ಗಾಂಧಿಯನ್ನೇ ಹತ್ಯೆ ಮಾಡಿದ್ದೇವೆ ಎಂಬ ಶಬ್ದ ಬಳಕೆ ಮಾಡಿದ್ದಕ್ಕೆ ನಾನು ಕ್ಷಮೆ ಕೇಳುತ್ತೇನೆ : ಧರ್ಮೇಂದ್ರ

Sunday, September 19th, 2021
Dharmendra

ಮಂಗಳೂರು : “ನಾವು ಗಾಂಧಿಯನ್ನೇ ಬಿಟ್ಟಿಲ್ಲ ಗಾಂಧಿಯನ್ನೇ ಹತ್ಯೆ ಮಾಡಿದ್ದೇವೆ. ಹಿಂದೂಗಳ ಮೇಲೆ ದಾಳಿ ಆದಾಗ ಗಾಂಧಿಯನ್ನೇ ಬಿಟ್ಟಿಲ್ಲ. ಇನ್ನು ನಿಮ್ಮನ್ನು ಬಿಡುತ್ತೇವಾ?. ಬಿಜೆಪಿ ಒಂದು ಬೆನ್ನುಮೂಳೆ ಇಲ್ಲದ ಸರ್ಕಾರ. ಇವರಿಗಿಂತ ತಾಲಿಬಾನ್‌‌ಗಳು ವಾಸಿ. ಇವರ ಸರ್ಕಾರ ತಾಲಿಬಾನ್‌‌ಗಳಿಗಿಂತ ಕೀಳು” ಎಂದಿದ್ದ  ಅಖಿಲ ಭಾರತೀಯ ಹಿಂದೂ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ  ಕ್ಷಮೆಯಾಚಿಸಿದ್ದಾರೆ. “ಸುದ್ದಿಗೋಷ್ಠಿಯಲ್ಲಿ ಗಾಂಧೀಜಿ ಅವರ ಹಿಂದುತ್ವದ ವಿರೋಧ ನೀತಿ ಬಗ್ಗೆ ನಾನು ಮಾತನಾಡಿದ್ದೇನೆ. ನಾನು ಯಾರಿಗೂ ಕೂಡಾ ಬೆದರಿಕೆ ಹಾಕಿಲ್ಲ” ಎಂದಿದ್ದಾರೆ. “ನನ್ನ ಹೇಳಿಕೆಯಲ್ಲಿ […]

ನಗರದಲ್ಲಿ ತಾಲಿಬಾನ್ ಪರ ಗೋಡೆಬರಹ, ಮತ್ತೋರ್ವ ಆರೋಪಿ ಸೆರೆ

Wednesday, December 9th, 2020
Terorist

ಮಂಗಳೂರು : ನಗರದಲ್ಲಿ ತಾಲಿಬಾನ್ ಉಗ್ರರ ಪರ ಗೋಡೆಬರಹ ಬರೆದು ಆತಂಕ ಮೂಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಆರೋಪಿಯನ್ನು ಮಂಗಳೂರು ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳ ಸಂಬಂಧಿ, ತೀರ್ಥಹಳ್ಳಿಯ ಸಾದತ್ ಎಂಬಾತ ಪೊಲೀಸ್ ವಶದಲ್ಲಿರುವ ಆರೋಪಿ ಎಂದು ತಿಳಿದುಬಂದಿದೆ. ವಶದಲ್ಲಿರುವ ಆರೋಪಿಯು ಪ್ರಕರಣದ ಮೊದಲ ಆರೋಪಿ ಮುಹಮ್ಮದ್ ಶಾರೀಕ್‌ನ ಸಂಬಂಧಿ ಎನ್ನಲಾಗಿದೆ. ಪ್ರಕರಣದಲ್ಲಿ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದ್ದು, ಮೂರನೇ ಆರೋಪಿಯನ್ನು ತೀರ್ಥಹಳ್ಳಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಾಲಿಬಾನಿಗಳ ಬಿಡುಗಡೆಗೆ ಅಫ್ಘನ್ ಅಧ್ಯಕ್ಷ ಅಶ್ರಫ್ ನಕಾರ

Monday, March 2nd, 2020
kabul

ಕಾಬೂಲ್ : ಅಫ್ಘಾನಿಸ್ತಾನ ಸರ್ಕಾರದ ಬಂಧನದಲ್ಲಿರುವ ಐದು ಸಾವಿರ ತಾಲಿಬಾನಿಗಳನ್ನು ಬಿಡುಗಡೆ ಮಾಡಬೇಕೆಂಬ ಬೇಡಿಕೆಯನ್ನು ಆಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಭಾನುವಾರ ತಿರಸ್ಕರಿಸಿದ್ದಾರೆ. ಅಫ್ಘನ್ ಸರ್ಕಾರ ಮತ್ತು ಜನರೊಂದಿಗೆ ಮಾತುಕತೆ ನಡೆಸಬೇಕಾದರೆ ತನ್ನವರನ್ನು ಬಿಡುಗಡೆ ಮಾಡಬೇಕೆಂಬುದು ತಾಲಿಬಾನ್ ಷರತ್ತಾಗಿದೆ. ಆದರೆ, ಈ ಒತ್ತಾಯಕ್ಕೆ ಸೊಪ್ಪು ಹಾಕದಿರಲು ಸರ್ಕಾರ ನಿರ್ಧರಿಸಿರುವುದರಿಂದ ಶನಿವಾರವಷ್ಟೆ ಸಹಿ ಹಾಕಲಾಗಿರುವ ಒಪ್ಪಂದಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಜೈಲಿನಲ್ಲಿರುವ ತಾಲಿಬಾನಿಗಳ ಬಿಡುಗಡೆಗೆ ಪ್ರತಿಯಾಗಿ ತಾಲಿಬಾನ್ ವಶದಲ್ಲಿರುವ ಅಫ್ಘನ್ ಸರ್ಕಾರದ ಸುಮಾರು 1 ಸಾವಿರ ಬಂಧಿಗಳನ್ನು ಬಿಡುಗಡೆ […]