ಸರ್ಕಾರಿ ಬಸ್ಗಳ ಪ್ರಯಾಣ ದರ ಏರಿಕೆ ಸದ್ಯಕ್ಕಿಲ್ಲ: ತಮ್ಮಣ್ಣ
Wednesday, July 11th, 2018ಬೆಂಗಳೂರು: ಪ್ರಯಾಣಿಕರಿಗೆ ಹೊರೆಯಾಗಬಾರದೆಂಬ ದೃಷ್ಟಿಯಿಂದ ಬಿಎಂಟಿಸಿ ಬಸ್ ದರ ಏರಿಕೆ ಪ್ರಸ್ತಾಪ ಸದ್ಯಕ್ಕಿಲ್ಲ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಸ್ಪಷ್ಟಪಡಿಸಿದ್ದಾರೆ. ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೀಸೆಲ್ ದರ ಹೆಚ್ಚಳವಾದ್ದರಿಂದ ಬಿಎಂಟಿಸಿ ಮೇಲೆ ಕೆಲ ಮಟ್ಟಿಗೆ ಆರ್ಥಿಕ ಹೊರೆ ಉಂಟಾಗಿದೆ ಆದಾಗ್ಯೂ ಕೂಡ ಪ್ರಯಾಣಿಕರಿಗೆ ಭಾರವಾಗದಿರಲಿ ಎನ್ನುವ ಕಾರಣಕ್ಕಾಗಿ ಸಧ್ಯಕ್ಕೆ ಬಿಎಂಟಿಸಿ ದರವನ್ನು ಹೆಚ್ಚಿಸುವ ಯೋಚನೆ ಇಲ್ಲ ಎಂದು ಹೇಳಿದರು. ಸದ್ಯಕ್ಕೆ ಬೆಂಗಳೂರಲ್ಲಿ ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತ ಬಸ್ಪಾಸ್ ನೀಡುವ ಸಿದ್ದರಾಮಯ್ಯ […]