದ್ಯಮಿ ದೇವಾಂಗ್ ಬಿಪಿನ್ ಪಾರೀಖ್‌ರಿಂದ 20 ಲಕ್ಷ ರೂ., 1998 ರಲ್ಲಿ 25 ಲಕ್ಷ ರೂ.ವಸೂಲು ಮಾಡಿದ ಪ್ರಕರಣವನ್ನು ಕೈಗೆತ್ತಿಕೊಂಡಿದೆ.